ಮೈಸೂರು

ನಮೋ ಬೆಂಬಲಿಸಿ ಬೈಕ್ ರ್ಯಾಲಿ

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 17
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ನಮೋ ಬ್ರಿಗೇಡ್ ಮೈಸೂರು ಶಾಖೆಯಿಂದ ಮಂಗಳವಾರ ನಗರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಬೈಕ್ ರ್ಯಾಲಿಗೆ ಹಿರಿಯ ವಕೀಲರಾದ ಓ. ಶ್ಯಾಮ್ ಭಟ್, ಮೇದಪ್ಪ ಚಾಲನೆ ನೀಡಿದರು. ನಂತರ ರ್ಯಾಲಿಯು ಚಾಮರಾಜ ವೃತ್ತ, ಶ್ರೀ ಹರ್ಷ ರಸ್ತೆ, ಬೆಂಗಳೂರು- ನೀಲಗಿರಿ ರಸ್ತೆ, ಇರ್ವಿನ್ ರಸ್ತೆ, ಕೆ.ಆರ್. ಆಸ್ಪತ್ರೆ ವೃತ್ತ, ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಸಿದ್ದಪ್ಪ ವೃತ್ತ, ಅಗ್ರಹಾರ, ಬಸವೇಶ್ವರ ವೃತ್ತ ಮೂಲಕ ಸ್ವಸ್ಥಾನಕ್ಕೆ ಮರಳಿತು.
ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ವಕೀಲ ಓ. ಶ್ಯಾಮ್ ಭಟ್ ಮಾತನಾಡಿ, ಒಂದು ಕಾಲದಲ್ಲಿ ಪಂಜಾಬ್ ರಾಜ್ಯವು ಸಿಂಹಗಳ ಆವಾಸ ಸ್ಥಾನವಾಗಿತ್ತು. ಆ ರಾಜ್ಯದಿಂದ ಬಂದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಸೋನಿಯಾ ಗಾಂಧಿ ಅವರು ಅಸಮರ್ಥ ನಾಯಕರನ್ನಾಗಿ ಮಾಡಿದರು. ಇದೀಗ ದೇಶವನ್ನು ಕೊಂಡೊಯ್ಯುವಂತ ಮೋದಿ ಅವರನ್ನು ನಾವೆಲ್ಲ ಸೇರಿ ಸಿಂಹವನ್ನಾಗಿ ರೂಪಿಸಬೇಕಿದೆ ಎಂದರು.
ಶಾಸಕ ಸಿ.ಎಚ್. ವಿಜಯಶಂಕರ್, ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ, ಮಂಜುನಾಥ್, ಮಂಜಯ್ಯ ಇದ್ದರು. ರ್ಯಾಲಿಯಲ್ಲಿ 300ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ಸಿಹಿ ಹಂಚಿಕೆ: ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಅಂಗವಾಗಿ ಗಾಣಿಗರ ಸಂಘ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಶಾಸಕ ಸಿ.ಎಚ್. ವಿಜಯಶಂಕರ್, ಪಾಲಿಕೆ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಪಾರ್ಥಸಾರಥಿ, ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಮಹದೇವು, ಗಂಗಾಧರ್, ರವಿಚಂದ್ರ, ವಿಜಯಕುಮಾರ್ ಮತ್ತಿತರರು ಇದ್ದರು.
ಹ್ಯಾಪಿ ಜರ್ನಿ ಅನಂತ ಎಂದ ಸ್ನೇಕ್ ಶ್ಯಾಂ
ಸಾಹಿತಿ ಅನಂತಮೂರ್ತಿ ಅವರಿಗೆ 'ಹ್ಯಾಪಿ ಜರ್ನಿ' ಎಂದು ಉರಗ ತಜ್ಞ, ನಗರ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರೆ ನಾನು ಇಲ್ಲಿ ಬದುಕಿರಲು ಇಷ್ಟಪಡಲಾರೆ ಎಂದು ಸಾಹಿತಿ ಅನಂತಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶ್ಯಾಂ, ಒಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಈ ರೀತಿ ಮಾತನಾಡಬಾರದು. ದೇಶವನ್ನು ಕೊಂಡೊಯ್ಯಬಲ್ಲೆ ಎಂದು ಮುಂದೆ ಬಂದಿರುವ ನಾಯಕರಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.