ಸುರಂಗ: ಇಂದು ತಜ್ಞರ ಭೇಟಿ
ಮೈಸೂರು: ಮೈಸೂರು ವಿಮಾನ ನಿಲ್ದಾಣ 2ನೇ ಹಂತದ ವಿಸ್ತರಣಾ ಕಾರ್ಯ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ 1ನೇ ಕಿ.ಮೀ. ರಸ್ತೆಗೆ ಸುರಂಗ ಮಾರ್ಗ ನಿರ್ಮಿಸಲು ಸಾಧ್ಯವೇ ಎಂಬ ಬಗ್ಗೆ ತಜ್ಞ ಎಂಜಿನಿಯರ್ಗಳ ತಂಡ ಸೆ.27 ರಂದು ಬೆಳಗ್ಗೆ 10ಕ್ಕೆ ಪರಿಶೀಲನೆ ನಡೆಸಲಿದೆ. ಎಂಜಿನಿಯರುಗಳ ಸಂಸ್ಥೆ ಹಾಗೂ ಎಸಿಐಸಿಎಂ ಮನವಿಯ ಮೇರೆಗೆ ಸಂಸದ ಎಚ್. ವಿಶ್ವನಾಥ್ ಅವರ ಸೂಚನೆ ಮೇರೆಗೆ ಈ ಪರಿಶೀಲನೆ ನಡೆಯಲಿದೆ ಎಂದು ಎಂ. ಲಕ್ಷ್ಮಣ ತಿಳಿಸಿದ್ದಾರೆ.
ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ
ಮೈಸೂರು: ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಸ್ಕ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.28ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ ಎಂದು ಎನ್.ಆರ್. ಕಾಲೋನಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು- ರಾಜೀವ್ನಗರ 1ನೇ, 2ನೇ ಮತ್ತು 3ನೇ ಹಂತ, ಶಾಂತಿನಗರ, ನೆಹರುನಗರ, ರಾಧಾಕೃಷ್ಣ ನಗರ, ಭಾರತ್ ನಗರ, ಜೆಎಸ್ಎಸ್ ಬಡಾವಣೆ, ಶಕ್ತಿನಗರ, ಗೌಸಿಯಾನಗರ, ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಹಂಚ್ಯಾ, ಭುಗತಗಳ್ಳಿ, ಮೇಳಾಪುರ ಹಾಗೂ ರಮ್ಮನಹಳ್ಳಿ ವಾಟರ್ ವರ್ಕ್ಸ್ ಸ್ಥಾವರಗಳು, ಕಾಳಸಿದ್ದನಹುಂಡಿ, ಸಾತಗಳ್ಳಿ, ರಮ್ಮನಹಳ್ಳಿ ಮತ್ತು ಬನ್ನೂರು ಹೊರ ವರ್ತುಲ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು.
ಕಾರ್ಯಾಗಾರ
ಮೈಸೂರು: ಕುವೆಂಪುನಗರದ ಪಂಚಮಂತ್ರ ರಸ್ತೆಯಲ್ಲಿರುವ ಐಐಎಚ್ಟಿ ಮೈಸೂರು ಶಾಖೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಸೆ.28 ರಂದು ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್ ಕುರಿತು ಕಾರ್ಯಾಗಾರ ಏರ್ಪಡಿಸಿದೆ. ಆಸಕ್ತರು ಸೆ.27ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ವಿವರಗಳಿಗೆ ದೂ. 2560268, ಮೊ. 9141768494 ಸಂಪರ್ಕಿಸಿರಿ.
ಇಂದು ಪ್ರತಿಭಟನೆ
ಮೈಸೂರು: ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡಿ, ಹೆಚ್ಚಿನ ಸಂಭಾವನೆ ನೀಡುವಂತೆ ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಸೆ.27 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಿದೆ.
ಪಿ. ನಟರಾಜು ಬಿಜೆಪಿಗೆ ನೇಮಕ
ಟಿ. ನರಸೀಪುರ: ವರುಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾಗಿ ತಾಲೂಕಿನ ಹೆಳವರಹುಂಡಿ ಗ್ರಾಮದ ಪಿ. ನಟರಾಜು ಅವರನ್ನು ನೇಮಕ ಮಾಡಲಾಗಿದೆ.
ಎಸ್ಡಿಎಂಸಿಗೆ ಆಯ್ಕೆ
ಬಿಳಿಕೆರೆ: ಹುಣಸೂರು ತಾಲೂಕಿನ ಬಿಳಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ರಚಿಸಲಾಯಿತು. ವೆಂಕಟೇಶ್ (ಅಧ್ಯಕ್ಷರು), ಹಸೀನಭಾನು (ಉಪಾಧ್ಯಕ್ಷೆ), ದೇವರಾಜು, ಚಂದ್ರಹಾಸ, ಲೋಕೇಶ, ಮಾದಪ್ಪ, ರಾಜು, ಶಂಕರೇಗೌಡ, ಸಾವಿತ್ರಿ, ಕುಮಾರಿ, ನವೀನಕುಮಾರಿ, ರೂಪ, ಸರಸ್ವತಿ (ಸದಸ್ಯರು) ಆಯ್ಕೆಯಾಗಿದ್ದಾರೆ. ಮುಖ್ಯ ಶಿಕ್ಷಕ ತಿಮ್ಮನಾಯಕ, ಕೆ. ಜನಾರ್ಧನ್, ಎಂ.ಆರ್. ಲತಾ, ಅಣ್ಣಾಜು, ಎನ್. ಅನುಪಮ, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಗೋವಿಂದನಾಯಕ, ಪಂಚಾಯಿತಿ ಸದಸ್ಯರು, ಪೋಷಕರ ವೃಂದ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

