ಮೈಸೂರು

ದಸರಾ ಆನೆಗಳ ತಾಲೀಮು ಆರಂಭ

Published On :

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮೊದಲ ತಂಡದ ಆರು ಆನೆಗಳು ಭಾನುವಾರದಿಂದ ತಾಲೀಮು ಆರಂಭಿಸಿದವು. ಅಂಬಾರಿ ಆನೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ ಮತ್ತು ಸರಳ ಆನೆಗಳು ಅರಮನೆಯಿಂದ ಬೆಳಗ್ಗೆ ವಾಕಿಂಗ್ ಹೊರಟು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತದವರೆಗೆ ತಲುಪಿ ಅದೇ ಮಾರ್ಗವಾಗಿ ವಾಪಸ್ ಅರಮನೆ ತಲುಪಿದವು. ಸಂಜೆ ಅರಮನೆಯಿಂದ ಆಯುರ್ವೇದ ವೃತ್ತದವರೆಗೆ ವಾಕಿಂಗ್ ಹೋಗಿ ಬಂದವು. ದಸರಾ ಗಜಪಡೆಯ ಶ್ರೀರಾಮ, ಹರ್ಷ, ವಿಕ್ರಮ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ, ವಿಜಯ, ಪ್ರಶಾಂತ ಮತ್ತು ಗೋಪಿ ಆನೆಗಳು 2ನೇ ತಂಡದಲ್ಲಿ ಆಗಮಿಸಲಿವೆ ಎಂದು ಆನೆ ವೈದ್ಯ ಡಾ. ನಾಗರಾಜು ತಿಳಿಸಿದ್ದಾರೆ.

ಮೊಬೈಲ್ ಕದಿಯುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಮೈಸೂರು; ನಗರದ ಲಷ್ಕರ್ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, 45 ಸಾವಿರ ಮೌಲ್ಯದ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜೀವ್‌ನಗರ ನಿವಾಸಿಗಳಾದ ರಿಜ್ವಾನ್ ಪಾಷ (21) ಮತ್ತು ಖಾಸೀಫ್ ಉಲ್ಲಾ ಖಾನ್ (20) ಬಂಧಿತ ಆರೋಪಿಗಳು. ಇವರು ಕೆ.ಟಿ. ರಸ್ತೆಯ ಗ್ರೀನ್ ಕಾಂಪ್ಲೆಕ್ಸ್ ಬಳಿ ಮೊಬೈಲ್ ಮಾರಾಟಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರನ್ನು ಹಿಡಿದು ವಿಚಾರಣೆಗೊಳಪಡಿಸಿದರು. ಸರ್ಕಾರಿ ಅತಿಥಿಗೃಹ ಸಿಗ್ನಲ್ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಮೊಬೈಲ್‌ನಲ್ಲಿ ಮಾತಾನಾಡುತ್ತಿದ್ದ ವ್ಯಕ್ತಿಯಿಂದ ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾಗಿ ತಿಳಿಸಿದ್ದು, ಬಂಧಿತರಿಂದ 45 ಸಾವಿರ ಮೌಲ್ಯದ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಲಷ್ಕರ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಭಾಕರ್ ರಾವ್ ಸಿಂಧೆ, ಎಸ್‌ಐ ಯೋಗಾಂಜನಪ್ಪ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.

ಜೂಜಾಟ ಆಡುತ್ತಿದ್ದ 8 ಮಂದಿ ಬಂಧನ
ಮೈಸೂರು: ಕುವೆಂಪುನಗರ ಠಾಣೆ ಪೊಲೀಸರು ಶನಿವಾರ ಮನೆಯೊಂದರ ಮೇಲೆ ದಾಳಿ ನಡೆಸಿ ಜೂಜಾಡುತ್ತಿದ್ದ 8 ಮಂದಿಯನ್ನು ಬಂಧಿಸಿ, 39,660 ಹಾಗೂ 3 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಕಡಕೊಳದ ರವಿ (36), ಮೇಟಗಳ್ಳಿಯ ಸುಬ್ರಮಣಿ (42), ಕೃಷ್ಣಮೂರ್ತಿಪುರಂನ ನಾಗರಾಜು (43), ಹೊಸಕೇರಿಯ ಕಣ್ಣನ್ (35), ನಂಜುಮಳಿಗೆಯ ಆನಂದ್ (39), ರಾಮಕೃಷ್ಣನಗರದ ಅಶೋಕ್ (31), ಕೆ.ಆರ್. ವನಂ ಸಂಪತ್‌ಕುಮಾರ್ (42) ಮತ್ತು ಸರಸ್ವತಿಪುರಂನ ಸಂದೀಪ್ ಅ. ಬಂಟಿ (30) ಬಂಧಿತರು. ಇವರು ರಾಮಕೃಷ್ಣನಗರದ ಐ ಬ್ಲಾಕ್‌ನ 2ನೇ ಮುಖ್ಯ ರಸ್ತೆಯಲ್ಲಿರುವ ಮನೆ ನಂ.439 ರಲ್ಲಿ ಜೂಜಾಡುತ್ತಿದ್ದಾಗ ಕುವೆಂಪುನಗರ ಠಾಣೆಯ ಇನ್ಸ್‌ಪೆಕ್ಟರ್ ಕೆ.ಎನ್. ಯಶವಂತಕುಮಾರ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.