ಮೈಸೂರು

ವಿಕಲ ವಿಕಾಸ ವಿದ್ಯಾ ಪುರಸ್ಕಾರ

Published On :

ಮೈಸೂರು: ವಿಕಲ ವಿಕಾಸ ಸಂಸ್ಥೆಯು ವಿಕಲ ವಿಕಾಸ ವಿದ್ಯಾ ಪುರಸ್ಕಾರ ನೀಡಲು ಕಳೆದ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಅಂಗವಿಕಲರು, ಬುದ್ಧಿಮಾಂದ್ಯರು, ಶ್ರವಣ ದೋಷವುಳ್ಳವರು ಅರ್ಜಿ ಸಲ್ಲಿಸಬಹುದು. ತಮ್ಮ ಅಂಕಪಟ್ಟಿಯ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸೆ.14 ರೊಳಗೆ ವಿಕಲ ವಿಕಾಸ ಸಂಸ್ಥೆ, ನಂ.45, ಮೊದಲನೇ ಮಹಡಿ, ಎವಿಎನ್ಎಸ್ ಮಾರುಕಟ್ಟೆ, ಹಳೆಯ ವಿಜಯ ಬ್ಯಾಂಕ್ ಕಟ್ಟಡ, ದೇವರಾಜ ಅರಸು ರಸ್ತೆ, ಕೆ.ಆರ್. ವೃತ್ತ, ಮೈಸೂರು- 570 001. ಇಲ್ಲಿಗೆ ಸಲ್ಲಿಸುವಂತೆ ಕೋರಲಾಗಿದೆ. ಮೊ. 98868 29899 ಸಂಪರ್ಕಿಸಬಹುದು.
ಪ್ರೇಮಿಗಳನ್ನು ಸುಲಿಗೆ ಮಾಡುತ್ತಿದ್ದವನ ಸೆರೆ
ಮೈಸೂರು: ಚಾಮುಂಡಿ ಬೆಟ್ಟಕ್ಕೆ ತೆರಳುವ ಪ್ರೇಮಿಗಳಿಂದ ತಾನು ಪೊಲೀಸ್ ಎಂದು ಬೆದರಿಸಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಜೀವನಗರ ನಿವಾಸಿ ಎಂ.ರವಿಕುಮಾರ್ ರಾವ್ (26) ಬಂಧಿತ ಆರೋಪಿ. ಈತನನ್ನು ಬಂಧಿಸಿ, 30 ಸಾವಿರ ಮೌಲ್ಯದ ಚಿನ್ನದ ಸರ, 500 ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಲ್ಸರ್ ಬೈಕ್ನಲ್ಲಿ ಬಂದು ತಾನು ಪೊಲೀಸ್ ಎಂದು ಬೆದರಿಸಿ ಹಣ ಮತ್ತು ಒಡವೆಯನ್ನು ಬಲವಂತವಾಗಿ ಕಿತ್ತುಕೊಂಡು ಹೋಗುತ್ತಿದ್ದ ಮತ್ತು ಕೊಡದಿದ್ದರೆ ತಮ್ಮ ಪ್ರೇಮದ ವಿಷಯವನ್ನು ತಮ್ಮ ತಂದೆ ತಾಯಿಗೆ ಹೇಳುವುದಾಗಿ ಭಯ ಹುಟ್ಟಿಸಿ ದೋಚುತ್ತಿದ್ದ ವ್ಯಕ್ತಿಯನ್ನು ಕೆ.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಮಕ
ಮೈಸೂರು: ಸ್ಟೇಟ್ ಬ್ಯಾಂಕ್ ಮೈಸೂರಿನ ಉದ್ಯೋಗಿಗಳ ಪರವಾಗಿ ಮೂರು ವರ್ಷಗಳ ಅವಧಿಗೆ ಆರ್. ರಾಘವೇಂದ್ರ ಅವರನ್ನು ಎಸ್ಬಿಎಂ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ರವಿಶಂಕರ್ ನೇಮಕ
ಮೈಸೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್. ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಡಿ. ರವಿಶಂಕರ್ ಅವರನ್ನು ನೇಮಕ ಮಾಡಲಾಗಿದೆ.
ಅಂಗಡಿಯಲ್ಲಿ ಕಳವು
ಮೈಸೂರು: ಮೂರು ಅಂಗಡಿಗಳ ಬಾಗಿಲು ಮುರಿದು 10 ಸಾವಿರ ದೋಚಿ ಪರಾರಿಯಾಗಿರುವ ಘಟನೆ ಅಶೋಕ (ಬಲ್ಲಾಳ್) ವೃತ್ತದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಪ್ರಶಾಂತ್ ಮೆಡಿಕಲ್ಸ್, ಬುಕ್ ಸ್ಟಾಲ್ ಹಾಗೂ ಅಮೃತ್ ಟೀ ಅಂಗಡಿಗಳ ಬಾಗಿಲು ಮುರಿದು ಕಳವು ಮಾಡಿದ್ದಾರೆ. ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಸಾವು
ಮೈಸೂರು: ಚಾಮುಂಡಿಬೆಟ್ಟದ ಮಹಬಲೇಶ್ವರ ದೇವಸ್ಥಾನ ಬಳಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚಹರೆ- 70 ವರ್ಷ, 5.2 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ತೆಳ್ಳನೆ ಮೈಕಟ್ಟು, ಬಿಳಿ ಸೀರೆ, ಕಪ್ಪು ರವಿಕೆ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418319 ಸಂಪರ್ಕಿಸಲು ಕೆ.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಭಿಕ್ಷುಕ ಸಾವು
ಮೈಸೂರು: ಅಪರಿಚಿತ ಭಿಕ್ಷುಕನೊಬ್ಬ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕು ರಟ್ಟನಹಳ್ಳಿ ಅಯ್ಯನಕೆರೆ ಬಳಿ ಬುಧವಾರ ನಡೆದಿದೆ. ಚಹರೆ- 40 ವರ್ಷ, 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಮಾಸಲು ಬಣ್ಣದ ಶರ್ಟ್, ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2402222 ಸಂಪರ್ಕಿಸಲು ಇಲವಾಲ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.