ಮೈಸೂರು

ಇಂದು ಧರ್ಮಸೇನ ಪ್ರಮಾಣ

Published On :

ಮೈಸೂರು: ಇತ್ತೀಚೆಗೆ ನಡೆದ ವಿಧಾನಪರಿಷತ್ ಉಪಚುನಾವಣೆಯಲ್ಲಿ ಆಯ್ಕೆಯಾದ ಆರ್.ಧರ್ಮಸೇನ ಅವರು ಸೆ. 11ರ ಮಧ್ಯಾಹ್ನ 1.30ಕ್ಕೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಕೊಠಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವರು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಆರ್. ಪ್ರಕಾಶ್ಕುಮಾರ್ ತಿಳಿಸಿದ್ದಾರೆ.
ಅಭಿನಂದನಾ ಸಮಾರಂಭ
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದಿಂದ ಸೆ. 12ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಶ್ರೀ ಶಾಂತವೀರ ಸ್ವಾಮೀಜಿ, ಸಚಿವ ಪ್ರಕಾಶ್ ಹುಕ್ಕೇರಿ, ತುಷಾರ್ಗಿರಿನಾಥ್ ಭಾಗವಹಿಸುವರು. ಉಪಾಧ್ಯಕ್ಷ ನಾಗರಾಜನ್ ಶ್ರೀನಿವಾಸನ್, ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಭಾಗವಹಿಸುವರು.
ಆಯುರ್ವೇದ ತಪಾಸಣೆ
ಅಗ್ರಹಾರದಲ್ಲಿರುವ ಎಸ್.ಎನ್. ಪಂಡಿತ್ ಆ್ಯಂಡ್ ಸನ್ಸ್ನಲ್ಲಿ ಸೆ.12 ಮತ್ತು 13 ರಂದು ಆಯುರ್ವೇದ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಥೈರಾಯಿಡ್ ಸಮಸ್ಯೆಗೆ ಪರಿಹಾರ ಪಡೆಯಬಹುದು. ಮೊ. 98863 50575 ಸಂಪರ್ಕಿಸಿ.
ಕ್ಯಾನ್ಸರ್ ತಪಾಸಣೆ ಶಿಬಿರ
ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ನಲ್ಲಿ ಸೆ.12 ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಭಾಗವಹಿಸಬಹುದು. ದೂ.4250259 ಸಂಪರ್ಕಿಸಬಹುದು.
ಇಂದು ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು: ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ.11ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಈ ವೇಳೆಯಲ್ಲಿ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಉದ್ಯಮಿಗಳು ಸಹಕರಿಸಬೇಕು ಎಂದು ಸೆಸ್ಕ್ ಎನ್.ಆರ್. ಮೊಹಲ್ಲಾ ಕಾರ್ಯ ನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. ನಂಜುಮಳಿಗೆ ವೃತ್ತ, ಲಕ್ಷ್ಮಿಪುರಂ, ವಿದ್ಯಾರಣ್ಯಪುರಂ, ನಾರಾಯಣಶಾಸ್ತ್ರಿ ರಸ್ತೆ, ಕಾಕರವಾಡಿ, ನಾಲಾಬೀದಿ, ಹೊಸಕೇರಿ, ಅಗ್ರಹಾರ, ತ್ಯಾಗರಾಜ ರಸ್ತೆ, ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರ ನಗರ, ಕೃಷ್ಣಮೂರ್ತಿಪುರಂ, ನಾಚನಹಳ್ಳಿ ಪಾಳ್ಯ, ಜೆ.ಪಿ. ನಗರ, ಕುಪ್ಪಲೂರು, ಗುಂಡೂರಾವ್ ನಗರ, ಕನಕಗಿರಿ, ಅಶೋಕಪುರಂ, ಸರಸ್ವತಿಪುರಂ, ರೇಲ್ವೆ ಕಾರ್ಯಾಗಾರ, ಮಹದೇವಪುರ, ರಮಾಬಾಯಿನಗರ, ಶ್ರೀರಾಂಪುರ, ಜಯನಗರ, ಕೆ.ಜಿ. ಕೊಪ್ಪಲು, ಶಿವಪುರ, ದೇವಲಾಪುರ ಹೋಬಳಿ ಮತ್ತು ಭಾಗಶಃ ಆದಿಚುಂಚನಗಿರಿ ರಸ್ತೆ ಸುತ್ತಮುತ್ತಲಿನ ಪ್ರದೇಶ.
ಹಿರಿಯ ನಾಗರಿಕರ ರಕ್ಷಣೆಗೆ ಆಸರೆ
ಮೈಸೂರು: ಒಂಟಿಯಾಗಿರುವ ಹಿರಿಯ ನಾಗರಿಕರು, ದಂಪತಿ ರಕ್ಷಣೆಗಾಗಿ ಆಸರೆ ಎಂಬ ಯೋಜನೆ ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು. ನಗರದಲ್ಲಿ ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರು, ವೃದ್ಧ ದಂಪತಿಯನ್ನು ಗುರುತಿಸಿ ಅವರಿಗೆ ವಿಶೇಷ ರಕ್ಷಣೆ ನೀಡಲಾಗುವುದು. ಪೊಲೀಸರು ವಾರಕ್ಕೊಮ್ಮೆ ಅವರನ್ನು ಭೇಟಿಯಾಗಿ ಮಾಹಿತಿ ಪಡೆಯಲಿದ್ದಾರೆ. ಆಸರೆ ಯೋಜನೆಯಿಂದ ಹಿರಿಯ ನಾಗರಿಕರಿಗೆ ರಕ್ಷಣೆಯ ಜೊತೆಗೆ ಅಪರಾಧಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.