ಮೈಸೂರು

ಹಾಲು ಸುರಿಸಿದ ಬೇವಿನ ಮರ

Published On :

ನಂಜನಗೂಡು: ಚಾಮರಾಜನಗರ ರಸ್ತೆಯ ಜೆಮಿನಿ ಕಾರ್ಖಾನೆ ಸಮೀಪ ರೇಲ್ವೆ ಹಳಿ ಪಕ್ಕದ ಜಮೀನೊಂದರಲ್ಲಿನ ಬೇವಿನ ಮರದಲ್ಲಿ ಹಾಲು ಸೋರುತ್ತಿದೆ. ವಿಷಯ ತಳಿದ ನೂರಾರು ಜನರು ಈ ವಿಸ್ಮಯ ನೋಡಲು ಕಾತುರದಿಂದ ಆಗಮಿಸುತ್ತಿದ್ದಾರೆ. ವಿದ್ಯಾಪೀಠದ ಹಿಂಭಾಗದಲ್ಲಿರುವ ವೀರೇದೇವನಪುರ ಗ್ರಾಮದ ಗುರುಸಿದ್ದಯ್ಯ ಎಂಬವರಿಗೆ ಸೇರಿದ ಜಮೀನಿನಲ್ಲಿ ಇರುವ ಬೇವಿನ ಮರದಲ್ಲಿ ಕಳೆದ ಎರಡು ದಿನಗಳಿಂದ ಈ ಆಶ್ಚರ್ಯಕರ ಘಟನೆ ನಡೆದಿದೆ. ಭೂಮಿ ಮಟ್ಟಕ್ಕೆ ಹಾಲು ಹರಿಯುತ್ತಿರುವುದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮಹಿಳೆಯರು ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿರುವುದು ಮಾಮೂಲಾಗಿದೆ. 5ರಿಂದ 6 ವರ್ಷ ಪ್ರಾಯದ ಮರದಲ್ಲಿ ಕಂಡುಬರುತ್ತಿದೆ. ಗೋಳೂರು ಗ್ರಾಮದವರ ಸೌಧೆ ತರಲು ತೆರಳಿದಾಗ ಈ ದೃಶ್ಯ ಕಣ್ಣಿಗೆ ಬಿತ್ತು.


ವ್ಯಾನ್ಗೆ ಟಿಪ್ಪರ್ ಡಿಕ್ಕಿ; ಐವರಿಗೆ ಗಂಭೀರ ಗಾಯ

ಹುಣಸೂರು: ಟಿಪ್ಪರ್ ಲಾರಿಯೊಂದು ಮಾರುತಿ ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೆ ಕುಟುಂಬದ ಐವರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಜಡಗನಕೊಪ್ಪಲು ಗೇಟ್ ಬಳಿ ಸಂಭವಿಸಿದೆ. ವ್ಯಾನಲಿದ್ದ ಸೋಮವಾರಪೇಟೆ ತಾಲೂಕಿನ ಎಡವಾರೆ ಗ್ರಾಮದ ರಮಣ ರೈ, ಅವರ ಪತ್ನಿ ಹೇಮಾವತಿ, ಪುತ್ರರಾದ ಪ್ರಸಾದ್, ಪ್ರವೀಣ್, ಸೊಸೆ ವೀಣಾ ತೀವ್ರ ಗಾಯಗೊಂಡವರು. ಈ ಪೈಕಿ ವ್ಯಾನ್ ಚಾಲನೆ ಮಾಡುತ್ತಿದ್ದ ಪ್ರಸಾದ್ ಸ್ಥಿತಿ ಗಂಭೀರವಾಗಿದೆ. ವ್ಯಾನ್ನಲ್ಲಿದ್ದ ಎಲ್ಲ ಗಾಯಾಳುಗಳನ್ನು ದಾರಿಹೋಕರು ಹಾಗೂ ಬಿಳಿಕೆರೆ ಮತ್ತು ಆಸ್ಪತ್ರೆಗೆ ದಾಖಲಿಸಿದರು.
50 ಸಾವಿರ ನಾಪತ್ತೆ: ಆಸ್ಪತ್ರೆ ಖರ್ಚಿಗಾಗಿ ಕೊಂಡೊಯ್ಯುತ್ತಿದ್ದ 50 ಸಾವಿರ ಹಾಗೂ ಆಸ್ಪತ್ರೆ ದಾಖಲಾತಿಗಳನ್ನು ಕೆಲವರು ಅಪಹರಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.