'ವಿದೇಶಿ ವ್ಯಾಮೋಹದಿಂದ ದೇಶಿ ಸಂಸ್ಕೃತಿ ಅವನತಿ'
ಪಿರಿಯಾಪಟ್ಟಣ: ನಮ್ಮ ಸಂಸ್ಕೃತಿ ಬದಲಾಗಲು ವಿದೇಶಿ ಸಂಸ್ಕೃತಿಯ ಬಗ್ಗೆ ನಮ್ಮಲ್ಲಿರುವ ವ್ಯಾಮೋಹವೇ ಕಾರಣ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗೀಯ ಪ್ರಚಾರಕ ಯೋಗಿಚಂದ್ರ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ದೀನ ದಯಾಳು ಉಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಾಧ್ಯಾಯರ ಆದರ್ಶಗುಣಗಳನ್ನು ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡು ಮುನ್ನಡೆಯಬೇಕು.
ಜಗತ್ತಿನಲ್ಲಿ ಅನೇಕ ರಾಷ್ಟ್ರಗಳು ರೂಪುಗೊಂಡಿದ್ದರೂ ಭಾರತ ದೇಶ ಮಾತ್ರ ಹಿಂದೂ ದೇಶವಾಗಿ ಹೊರಹೊಮ್ಮಿದೆ. ದೇಶದ ಏಕತೆಗೆ ದೀನದಯಾಳ ಉಪಾಧ್ಯಾಯರ ಕೊಡುಗೆ ಅಪಾರವಾಗಿದ್ದು, ಎಲ್ಲರೂ ಅವರನ್ನು ನೆನೆಯಬೇಕಿದೆ ಎಂದು ತಿಳಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್ ಮಾತನಾಡಿದರು. ಚಂದ್ರಶೇಖರ್, ಪ್ರಸನ್ನಕೇಶವ, ಲೋಕಪಾಲಯ್ಯ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ, ಯುವ ಘಟಕದ ಅಧ್ಯಕ್ಷ ರವಿ, ಮುಖಂಡರಾದ ವಕೀಲ ಕೃಷ್ಣಪ್ರಸಾದ್, ಕೆ.ಕೆ. ಶಶಿ, ಪಿ.ಜೆ.ರವಿ, ಶಿವರಾಂ, ನಾಗರಾಜ್, ಕೃಷ್ಣ, ಯಾಧವಾಚಾರ್, ಸುದರ್ಶನ್, ಕೃಷ್ಣೇಗೌಡ ಇದ್ದರು.
ಪರ್ಯಾಯ ಬೆಳೆಯಾಗಿ ತೋಟಗಾರಿಕೆ ಬೆಳೆಗೆ ರಾಮೇಗೌಡ ಸಲಹೆ
ಹುಣಸೂರು: ರೈತರು ತಂಬಾಕಿಗೆ ಪರ್ಯಾಯವಾಗಿ ತೋಟಗಾರಿಕಾ ಬೆಳೆಗಳನ್ನು ಅವಲಂಬಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ನಿವೃತ್ತ ತೋಟಗಾರಿಕಾ ಅಧಿಕಾರಿ ರಾಮೇಗೌಡ ಕರೆ ನೀಡಿದರು. ತಾಲೂಕಿನ ಹನಗೋಡು ಹೋಬಳಿಯ ಬಿ.ಆರ್. ಕಾವಲ್ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಹಣ್ಣು ಹಂಪಲು ಕೃಷಿ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಕಾರ್ಯಕ್ರಮದಡಿ ತೋಟಗಾರಿಕಾ ಬೆಳೆಗಳಿಗೆ ಹಲವಾರು ಪ್ರೋತ್ಸಾಹದಾಯಕ ಯೋಜನೆಗಳನ್ನು ನೀಡಲಾಗುತ್ತಿದೆ ಎಂದರು. ಯೋಜನೆಯ ಯೋಜನಾಧಿಕಾರಿ ಬಿ.ಆರ್. ರಾಮು ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ರೈತರಿಗೆ ವಿವಿಧ ಕೃಷಿ ಕ್ಷೇತ್ರಗಳ ಅರಿವು ಮೂಡಿಸುವ ಕಾರ್ಯವನ್ನು ಸತತವಾಗಿ ಮಾಡುತ್ತಿದೆ. ರೈತರು ತಜ್ಞರು ನೀಡುವ ಮಾಹಿತಿ ಅರಿತು ಕೃಷಿ ಕಾರ್ಯದಲ್ಲಿ ಬಳಸಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

