ಮೈಸೂರು

ಪಕ್ಷ ಸಂಘಟನೆಗೆ ಗ್ರಾಮ ಸಂಚಾರ

Published On :

ಕ.ಪ್ರ.ವಾರ್ತೆ   ಹುಣಸೂರು   ಅ. 29
ತಾಲೂಕಿನಲ್ಲಿ ಪಕ್ಷದ ಬಲವರ್ಧನೆಗಾಗಿ ನ.6ರಿಂದ ಮೂರು ದಿನಗಳ ಕಾಲ ಪಕ್ಷದ ಮುಖಂಡರು ಗ್ರಾಮ ಸಂಚಾರ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ಪಟ್ಟಣದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಕ್ಷಕ್ಕೆ ಎರಡು ಬಾರಿ ಶಾಸಕ ಸ್ಥಾನ ಲಭಿಸಿದೆ.
ತಾಲೂಕಿನ ನೇತಾರ ಒಂದು ಬಾರಿ ಲೋಕಸಭಾ ಸದಸ್ಯರೂ ಆಗಿದ್ದಾರೆ. ಆದರೆ ಇಂದು ಹುಣಸೂರಿನಲ್ಲಿ ಬಿಜೆಪಿ ಸಂಘಟನೆ ತೃಪ್ತಿ ತಂದಿಲ್ಲ. ಈ ಹಿಂದಿನ ವೈಭವವನ್ನು ಮರಳಿ ತರುವ ಆ ಮೂಲಕ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಸ್ವಾತಂತ್ರ್ಯ ನಂತರ ಅತಿ ಹೆಚ್ಚು ವರ್ಷ ದೇಶವನ್ನಾಳಿದ ಕಾಂಗ್ರೆಸ್ ವಂಶಪಾರಂಪರ್ಯ ಆಡಳಿತ ದೇಶಕ್ಕೆ ದಟ್ಟ ದರಿದ್ರತನವನ್ನು ನೀಡಿದೆ. ವಾಜಪೇಯಿ ಪ್ರಧಾನಿ ಹುದ್ದೆ ತೊರೆಯುವಾಗ ದೇಶದ ಜಿಡಿಪಿ ಬೆಳವಣಿಗೆ ಶೇ.8.4 ಇತ್ತು. ಆದರೆ ಇಂದು ಕೇವಲ ಶೇ.2.8 ಆಗಿದೆ. ದೇಶದಲ್ಲಿ ದಲ್ಲಾಳಿಗಳ ಸಂಖ್ಯೆ ಹೆಚ್ಚಿದೆಯೆಂದು ಕೇಂದ್ರ ಮಂತ್ರಿಗಳು ಹೇಳುತ್ತಾರೆ. ಆದರೆ ಕೇಂದ್ರದ ಮಂತ್ರಿಮಂಡಲದಲ್ಲಿ ದಲ್ಲಾಳಿಗಳ ಸಂಖ್ಯೆ ಹೆಚ್ಚಿದೆಯಷ್ಟೆ. ದೇಶದ ಗಡಿ ಕಾಯುತ್ತಿರುವ ಸೈನಿಕರ ಮಾರಣಹೋಮವನ್ನು ಪಾಕಿಸ್ತಾನ ನಡೆಸುತ್ತಿದ್ದರೂ ಹೇಡಿಯಂತೆ ನಮ್ಮ ಪ್ರಧಾನಿ ಮೌನ ವಹಿಸಿದ್ದಾರೆ ಜರಿದರು.
ಸ್ವಯಂಕೃತ ಅಪರಾಧ: ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಮಾತನಾಡಿ, ಪಕ್ಷದ ಮುಖಂಡರು ಕೈಗೊಂಡ ಸ್ವಯಂಕೃತ ಅಪರಾಧದಿಂದಾಗಿ ತಾಲೂಕಿನಲ್ಲಿ ಪಕ್ಷ ಹೀನಾಯ ಸ್ಥಿತಿ ತಲುಪಿದೆ. ಹೊರಗಿನಿಂದ ಬಂದವರು ಪಕ್ಷಕ್ಕೆ ದ್ರೋಹವೆಸಗಿ ಹೋದರು. ಆದರೆ ನಿರಾಶರಾಗಬೇಕಿಲ್ಲ. ನಾವೆಲ್ಲರೂ ಒಟ್ಟಾಗಿ ಪಕ್ಷದ ಸಂಘಟನೆಗಾಗಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಕಾರ್ಯಕರ್ತರನ್ನು ಕರೆತರೋಣ. ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡೋಣ ಎಂದು ಕರೆ ನೀಡಿದರು.
ಮಾಜಿ ಸಚಿವ ಅಪ್ಪಚ್ಚು ರಂಜನ್, ತಾ. ಅಧ್ಯಕ್ಷ ಹನಗೋಡು ಮಂಜುನಾಥ್, ವಿಭಾಗೀಯ ಸಂಚಾಲಕ ಮೈ.ವಿ. ರವಿಶಂಕರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷೆ ಕಮಲಮ್ಮ, ವಿಜಯಕುಮಾರಿ, ಮಹದೇವ್ ಹೆಗ್ಗಡೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.