ಮೈಸೂರು

ಪ್ರತಾಪ್ ಸಿಂಹ ಪ್ರಚಾರ ಇಂದು

Published On :

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಶುಕ್ರವಾರ (ಏ.4) ಹುಣಸೂರು ತಾಲೂಕಿನ ವಿವಿಧ ಹಳ್ಳಿಗಳಿಗೆ ತೆರಳಿ ಮತಯಾಚಿಸುವರು. ಬೆಳಗ್ಗೆ 8ಕ್ಕೆ ಧರ್ಮಾಪುರ, 9ಕ್ಕೆ ಸಿಂಗರಮಾರನಹಳ್ಳಿ, 9.30ಕ್ಕೆ ಕರೀಮುದ್ದನಹಳ್ಳಿ, 10ಕ್ಕೆ ಉಯಿಗೊಂಡನಹಳ್ಳಿ, 11ಕ್ಕೆ ಕಲ್ಲಹಳ್ಳಿ, ಮಧ್ಯಾಹ್ನ 12ಕ್ಕೆ ಚಿಲ್ಕುಂದ, 1ಕ್ಕೆ ಕೊತ್ತೆಗಾಲ, 2ಕ್ಕೆ ಹರವೆ, 3ಕ್ಕೆ ಹಿರೀಕ್ಯಾತನಹಳ್ಳಿ, 4ಕ್ಕೆ ಕಟ್ಟೆಮಳಲವಾಡಿ, 5ಕ್ಕೆ ಗಾವಡಗೆರೆ, 6ಕ್ಕೆ ಮುಳ್ಳೂರು ಮತ್ತು 7ಕ್ಕೆ ಬೋಳನಹಳ್ಳಿಯಲ್ಲಿ ಪ್ರಚಾರ ಕೈಗೊಳ್ಳುವರು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಚ್.ಎನ್. ಮಂಜುನಾಥ್ ಸೇರಿದಂತೆ ಜಿಲ್ಲೆಯ ಪ್ರಮುಖರು ಈ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವರು.
ಪ್ರತಾಪ್ ಪರ ಪತ್ನಿ ಮತಯಾಚನೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಅವರು ಗುರುವಾರ ಬೆಳಗ್ಗೆ ಕುವೆಂಪುನಗರದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರಾದ ರೀನಾ ಪ್ರಕಾಶ್, ಮಾಳವಿಕ ಅವಿನಾಶ್, ಎ.ವಿ. ವಿದ್ಯಾ ಅರಸ್, ಮುಖಂಡ ಶ್ರೀನಿವಾಸ್ ಶಾಸ್ತ್ರಿ, ಯುವ ಮುಖಂಡ ವಿಕ್ರಮ್, ರಾಕೇಶ್ ಭಟ್ ಸೇರಿದಂತೆ ಹಲವರು ಇದ್ದರು. ಕುವೆಂಪುನಗರದಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಕರಪತ್ರಗಳನ್ನು ನೀಡಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.