ಮೈಸೂರು

ಇಂದಿನಿಂದ ಗಣಪತಿ ಮಹೋತ್ಸವ

Published On :

ಕ.ಪ್ರ. ವಾರ್ತೆ   ಟಿ. ನರಸೀಪುರ   ಸೆ.8
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸೆ.9 ರಂದು 17ನೇ ವರ್ಷದ ಶ್ರೀ ಗಣಪತಿ ಮಹೋತ್ಸವ ವಿದ್ಯುಕ್ತವಾಗಿ ಆರಂಭವಾಗಲಿದೆ.
ಪ್ರತಿ ವರ್ಷದಂತೆಯೇ ಈ ಬಾರಿಯೂ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಹಕಾರದೊಂದಿಗೆ ಖಾಸಗಿ ಬಸ್ ಏಜೆಂಟರ ಸಂಘದಿಂದ ಸೆ.26 ರವರೆಗೆ ಸತತ ಹದಿನೆಂಟು ದಿನಗಳ ಕಾಲ ಗಣಪತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಪುಟ್ಟರಾಜು ಹೇಳಿದರು.
ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6ಕ್ಕೆ ಆರಂಭವಾಗಲಿದೆ. ಅದರಂತೆ ಸೆ.9ರ ಸಂಜೆ ಗಣಪತಿಯ ಪ್ರತಿಷ್ಠಾಪನೆಯೊಂದಿಗೆ ಉತ್ಸವ ಆರಂಭಗೊಳ್ಳಲಿದ್ದು, ಸೆ.11ರ ಬುಧವಾರ ಬದನಾಳು ಶಿವಕುಮಾರ ಶಾಸ್ತ್ರಿ ಅವರಿಂದ ಮಹದೇಶ್ವರರ ಹರಿಕಥೆ, ಸೆ.13ರ ಶುಕ್ರವಾರ ಶಿವನಂಜಣ್ಣ ತಂಡದಿಂದ ಭಕ್ತಿ ಹಾಗೂ ಭಾವ ಗೀತೆಗಳು ಕಾರ್ಯಕ್ರಮಗಳು ನಡೆಯಲಿವೆ.
ಸೆ.14, ಯುವ ಕಲಾವಿದೆ ದಿವ್ಯ ತಂಡದಿಂದ ಭರತನಾಟ್ಯ, ಸೆ.15, ಸ್ವಾಮಿ ತಂಡದಿಂದ ಮಂಟೇಸ್ವಾಮಿ ಹರಿಕಥೆ, ಸೆ.16 ಕೊಳತ್ತೂರು ಪಿ.ಮಹದೇವಸ್ವಾಮಿ ತಂಡದಿಂದ ಭಕ್ತಿ ಹಾಗೂ ಭಾವಗೀತೆಗಳ ಗಾನಸುಧೆ, ಸೆ. 17 ಬಸವರಾಜು ತಂಡದಿಂದ ನೃತ್ಯ ಪ್ರದರ್ಶನ, ಸೆ.18 ಕೆ. ವಜ್ರೇಗೌಡರ ಅಧ್ಯಕ್ಷತೆಯಲ್ಲಿ ಮಹದೇಶ್ವರ ಕಲಾ ತಂಡದಿಂದ ದಕ್ಷಯಜ್ಞ ನಾಟಕ ಪ್ರದರ್ಶನ, ಸೆ.19, ತಂಬೂರಿ ಆರ್. ನಾಗೇಶ ತಂಡದಿಂದ ಸಿದ್ದಪ್ಪಾಜಿ ಹರಿಕಥೆ ಕಾರ್ಯಕ್ರಮ ಆಯೋಜಿಸಿದೆ.  
ಸೆ.20ರ ಬೆಳಗ್ಗೆ 9 ರಿಂದ ಮಧ್ಯಾಹ್ನ ಒಂದರವರೆಗೆ ಕಣ್ಣಿನ ಉಚಿತ ತಪಾಸಣೆ ಶಿಬಿರ, ಸಂಜೆ 6ಕ್ಕೆ ಪ್ರಜಾಪಿತ ಈಶ್ವರಿಯ ಬ್ರಹ್ಮಕುಮಾರಿ ಅವರಿಂದ ಪ್ರವಚನ, ಸೆ.21, ಕಾವ್ಯ ಲಲಿತ ನಾಯ್ಡು ತಂಡದಿಂದ ಸುಗಮ ಸಂಗೀತ, ಸೆ. 23, ಮಧ್ಯಾಹ್ನ 12ಕ್ಕೆ  ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಿದೆ.  
ಸೆ. 24, ಪವರ್ ಸ್ಟಾರ್ ಡ್ಯಾನ್ಸ್ ಗ್ರೂಪ್ ತಂಡದಿಂದ ನೃತ್ಯ, ಸೆ. 25 ಪುಟ್ಟು ಮೆಲೋಡಿಸ್ ತಂಡದಿಂದ ವಾದ್ಯಗೋಷ್ಠಿ ನಡೆಯಲಿದೆ. ಉತ್ಸವದ ಕೊನೆಯ ದಿನ ಸೆ.26 ಮಧ್ಯಾಹ್ನ 3.30ಕ್ಕೆ ಡೊಳ್ಳು ಕುಣಿತ, ಗೊಂಬೆ ಕುಣಿತ, ಕರಗ ಕುಣಿತ ಹಾಗೂ ಕೋಲಾಟಗಳ ಮೆರವಣಿಗೆಯೊಂದಿಗೆ ಗಣಪತಿ ಮೆರವಣಿಗೆ ನಡೆಸಿ, ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಕೀರ್ತಿ ಸೌಂಡ್ಸ್ ಲೈಟ್ಸ್ ಆ್ಯಂಡ್ ಡೆಕೋರೇಷನ್ ಅವರಿಂದ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.