ಏಳಿಗೆ ಸಹಿಸದೇ ವೃಥಾ ಆರೋಪ
ಕೆ.ಆರ್. ನಗರ: ರಾಜಕೀಯ ಕ್ಷೇತ್ರದಲ್ಲೂ ಹೆಸರು ಗಳಿಸುತ್ತಿರುವ ಸಂಸದೆ ರಮ್ಯಾ ಅವರ ಏಳಿಗೆಯನ್ನು ಸಹಿಸದ ಶಾಸಕ ಸಾ.ರಾ. ಮಹೇಶ್ ಅವರು, ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಂಸದರಾಗಿದ್ದ ಚಲುವರಾಯಸ್ವಾಮಿ ತಾಲೂಕಿಗೆ ಭೇಟಿ ನೀಡುವುದೇ ಅಪರೂಪವಾಗಿತ್ತು. ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸಂಸದರ ನಿಧಿಯಲ್ಲಿ ಹಣ ಉಳಿಸಿ, ಭಾಷಾ ಜ್ಞಾನದ ಕೊರತೆಯಿಂದ ಸಂಸತ್ನಲ್ಲಿ ಭಾಗವಹಿಸಿದ್ದು ವಿರಳ ಎಂದು ಟೀಕಿಸಿದರು. ಕಳೆದ ಉಪ ಚುನಾವಣೆಯಲ್ಲಿ ಕೆ.ಆರ್. ನಗರ ಕ್ಷೇತ್ರದ ಜನತೆ ರಮ್ಯಾ ಅವರಿಗೆ ಹೆಚ್ಚಿನ ಮತ ನೀಡಿದ್ದರು. ಅಂತೆಯೇ ಏ.17ರಂದು ನಡೆಯುವ ಚುನಾವಣೆಯಲ್ಲಿಯೂ ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚು ಅಂತರದ ಮತ ಪಡೆಯುವ ಸಾಧ್ಯತೆ ಇರುವುದರಿಂದ, ಶಾಸಕರು ಹತಾಶರಾಗಿ ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ದೂರಿದರು.
ಜಿಪಂ ಮಾಜಿ ಸದಸ್ಯರಾದ ಶಿವರಾಂ, ಡಿ.ರವಿಶಂಕರ್, ಜಯರಾಮೇಗೌಡ, ತಾಪಂ ಮಾಜಿ ಸದಸ್ಯ ನಂಜುಂಡ, ಡೋರ್ನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಂ.ಗಿರೀಶ್, ಸದಸ್ಯರಾದ ಚನ್ನಪ್ಪಶೆಟ್ಟಿ, ರಾಮಲಿಂಗೇಗೌಡ, ಗಣೇಶ್, ರಾಘವೇಂದ್ರ, ಮಾಜಿ ಸದಸ್ಯ ಜವರೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ್, ಮುಖಂಡರಾದ ಕೆ.ಪಿ. ಜಗದೀಶ್, ವಸಂತೇಗೌಡ, ಮಹದೇವನಾಯಕ, ದೇವರಾಜು, ರವಿ, ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

