ಗೊರಿಲ್ಲಾ ಪೋಲೋ ಇನ್ನಿಲ್ಲ
ಕ.ಪ್ರ.ವಾರ್ತೆ ಮೈಸೂರು ಏ. 27
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇದ್ದ ದೇಶದ ಏಕೈಕ ಗೊರಿಲ್ಲಾ ಪೋಲೋ (41) ಅನಾರೋಗ್ಯದಿಂದ ಶನಿವಾರ ರಾತ್ರಿ ಮೃತಪಟ್ಟಿದೆ.
ಪೋಲೋ 1973 ರಲ್ಲಿ ಸ್ವಾಭಾವಿಕ ಅರಣ್ಯ ಪ್ರದೇಶದಲ್ಲಿ ಜನಿಸಿದ್ದು, ಅದನ್ನು ಲೀಪ್ಜಿಗ್ ಮೃಗಾಲಯಕ್ಕೆ ತರಲಾಗಿತ್ತು. 1974 ರಿಂದ 1992 ರವರೆಗೆ ಲೀಫ್ಜಿಗ್ ಮೃಗಾಯದಲ್ಲಿದ್ದ ಪೋಲೋನನ್ನು ಡಬ್ಲಿಕ್ ಮೃಗಾಲಯಕ್ಕೆ ನೀಡಲಾಗಿತ್ತು. ಇಇಪಿ ಸಂಸ್ಥೆ ಹಾಗೂ ಅದರ ನಿರ್ದೇಶಕರ ಶಿಫಾರಸಿನಂತೆ ಡಬ್ಲಿನ್ ಮೃಗಾಲಯದವರು ಅದನ್ನು ಮೈಸೂರು ಮೃಗಾಲಯಕ್ಕೆ 1995 ರಲ್ಲಿ ತರಲಾಗಿತ್ತು.
ಕಳೆದ ಒಂದು ತಿಂಗಳಿಂದ ಈ ಪ್ರಾಣಿ ಹಸಿವಿನ ಕೊರತೆಯಿಂದಾಗಿ ಸಹಜ ಪ್ರಮಾಣದ ಆಹಾರವನ್ನು ಸ್ವೀಕರಿಸದೆ ನಿತ್ರಾಣ ಸ್ಥಿತಿಯಲ್ಲಿತ್ತು. ಏದುಸಿರು ಮತ್ತು ಕೆಳದುಟಿಯ ಜೋತಾಡುವಿಕೆಯ ಪರಿಣಾಮದಿಂದಾಗಿ ವಿಶ್ರಾಂತ ರಹಿತ ಸ್ಥತಿಯಲ್ಲಿತ್ತು. ಪಿತ್ತಜನಕಾಂಗದ ಅಂಶ, ಜೀವಸತ್ವಯುತ ವಸ್ತುಗಳ ನೀಡುವಿಕೆಯಿಂದಾಗಿ ಅದರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿತ್ತು.
ಇಳಿ ವಯಸ್ಸು ಹಾಗೂ ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದ ಈ ಪ್ರಾಣಿಗೆ ಉದ್ದೀಪನ ಮದ್ದು ಪ್ರಯೋಗಿಸುವುದು ಕಷ್ಟಕರವಾಗಿದ್ದರಿಂದ ಪ್ರಾಣಿಯ ಸ್ಯಾಂಪಲ್ಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸುವುದು ಅಷ್ಟು ಸುಲಭವಿರಲಿಲ್ಲ. ಅದರ ಮೂತ್ರವನ್ನು ಎರಡು ಬಾರಿ ಸಂಗ್ರಹಿಸಿ ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಯೂರೋಬಿಲಿನೋಜೆನ್ ಮಟ್ಟದಲ್ಲಿನ ಏರಿಕೆ ಹೊರತಾಗಿ ಬೇರೆ ಯಾವ ಅಂಶಗಳು ಕಂಡುಬಂದಿರಲಿಲ್ಲ.
ಹದಿನೈದು ದಿನಗಳ ನಂತರ ಉಸಿರಾಟದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿತ್ತು. ಅದು ಬಾಯಿಯ ಮೂಲಕ ಉಸಿರಾಡುತ್ತಿದ್ದುದ್ದನ್ನು ಗಮನಿಸಿದ್ದ ಪರಿಣಿತರು ಪ್ರಾಣಿಗೆ ಡಿಸ್ಪ್ನಿಯದ ಕುರುಹುಗಳಿದ್ದುದ್ದರಿಂದ ಅದರ ಉಸಿರಾಟದ ಮಾರ್ಗವು ಸೋಂಕಿಗೆ ಒಳಗಾಗಿತ್ತು ಎನ್ನಲಾಗಿದೆ. ಒಂದು ವಾರದಿಂದ ಉಸಿರಾಟದ ಪ್ರಕ್ರಿಯೆಗೆ ಅನುಕೂಲವಾಗುವಂತೆ ಬ್ರಾಕೋ ಡೈಲೋಟೆಕ್ಗಳನ್ನು ನೀಡಲಾಗಿತ್ತು. ಕಳೆದೆರೆಡು ದಿನಗಳಿಂದ ಕೆಮ್ಮು ಕಾಣಿಸಿಕೊಂಡಿತ್ತು. ನಂತರ ವೈದ್ಯೋಪಾಚಾರಕ್ಕೆ ಒಳಪಡಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಒಂಟಿತನ ಮುಳುವಾಯಿತೆ?: 1995ರಲ್ಲಿ ಮೈಸೂರು ಮೃಗಾಲಯಕ್ಕೆ ಬಂದಿದ್ದ ಪೋಲೋ 18 ವರ್ಷಗಳ ಕಾಲ ಒಂಟಿತನದ ಜೀವನ ನಡೆಸಿದುರ ಫಲವಾಗಿ ಹೀಗೆ ಅನಾರೋಗ್ಯಕ್ಕೆ ತುತ್ತಾಯಿತೆ ಎಂಬುದನ್ನು ಊಹಿಸಲಾಗಿದೆ. ಪೋಲೋನ ನಿಧನಕ್ಕೆ ಮೃಗಾಲಯದ ಸಿಬ್ಬಂದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದ್ದಾರೆ.
ಸ್ನಾನ ಮಾಡುವುದೆಂದರೆ ಖುಷಿ
ಪೋಲೋಗೆ ಸ್ನಾನ ಮಾಡುವುದೆಂದರೆ ಎಲ್ಲಿಲ್ಲದ ಖುಷಿ. ತನ್ನನ್ನು ಹಾರೈಕೆ ಮಾಡುವವರು ಸ್ನಾನ ಮಾಡಿಸಲು ಬಂದರೆ ಎದೆ ಬಡಿದುಕೊಂಡು ಖುಷಿಪಡುತ್ತಿತ್ತು. ದೊಡ್ಡದಾಗಿ ಶಬ್ದ ಹೊರಡಿಸುತ್ತಿದ್ದ. ಈತ ಸ್ನಾನ ಮಾಡುವುದನ್ನೇ ನೋಡಲು ಪ್ರವಾಸಿಗರು ಕಾಯುತ್ತಿದ್ದರು. ಮೃಗಾಲಯದಿಂದ ನೀಡುತ್ತಿದ್ದ ಆಹಾರ ಪದಾರ್ಥಗಳನ್ನು ಒಪ್ಪ ಓರಣವಾಗಿ ಜೋಡಿಸಿಕೊಂಡು ತನಗೆ ಇಷ್ಟವಾದದ್ದನ್ನು ಮೊದಲು ತಿನ್ನುತ್ತಿದ್ದ. ಹೆಚ್ಚಾಗಿ ಹಣ್ಣು, ಕಬ್ಬು, ಕಾಳುಗಳನ್ನು ಸೇವಿಸುತ್ತಿದ್ದ ಎನ್ನುತ್ತಾರೆ ಮೃಗಾಲಯದ ವೈದ್ಯಾಧಿಕಾರಿ ಡಾ. ಸುರೇಶ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

