ಕೇಬಲ್ ಶುಲ್ಕ ದುಬಾರಿ: ಆರೋಪ
ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಕೇಬಲ್ ಗ್ರಾಹಕರಿಗೆ ಹೆಚ್ಚು ಶುಲ್ಕ ವಿಧಿಸಿ ವಸೂಲಿ ಮಾಡುತ್ತಿವೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದ್ದಾರೆ. ತಮಿಳುನಾಡು ಸರ್ಕಾರ ಮಾಸಿಕ 80 ಕೇಬಲ್ ಶುಲ್ಕ ನಿಗದಿಪಡಿಸಿದೆ. ಆದರೆ, ರಾಜ್ಯದಲ್ಲಿ ನಿಶ್ಚಿತ ಶುಲ್ಕ ನಿಗದಿಪಡಿಸದೆ ತಿಂಗಳಿಗೆ 225 ರಿಂದ 300 ಶುಲ್ಕ ವಸೂಲಿ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಗ್ರಾಹಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಜತೆಗೆ ಸೇವಾ ಶುಲ್ಕವಾಗಿ ಶೇ.12 ರಷ್ಟು ಮತ್ತು ಮನರಂಜನಾ ತೆರಿಗೆ ಶೇ. 6 ರಷ್ಟು ವಿಧಿಸಲಾಗಿದೆ. ಇದರಿಂದಾಗಿ ಬಡ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕೇಬಲ್ ಶುಲ್ಕವನ್ನು ತಮಿಳುನಾಡಿನಂತೆ ಮಾಸಿಕ 80 ಕ್ಕಿಂತ ಕಡಿಮೆ ನಿಗದಿಪಡಿಸಬೇಕು. ಹಾಗೆ ಸೆಟ್ ಟಾಪ್ ಬಾಕ್ಸ್ ವ್ಯವಸ್ಥೆಯನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ತಾವು ಕೇಬಲ್ ಗ್ರಾಹಕರೊಡನೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಎಳೆಯರ ಮೇಳಕ್ಕೆ ಚಾಲನೆ
ಮೈಸೂರು: ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಶಾಲಾ ಸಮುಚ್ಚಯದಲ್ಲಿ ಏರ್ಪಡಿಸಿರುವ ಎಳೆಯರ ಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಶಾಲಾ ಆವರಣದ ಕಲಾಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಚಾಲನೆ ನೀಡಿ, ಮಕ್ಕಳು ಚಲವಲನದಿಂದ ಇರಲು ಇಂತಹ ಶಿಬಿರ ಪ್ರಯೋಜನಕಾರಿಯಾದದು. ಮಕ್ಕಳಲ್ಲಿರುವ ಸಂಕೋಚ, ಕೀಳರಿಮೆ ತೊಲಗಿಸಿ ವಿಶಾಲ ಮನೋಭಾವ ಬೆಳೆಸಬಹುದು. ಬದಲಾದ ಕಾಲಮಾನದಲ್ಲಿ ಪರಸ್ಪರ ಪ್ರೀತಿ ಕಡಿಮೆಯಾಗುತ್ತಿದೆ. ಅದರ ಪುನರ್ ಧ್ರುವೀಕರಣಕ್ಕೆ ನಾವೆಲ್ಲ ಮಂದಾಗಬೇಕು ಎಂದು ಶುಭ ಹಾರೈಸಿದರು. ಒಟ್ಟು 20 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ತಜ್ಞರು ರಂಗದಾಟಗಳು, ಜೇಡಿಮಣ್ಣಿನ ಕಲೆ, ನೃತ್ಯ, ನಾಟಕ, ಪವಾಡ ರಹಸ್ಯ ಬಯಲು ಸೇರಿದಂತೆ ಇತರೆ ಚಟುವಟಿಕೆಗಳನ್ನು ಹೇಳಿಕೊಡುವರು. ಆಕಾಶವಾಣಿ ಉಪ ನಿರ್ದೇಶಕ ಡಾ.ಆನಂದ ಪಾಟೀಲ, ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕೇಶ ಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

