ಮೈಸೂರು

ಎಆರ್ಕೆ ಬಿರುಸಿನ ಪ್ರಚಾರ

Published On :

ನಂಜನಗೂಡು: ಪಟ್ಟಣದ ಶ್ರೀರಾಂಪುರ, ಶಂಕರಪುರ ಸೇರಿದಂತೆ ಹಲವು ಭಾಗಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಬಿರುಸಿನ ಪ್ರಚಾರ ನಡೆಸಿದರು.
ಮುಖಂಡರಾದ ಎಸ್.ಮಹದೇವಯ್ಯ ಹಾಗೂ ಇತರೆ ಕಾರ್ಯಕರ್ತರೊಡಗೂಡಿ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ದೇಶದ ಉಜ್ವಲ ಭವಿಷ್ಯಕ್ಕೆ ಈ ಬಾರಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸುವಂತೆ, ಕಳೆದ ಮೂರು ಚುನಾವಣೆಗಳಲ್ಲೂ ಅಲ್ಪ ಮತಗಳ ಅಂತರದಿಂದ ಸೋಲುಂಡು ರಾಜಕೀಯ ಹಿನ್ನೆಲೆ ನೋವು ಅನುಭವಿಸಿದ್ದೇನೆ.
ಆದ್ದರಿಂದ ಈ ಬಾರಿ ಮತದಾರರು ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಪಾದಯಾತ್ರೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಸ್.ಮಹದೇವಯ್ಯ, ಜಿಪಂ ಸದಸ್ಯ ಡಾ. ಶಿವರಾಂ, ಬಿಜೆಪಿ ಹಿರಿಯ ಮುಖಂಡ ಎನ್.ಆರ್. ಕೃಷ್ಣಪ್ಪಗೌಡ, ಮುಖಂಡರಾದ ಎನ್.ಸಿ. ಬಸವಣ್ಣ ಕಪಿಲೇಶ್, ಪುರುಷೋತ್ತಮ, ವಿನಯ್, ಅಭಿ, ರಾಜಶೇಖರ್, ಇಲಿಯಾಸ್ ಅಹಮದ್, ಜಯರಾಂ, ಸಣ್ಣಯ್ಯ, ಪುಟ್ಟಸ್ವಾಮಿ, ಯಜಮಾನ್ ಮರಿಸ್ವಾಮಿ, ರಂಗಸ್ವಾಮಿ, ಆಕಳ ಮಹದೇವಪ್ಪ ಇದ್ದರು.



ಕಾಂಗ್ರೆಸ್ನಿಂದ ಮಾತ್ರ ಉತ್ತಮ ಆಡಳಿತ ಸಾಧ್ಯ: ವಿಶ್ವನಾಥ್
ರಾವಂದೂರು: ಕಳೆದ 65 ವರ್ಷಗಳಿಂದಲೂ ಜನಪರ ಯೋಜನೆಗಳನ್ನು ನೀಡಿ, ಜಾತ್ಯತೀತ ಪರಿಕಲ್ಪನೆಯ ಮೂಲಕ ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಹೇಳಿದರು. ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗಾಗಲೀ ಅಥವಾ ಅವರ ಕುಟುಂಬಕ್ಕಾಗಲಿ ಅಭಿವೃದ್ಧಿಯಾಗಿದ್ದರೆ ಅದು ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ. ಕಳೆದ 10 ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು. ಮಾಜಿ ಶಾಸಕ ಎಚ್.ಸಿ. ಬಸವರಾಜ್ ಮಾತನಾಡಿದರು. ಶಾಸಕ ಕೆ.ವೆಂಕಟೇಶ್, ಜಿಪಂ ಸದಸ್ಯರಾದ ಮಂಜುಳಾರಾಜ್, ಮಾನ್ಸೂನ್ಚಂದ್ರು, ಮುಖಂಡರಾದ ಅಪ್ಪಾಜಿಗೌಡ, ಡಾ.ಬಿ.ಜೆ. ವಿಜಯಕುಮಾರ್, ಮಹಮ್ಮದ್ ಷಫಿ, ತಾಪಂ ಸದಸ್ಯ ಆರ್.ಸಿ. ಚಂದ್ರು, ಸ್ವಾಮೀಗೌಡ ಇದ್ದರು.



ಕಾಂಗ್ರೆಸ್ಗೆ ಸೇರ್ಪಡೆ
ಮೈಸೂರು: ಬಿಎಸ್ಆರ್ ಕಾಂಗ್ರೆಸ್ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಸಾಹುಕಾರ್ಹುಂಡಿ ಸಿ.ಮಹದೇವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ ಯೋಜನೆ ಜಾರಿಗೆ ತಂದಿದ್ದಾರೆ. ಪರಿಶಿಷ್ಟ ಜಾತಿಯವರ ಸಾಲ ಮನ್ನಾ ಮಾಡಿದ್ದಾರೆ. ಅಹಿಂದ ಪರ ಹೆಚ್ಚಿನ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ ತಿಳಿಸಿದರು. ಮುಖಂಡರಾದ ಕಣಿಯನಹುಂಡಿ ಬಸವರಾಜ್, ಶ್ರೀರಾಮ್, ಟಿ.ಕೆ.ಲೇಔಟ್ ಮರಿಸ್ವಾಮಿ, ಗೋಪಾಲಪುರ ಬಸವಣ್ಣ ಇದ್ದರು.


ಜೆಡಿಎಸ್ಗೆ ಸೇರ್ಪಡೆ
ಕೆ.ಆರ್. ನಗರ: ಚುಂಚನಕಟ್ಟೆ ಹೋಬಳಿ ಮಾಯಗೌಡನಹಳ್ಳಿ ಗ್ರಾಪಂ ಸದಸ್ಯ ಕಗ್ಗಳ ಕುಮಾರ್ ಕಾಂಗ್ರೆಸ್ ತೊರೆದು ಶಾಸಕ ಸಾ.ರಾ.ಮಹೇಶ್, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಹೊಸೂರು ಗ್ರಾಮದ ಮನು ಶೋಭ ಸಮುದಾಯ ಭವನದಲ್ಲಿ ನಡೆದ ಚುಂಚನಕಟ್ಟೆ ಹೋಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷ ಸೇರ್ಪಡೆಯಾದ ಕುಮಾರ್, ಕ್ಷೇತ್ರದಲ್ಲಿ ಶಾಸಕ ಸಾ.ರಾ. ಮಹೇಶ್ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾನು ಪಕ್ಷ ಸೇರುತ್ತಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.