ಮೈಸೂರು

ವಿವಿಧೆಡೆ ಯುಗಾದಿ ಆಚರಣೆ

Published On :

ಮೈಸೂರು: ನೂತನ ಶ್ರೀಜಯನಾಮ ಸಂವತ್ಸರದ ಚಾಂದ್ರಮಾನ ಯುಗಾದಿ ಹಬ್ಬವನ್ನು ವಿವಿಧೆಡೆ ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.
ಇರ್ವಿನ್‌ರಸ್ತೆಯಲ್ಲಿನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಹಾಗೂ ಸಮಸ್ತ ರಾಶಿಯವರ ಶ್ರೇಯಸ್ಸಿಗಾಗಿ ಅರ್ಚಕ ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಶನಿಶಾಂತಿ ನವಗ್ರಹ ಹೋಮ ನಡೆಸಲಾಯಿತು. ಇದಕ್ಕೂ ಮುನ್ನ ಆಂಜನೇಯಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು. ಅಲ್ಲದೆ ಪಂಚಾಂಗ ಶ್ರವಣ ಮತ್ತು ಭಕ್ತರಿಗೆ ಬೇವು ಮತ್ತು ಬೆಲ್ಲ ವಿತರಿಸಲಾಯಿತು. ಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಯುಗಾದಿಯ ಹೆ ೂಸ ವರ್ಷಾಚರಣೆ ಅಂಗವಾಗಿ ಅರ್ಘ್ಯ ಪ್ರದಾನ ಕಾರ್ಯಕ್ರಮ ನಡೆಯಿತು.
ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಉಪನಿರ್ದೇಶಕ ವಿದ್ವಾನ್ ಡಾ. ಟಿ.ವಿ. ಸತ್ಯನಾರಾಯಣ ಅವರು ಯುಗಾದಿಯ ಮಹತ್ವ ಕುರಿತು ಉಪನ್ಯಾಸ ನೀಡಿದರು. ನಂತರ ನಾದಸುಧೆಯಲ್ಲಿ ಡಾ. ಆರ್. ಎನ್. ಶ್ರೀಲತಾ ಮತ್ತು ಶಿಷ್ಯರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ತೊಣಚಿಕೊಪ್ಪಲಿನ ಸಾಹುಕಾರ ಚೆನ್ನಯ್ಯ ರಸ್ತಯಲ್ಲಿರುವ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ತರಳಬಾಳು ಸಮಾಗಮ ವೇದಿಕೆಯು ಯುಗಾದಿ ಪ್ರಯುಕ್ತ ಭಾವ ಸಂಗಮ ವಿಶೇಷ ಕಾರ್ಯಕ್ರಮ ನಡೆಸಿತು. ಈ ಸಂದರ್ಭದಲ್ಲಿ ಚಂದ್ರ ದರ್ಶನ ನಡೆಸಿ ಬೇವು ಬೆಲ್ಲ ವಿನಿಮಯ ಮಾಡಿದ ನಾಗರಿಕರು ಪರಸ್ಪರ ಶುಭ ಕೋರಿದರು. ಅಲ್ಲದೆ ಸಿಹಿ ವಿತರಣೆ ನಡೆಯಿತು. ವೇದಿಕೆ ಅಧ್ಯಕ್ಷ ಡಾ. ನಾಗೇಂದ್ರಪ್ಪ ಹಾಗೂ ಕಾರ್ಯದರ್ಶಿ ಓಂಕಾರಪ್ಪ ಮತ್ತಿತರ ಪದಾಧಿಕಾರಿಗಳು ಇದ್ದರು.   
ಕನಕದಾಸನಗರದ ಗೋದೆಯ ಬಳಗದ ಫೌಂಡೇಷನ್ ವತಿಯಿಂದ ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಹಸ್ರ ನಾಮಾರ್ಚನೆ ಹಾಗೂ ಪಂಚಾಗ ಪಠಣ ಮಾಡಲಾಯಿತು. ಭಕ್ತರಿಗೆ ಬೇವು ಬೆಲ್ಲ ವಿತರಿಸಲಾಯಿತು. ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿಜೇಂದ್ರ ತಂಡದವರು  ಭಕ್ತಿಗೀತೆಗಳನ್ನು ಹಾಡಿದರು.  
ಬೋಗಾದಿ ಎರಡನೇ ಹಂತದಲ್ಲಿನ ಆಯಿಶ್ ಕಾಲೋನಿಯಲ್ಲಿನ ಶ್ರೀ ಯಜ್ಞವಲ್ಕ ಶುಕ್ಲ ಯಜುರ್ವೇದ ಮಹಾಸಭಾ ಹಾಗೂ ದೇವರಾಜ ಮೊಹಲ್ಲಾದ ಆರ್ಯ ಸಮಾಜದಲ್ಲಿ ಚಂದ್ರಮಾನ ಯುಗಾದಿ ಆಚರಿಸಿ ಬೇವು, ಬೆಲ್ಲ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.