ನಾನೇ ಅಭ್ಯರ್ಥಿ ಎಂದು ಭಾವಿಸಿ ಕಾಂಗ್ರೆಸ್ ಗೆಲ್ಲಿಸಿ
ಕ.ಪ್ರ.ವಾರ್ತೆ ಮೈಸೂರು ಏ. 15
ಚಾಮುಂಡೇಶ್ವರಿ ಕ್ಷೇತ್ರ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಇದನ್ನರಿತ ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪಡಿಸುತ್ತೇನೆ. ಈ ಬಾರಿ ನಾನೇ ಅಭ್ಯರ್ಥಿ ಎಂದು ತಿಳಿದು ಎಚ್. ವಿಶ್ವನಾಥ್ ಅವರನ್ನು ಗೆಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮಂಗಳವಾರ ರಾಮಕೃಷ್ಣನಗರದ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ರಾಜ್ಯದ 28 ಕ್ಷೇತ್ರಗಳಿಗೂ ಹೋಗಬೇಕಾಗಿರುವುದರಿಂದ ಎಲ್ಲಾ ಕಡೆ ಬರಲು ಸಾಧ್ಯವಾಗಲಿಲ್ಲ. ಮೈಸೂರು- ಕೊಡಗು ಕ್ಷೇತ್ರ ಪ್ರತಿಷ್ಠೆಯಾಗಿದ್ದು, ಚಾಮುಂಡೇಶ್ವರಿಯಲ್ಲಿ ನಮ್ಮ ಶಾಸಕರು ಇಲ್ಲದಿರುವುದರಿಂದ ಕಾರ್ಯಕರ್ತರು ಬೇಸರಪಟ್ಟಿಕೊಳ್ಳಬಾರದು ಎಂದರು.
ದೇಶದಲ್ಲಿ ಕಾಂಗ್ರೆಸ್ ಅಲೆ ಇದ್ದು, ಈ ಬಾರಿ ರಾಜ್ಯದಿಂದ 20 ಸ್ಥಾನ ಗೆಲ್ಲುವ ವಾತಾವರಣವಿದೆ. ಪ್ರತಿಯೊಬ್ಬರು ಮತ ಚಲಾಯಿಸುವಂತೆ ಕಾರ್ಯಕರ್ತರು ಪ್ರೇರಪಣೆ ನೀಡಬೇಕು. ಯಾರು ಏನೆ ಹೇಳಿದರು ಇನ್ನು ನಾಲ್ಕು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ರಾಜ್ಯವನ್ನು ಅಭಿವೃದ್ಧಿಪಡಿಸುತ್ತೇನೆ ಎಂದರು.
ಮಾಜಿ ಶಾಸಕ ಎಂ. ಸತ್ಯನಾರಾಯಣ, ಅಭ್ಯರ್ಥಿ ಎಚ್. ವಿಶ್ವನಾಥ್, ಕೆಪಿಸಿಸಿ ಸದಸ್ಯರಾದ ಕೆ. ಮರೀಗೌಡ, ಸಿ. ನರಸೇಗೌಡ, ಮುಖಂಡರಾದ ಕೃಷ್ಣ ಮಾದೇಗೌಡ, ಸಿ.ಎನ್. ಮಂಜೇಗೌಡ, ಕೃಷ್ಣಕುಮಾರ್ ಸಾಗರ್, ಕೂರ್ಗಳ್ಳಿ ಎಂ. ಮಹದೇವು, ಜವರಪ್ಪ, ಜವರೇಗೌಡ, ವೆಂಕಟಯ್ಯ, ಸಿ. ನರೇಂದ್ರ, ಹೊಸಹುಂಡಿ ರಘು, ಸಿದ್ದಯ್ಯ, ಬಿ. ಬೀರೇಗೌಡ, ಶಿವಲಿಂಗೇಗೌಡ, ನಿರ್ಮಲಾ ಹೊನ್ನಪ್ಪ, ಟಿ.ಬಿ. ಚಿಕ್ಕಣ್ಣ, ಜಗದೀಶ್, ಮಂಜುಳಾ ಮಾನಸ, ಲೇಖ ವೆಂಕಟೇಶ್, ಕೋಟೆಹುಂಡಿ ಮಹದೇವು, ಆನಂದೂರು ರಾಮೇಗೌಡ, ಶಾಂತಮ್ಮ, ಕೆಂಚಪ್ಪ, ಸಿ.ಎಂ. ಸಿದ್ದರಾಮೇಗೌಡ, ಮಾಕಿ ಮಹದೇವ್, ಕೃಷ್ಣ, ಗಡ್ಡಬಸಪ್ಪ, ದಿನೇಶ್, ಜಿ.ಕೆ. ಬಸವಣ್ಣ, ಬಸವೇಗೌಡ, ಬೊಜ್ಜೇಗೌಡ, ನಟರಾಜ್, ಆನಂದ್, ನಾಗಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

