ಗ್ರಾಮೀಣ ಬ್ಯಾಂಕ್ ವಾರ್ಷಿಕ ಸಭೆ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 16
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ವಾರ್ಷಿಕ ಮಹಾ ಸಭೆ ಸೆ. 21 ರಂದು ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಂಕರಲಿಂಗೇಗೌಡ ತಿಳಿಸಿದರು.
ಬ್ಯಾಂಕಿನಲ್ಲಿ ಯಶಸ್ವಿನಿ ಯೋಜನೆ ಅಳವಡಿಸಿಕೊಂಡಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು. ಸರ್ಕಾರದವರು ಪ.ಜಾತಿ, ಪ.ಪಂಗಡದವರಿಗೆ ಪ್ರತಿ ಸದಸ್ಯರಿಗೂ 200 ರಿಯಾಯಿತಿ ನೀಡುತ್ತಿದೆ. ಈ ಪ್ರಯೋಜನವನ್ನು ಎಲ್ಲಾ ಜನಾಂಗದವರಿಗೂ ವಿಸ್ತರಿಸಬೇಕು ಎಂದು ಸರ್ಕಾರವನ್ನು ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಬ್ಯಾಂಕಿನ ಆದಾಯವನ್ನು ವೃದ್ಧಿಪಡಿಸುವುದಕ್ಕಾಗಿ ಹಾಗೂ ಸಾರ್ವಜನಿಕರಿಗೆ ಬ್ಯಾಂಕಿನಿಂದ ಉತ್ತಮ ಸೇವೆ ನೀಡುವ ಉದ್ದೇಶದಿಂದ ಪಿಗ್ಮಿ, ಠೇವಣಿ ಸ್ವಿಕರಿಸಲಾಗುತ್ತಿದೆ. ಗ್ರಾಹಕರಿಗೆ ಚಿನ್ನದ ಮೇಲೆ ಸಾಲವನ್ನು ಶೇ. 1ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ರೈತರಿಗೆ ಬ್ಯಾಂಕಿನಿಂದ ವಿವಿಧ ರೀತಿಯ ಸಾಲದ ಜೊತೆಗೆ ದ್ವಿಚಕ್ರವಾಹನ ಖರೀದಿಗೂ ಸಾಲ ನೀಡಲಾಗುತ್ತಿದೆ. ತಾಲೂಕಿನ ರೈತರು ಇದರ ಅನುಕೂಲ ಪಡೆಯಬೇಕು ಎಂದು ಅವರು ತಿಳಿಸಿದರು.
ಪ್ರಭಾಕರ್, ಮುದ್ದಪ್ಪ, ದಾಸನಾಯಕ, ಎಸ್. ಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

