'ಧಾರ್ಮಿಕ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ'
ಕ.ಪ್ರ.ವಾರ್ತೆ ಸಾಲಿಗ್ರಾಮ ಸೆ. 26
ಧಾರ್ಮಿಕ ಪುಸ್ತಕಗಳು ಮನಸ್ಸು ಮತ್ತು ಜ್ಞಾನವನ್ನು ಪವಿತ್ರ ಮಾಡುತ್ತವೆ, ಜೊತೆಗೆ ಮಾನವನಿಗೆ ಸುಖ-ಶಾಂತಿ ನೆಮ್ಮದಿ ತಂದು ಕೊಡುತ್ತವೆ. ಆದ್ದರಿಂದ ಪ್ರತಿಯೊಬ್ಬರು ಧಾರ್ಮಿಕ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಜೈನ ಧರ್ಮ ಪ್ರವಚನಕಾರ ಎಸ್.ಬಿ. ಗುಣಚಂದ್ರಕುಮಾರ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಜೈನ್ ಮಿಲನ್ ಮತ್ತು ಜೈ ಭಾರತೀಯ ಜೈನ ಮಹಿಳಾ ಸಮಾಜದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಧಾರ್ಮಿಕ ಪುಸ್ತಕಗಳು ಜ್ಞಾನದ ಕಣ್ಣುಗಳು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜ್ಞಾನ ಹೆಚ್ಚು ಮಾಡಿಕೊಳ್ಳಲು ಒಳ್ಳೆಯ ಧಾರ್ಮಿಕ ಪುಸ್ತಕಗಳನ್ನು ಓದಬೇಕು. ಆಗ ಮನಸ್ಸಿನ ಆರೋಗ್ಯ ಸುಧಾರಿಸುತ್ತದೆ. ಆತ್ಮಬಲ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕಾಪಡಿಕೊಳ್ಳಬೇಕು. ದೇಹದ ಆರೋಗ್ಯಕ್ಕೆ ಒಳ್ಳೆಯ ಆಹಾರ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ಪುಸ್ತಕಗಳು ಅತ್ಯಂತ ಅವಶ್ಯಕ ಎಂದು ತಿಳಿಸಿದರು. ಜೈ ಭಾರತಿ ಜೈನ ಮಹಿಳಾ ಸಮಾಜದ ಸುಜಾತ ರಾಜೇಂದ್ರಪ್ರಸಾದ್, ಜಯಪದ್ಮ, ಮನೋಹರ, ವೀಣಾ ಪ್ರೇಮ್ಕುಮಾರ್, ಪದ್ಮಲತಾ ನಾಗರಾಜ್, ಪುಷ್ಪ ಶ್ರೀವಿಜಯಕುಮಾರ್, ಸುಶೀಲಾ, ರಾಜಕುಮಾರಿ, ಪ್ರತಿಭಾ ಸಂಜು, ರಜನಿ ಬ್ರಹ್ಮಪ್ಪ, ಸಾಲಿಗ್ರಾಮ ಜೈನ್ ಮಿಲನ್ ಮಣಿಮಾಲಾ, ಉಷಾ ಸುರೇಶ್ಕುಮಾರ್, ನೀರಜಾ ಸತೀಶ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

