ಮತದಾನ ಮಹತ್ವದ ಹಕ್ಕು
ಮೈಸೂರು: ಲೋಕಸಭಾ ಚುನಾವಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಮತದಾನದ ಮಹತ್ವ ಸಾರುವ ಸಲುವಾಗಿ ಮತದಾನ ಜಾಗೃತಿ ಜಾಥಾವನ್ನು ಸರ್ಕಾರಿ ನೌಕರರು ಮಂಗಳವಾರ ನಡೆಸಿದರು.
ಮತದಾರರ ಶಿಕ್ಷಣ ಹಾಗೂ ಜಾಗೃತಿ ಸಮಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಮಹಾಜನ ಕಾಲೇಜು ವತಿಯಿಂದ ಏರ್ಪಡಿಸಿದ್ದ ಈ ಜಾಥಾವನ್ನು ಜಿಪಂ ಸಿಇಒ ಪಿ.ಎ. ಗೋಪಾಲ್ ಉದ್ಘಾಟಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್. ಪಾಲಯ್ಯ, ವಾರ್ತಾ ಇಲಾಖೆಯ ಉಪನಿರ್ದೇಶಕ ಎ.ಆರ್. ಪ್ರಕಾಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಜನಪದ ಕಲಾವಿದರು ಹಾಡುಗಳ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಿದರು. ನಂತರ ನೌಕರರ ಭವನದಿಂದ ಹೊರಟ ಜಾಥಾವು ಜಯಲಕ್ಷ್ಮೀಪುರಂನ ಮಹಾಜನ ಕಾಲೇಜಿನಲ್ಲಿ ಅಂತ್ಯಗೊಂಡಿತು.ಮುನ್ನ ನೌಕರರ ಭವನದಲ್ಲಿ ಸಮಾವೇಶಗೊಂಡ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಜಾತಿ ಬಿಡಿ, ಮೊದಲು ಮತದಾನ ಮಾಡಿ...
ಮೈಸೂರು: ಜಾತಿ ಬಿಟ್ಟು ಹೊರ ಬಂದು ವಿಶ್ವಮಾನವ ಸಂದೇಶ ಸಾರುವುದರದೊಂದಿಗೆ ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವಂತೆ ಲೇಖಕ ವಾ.ಚ. ಕೇಶವ ಮನವಿ ಮಾಡಿದ್ದಾರೆ. ಒಳ್ಳೆಯದು ಉಳಿಯಬೇಕಾದರೆ ಕೆಟ್ಟವರೊಂದಿಗೆ ಹೋರಾಡಲು ಸನ್ನದ್ಧರಾಗಿರಿ. ಕರ್ನಾಟಕದ ತೃಪ್ತಿಗಾಗಿ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ. ಬುದ್ಧಿವಂತ ಮತದಾರರೇ, ಈ ಚುನಾವಣೆಯಲ್ಲಿ ಅತ್ಯುತ್ತಮ ತೀರ್ಪು ನೀಡುವಿರಾ... ನಿರೀಕ್ಷೆಯಲ್ಲಿ... ನಿಮ್ಮ ಮನೆಯ ರಹಸ್ಯ ತಿಳಿಸದೆ ಹೇಗಿರುತ್ತೀರೋ ಹಾಗೆಯೇ ನಿಮ್ಮ ಗೌಪ್ಯ ಮತವನ್ನು ಯಾರಿಗೂ ಹೇಳದೆ ಸೌಮ್ಯದಿಂದಿರಿ. ಮುಗುಳ್ನಗೆಯಿಂದ ದೇಶವನ್ನು ನೋಡಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

