ಮೈಸೂರು

ಬಿಜೆಪಿ ಸಂಸ್ಥಾಪನಾ ದಿನ

Published On :

ಪಿರಿಯಾಪಟ್ಟಣ: ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ತನ್ನದೇ ಆದ ಸಿದ್ಧಾಂತ ಹೊಂದಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಕಟ್ಟಿ ಬೆಳೆಸಲು ಹಲವಾರು ಹಿರಿಯ ಮುಖಂಡರು ಶ್ರಮಿಸಿದ್ದು, ಅವರೆಂದಿಗೂ ಸಿದ್ಧಾಂತವನ್ನು ಬಿಟ್ಟು ನಡೆದವರಲ್ಲ. ಈಗಿನ ಕಾರ್ಯಕರ್ತರೂ ಸಹ ಶಿಸ್ತು ಮತ್ತು ಸಿದ್ಧಾಂತಕ್ಕೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಪಕ್ಷದ ಗೌರವವನ್ನು ಕಾಪಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ 50 ರಿಂದ 60 ಸಾವಿರ ಮತಗಳನ್ನು ಪಡೆಯಲಿದ್ದಾರೆ. ಎಚ್.ಡಿ. ಗಣೇಶ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ 20 ಸಾವಿರ ಮತಗಳು ಹೆಚ್ಚಾಗಿ ಲಭಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ಎಚ್.ಡಿ. ಗಣೇಶ್ ಮಾತನಾಡಿ, ತಾವು ಕೆಲವು ಕಾರಣಾಂತರಗಳಿಂದ ಹಾಗೂ ಸಣ್ಣಪುಟ್ಟ ವೈಮನಸ್ಸಿನಿಂದಾಗಿ ಪಕ್ಷ ಬಿಡಬೇಕಾಯಿತು. ಮತ್ತೆ ತಾವು ಮಾತೃ ಪಕ್ಷಕ್ಕೆ ಬಂದಿದ್ದು, ಮೋದಿ ಅವರನ್ನು ಮುಂದಿನ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಗೆಲವಿಗೆ ಶ್ರಮಿಸುವುದಾಗಿ ತಿಳಿಸಿದರು.
ಮುಖಂಡರಾದ ಪಿ.ವಿ. ಬಸವರಾಜಪ್ಪ, ಬಿ.ಎಸ್. ರಾಮಚಂದ್ರು, ಎಂ.ಎಂ. ರಾಜೇಗೌಡ, ಕೃಷ್ಣಪ್ರಸಾದ್ ಮಾತನಾಡಿದರು. ಪದಾಧಿಕಾರಿಗಳಾದ ಲೋಕಪಾಲಯ್ಯ, ಪ್ರಸನ್ನಕೇಶವ, ಕುಮಾರಸ್ವಾಮಿ, ರಮೇಶ್, ಮಹದೇವ್, ಲೀಲಾವತಿ, ಶಶಿ, ಕೃಷ್ಣೇಗೌಡ, ಶಿವಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.