ಮೈಸೂರು

ಎಂಡಿಎ ಜಾಗ ಪರಿಶೀಲನೆ

Published On :

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ನಾಚನಹಳ್ಳಿ ಕುಪ್ಪಲೂರು 3ನೇ ಹಂತ ಬಡಾವಣೆಯ ಸರ್ವೇ ನಂ. 34, 39,2 ರಲ್ಲಿ ಸುಮಾರು 5 ಕೋಟಿ ಮೌಲ್ಯದ 1.39 ಎಕರೆ ಜಾಗವನ್ನು ಆಯುಕ್ತ ಎಸ್. ಪಾಲಯ್ಯ ಪರಿಶೀಲಿಸಿದರು. ಶ್ರೀರಾಂಪುರ ಬಡಾವಣೆಯ ಮಧುವನ ಉದ್ಯಾನವನ, ಆಟೋನಗರ, ಜೆಎಸ್ಎಸ್ ಆಸ್ಪತ್ರೆಯ ಎದುರು ಮಳೆ ನೀರಿನ ಚರಂಡಿ ಹಾಗೂ ಜೆಎಲ್ಬಿ ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ಸಹ ಪರಿಶೀಲಿಸಿದರು. ಇದೇ ವೇಳೆ ಅಧೀಕ್ಷಕ ಎಂಜಿನಿಯರ್ ಶಿವಕುಮಾರ್, ಕಾರ್ಯಪಾಲಕ ಎಂಜಿನಿಯರ್ ಎಸ್. ವೀರಭದ್ರಯ್ಯ, ಬಿ.ಎನ್. ಪ್ರಭಾಕರ್, ನಗರ ಯೋಜನಾ ಸದಸ್ಯ ಶಶಿಕುಮಾರ್, ವಲಯಾಧಿಕಾರಿ ಭಾಸ್ಕರ್ ಇದ್ದರು.
ಬೆಟ್ಸೂರಮಠ ಅಧಿಕಾರ ಸ್ವೀಕಾರ
ಮೈಸೂರು: ಪ್ರಾಚ್ಯವಸ್ತು,ಸಂಗ್ರಹಾಲಯಗಳು, ಪರಂಪರೆ ಇಲಾಖೆಯ ಆಯುಕ್ತರಾಗಿ ಡಾ.ಸಿ.ಜಿ. ಬೆಟ್ಸೂರಮಠ ಸೋಮವಾರ ಅಧಿಕಾರ ವಹಿಸಿಕೊಂಡರು.  ಸದರಿ ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ಯಾವುದೇ ಪೂರಕ ಮಾಹಿತಿ ನೀಡಲು ಆಯಕ್ತರು, ಪ್ರಾಚ್ಯವಸ್ತು, ಸಂಗ್ರಹಾಹಲಯಗಳು ಮತ್ತು ಪರಂಪರೆ ಇಲಾಖೆ, ದಸರಾ ವಸ್ತುಪ್ರದರ್ಶನ ಆವರಣ, ಮೈಸೂರು. ದೂ. 0821- 2424673, ಫ್ಯಾಕ್ಸ್- 0821- 2424665, ಇ-ಮೇಲ್ ್ಛ್ಟಟಟ್ಝಡಡ್ಝ್ಟಟಿಜ್ಠ್ಞಛ್ಠಟಿಛಡಿಛ್ಞಛಝ್ಠ್ಛಛಜ್ಟಟ್ಟ್ಜಣ.್ಜ್ಟಢ.್ಝಟಿ, ್ಛ್ಟಟಟ್ಠಛಝಣಝ್ಟ್ಟ.್ಝಟಿ ಸಂಪರ್ಕಿಸುವಂತೆ ಕೋರಿದ್ದಾರೆ.
ಇಂದು ದಸಂಸ ರ್ಯಾಲಿ
ಮೈಸೂರು: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸೆ. 4ರ ಬೆಳಗ್ಗೆ 10ಕ್ಕೆ ನ್ಯಾಯ ಸಂಕಲ್ಪ ರ್ಯಾಲಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷ ಬೆಳ್ತೂರು ಮಹದೇವ ತಿಳಿಸಿದ್ದಾರೆ.
ಸಮಾರೋಪ
ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಶ್ರಾವಣ ಮಾಸದ ಪೂಜಾನುಷ್ಠಾನ ಹಾಗೂ ಪ್ರವಚನದ ಸಮಾರೋಪ ಸಮಾರಂಭವು ಸೆ. 5ರ ಬೆಳಗ್ಗೆ 11.30ಕ್ಕೆ ನಡೆಯಲಿದೆ.
ದೇವರನಾಮ
ಮೈಸೂರು: ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ಸೆ. 5ರ ಸಂಜೆ 7.30ಕ್ಕೆ ಶಶಿಕಲಾ ಚಂದ್ರಶೇಖರ್ ಅವರು ದೇವರನಾಮ ಗಾಯನ ಕಛೇರಿ ನಡೆಸಿಕೊಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.