ಮತದಾನ ಸಾಕ್ಷರತೆಗೆ ಚಾಲನೆ
ಮೈಸೂರು: ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಲೋಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ರಾಷ್ಟ್ರಾದ್ಯಂತ ಮತದಾನ ಸಾಕ್ಷರತೆಗೆ ಚಾಲನೆ ನೀಡಿದ್ದು, ಅದರ ಅಂಗವಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮತದಾನ ಸಾಕ್ಷರತೆಗೆ ಜಿಪಂ ಸಿಇಒ ಪಿ.ಎ. ಗೋಪಾಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಅನಕ್ಷಸ್ಥರನ್ನು ಒಟ್ಟುಗೂಡಿಸಿ ಅಕ್ಷರ ಕಲಿಸುವ ಕಾರ್ಯದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ, ರಾಜ್ಯ ಸಂಪನ್ಮೂಲ ಕೇಂದ್ರಗಳು ಯಶಸ್ವಿಯಾಗಿವೆ. ಈ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ ಸಹ ಇದರ ಪ್ರಗತಿ ಪರಿಶೀಲನೆ ಸರಿಯಾಗಿ ಆಗದಿರುವುದು ವಿಪರ್ಯಾಸ. ಬದಲಾವಣೆ ಎಂಬುದು ನಿಧಾನಗತಿ ಪ್ರಕ್ರಿಯೆಯಾಗಿದ್ದು, 20 ವರ್ಷಗಳ ಹಿಂದೆ ಆರಂಭವಾದ ಸಾಕ್ಷರತೆ ಆಂದೋಲನದ ಫಲ ಕಳೆದ 4-5 ವರ್ಷಗಳಲ್ಲಿ ಗೊತ್ತಾಗಿದೆ ಎಂದರು. ಸಾಕ್ಷರತೆ ಮೂಲಕ ಅಕ್ಷರ ಕಲಿತವರು ತಮ್ಮಂತೆಯೇ ತಮ್ಮ ಮಕ್ಕಳು ಅನಕ್ಷರಸ್ಥರಾಗುವುದು ಬೇಡ ಎಂಬ ಸಂದೇಶ ಬಿಟ್ಟು ಹೋದ ಪರಿಣಾಮ, ಇಂದು ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ್ದೇವೆ. ಎರಡು ದಶಕಗಳ ಹಿಂದೆ ಶಿಕ್ಷಣದ ಪ್ರಮಾಣ ಶೇ.54 ರಷ್ಟಿತ್ತು. ಈಗ ಗ್ರಾಮೀಣ ಭಾಗದಲ್ಲೂ ಶೇ.98 ರಷ್ಟಿದೆ. ಇಷ್ಟೆಲ್ಲಾ ಪ್ರಗತಿ ಸಾಧಿಸಿದ್ದರೂ ತಮ್ಮನ್ನೂ ಸೇರಿದಂತೆ ಸರ್ಕಾರಿ ಶಾಲಾ ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲು ಇಚ್ಛಿಸುತ್ತಿಲ್ಲ ಎಂದು ವಿಷಾದಿಸಿದರು.
250 ಜೀತ ಪ್ರಕರಣ ಪತ್ತೆ: ಮೈಸೂರು ಜಿಲ್ಲೆಯಲ್ಲಿ 250 ಜೀತ ಪ್ರಕರಣಗಳು ಪತ್ತೆಯಾಗಿದ್ದು, ಸರ್ಕಾರದಿಂದ ಅಂತಹ ಕುಟುಂಬದವರಿಗೆ ಪರಿಹಾರ ಒದಗಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರು ಶಿಕ್ಷಣ ಪಡೆದು ಜೀತ ಪದ್ಧತಿಯಿಂದ ಹೊರಬರಬೇಕು ಎಂದರು. ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಂ ಪ್ರಾಸ್ತಾವಿಕ ಮಾತನಾಡಿ, ಸಾಕ್ಷರತೆಯ ಅಂತರ್ಗತ ಅರಿತ ಕೇಂದ್ರ ಚುನಾವಣಾ ಆಯೋಗ ಮತದಾನ ಸಾಕ್ಷರತೆಗೆ ಬಳಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಮತದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸಾಹಿತ್ಯವನ್ನು, ಭಿತ್ತಿಪತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯದ 17 ಜಿಲ್ಲೆಗಳ, 117 ತಾಲೂಕುಗಳು, 3018 ಗ್ರಾಪಂಗಳಲ್ಲಿ 7000 ಮಂದಿ ಪ್ರೇರಕರು ಮತದಾನ ಸಾಕ್ಷರತೆಯಲ್ಲಿ ಭಾಗವಹಿಸಿ ಅರಿವು ಮೂಡಿಸುವರು ಎಂದು ಮಾಹಿತಿ ನೀಡಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ.ಶಂಕರೇಗೌಡ, ಉಪನಿರ್ದೇಶಕ ಡಾ.ರಾಜಶೇಖರ ಜವಳಗಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ.ರಾಮು, ಅಧಿಕಾರಿಗಳಾದ ಡಾ. ವೆಂಕಟೇಶ್, ಡಾ. ಮಮತ, ವರದಯ್ಯ, ಮಾರುತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

