ಬಿಳಿಗಿರಿಬನದಲ್ಲಿ ಎಳೆಯರ ಮೇಳ
ಕನ್ನಡಪ್ರಭ ವಾರ್ತೆ, ಚಾಮರಾಜನಗರ, ಏ. 29
ತಾಲೂಕಿನ ಮರಿಯಾಲದ ಬಳಿಯ ಜೆಎಸ್ಎಸ್ ರುಡ್ಸೆಟ್ನಲ್ಲಿ ನಡೆಯುತ್ತಿರುವ 10ನೇ ವರ್ಷದ ಗ್ರಾಮೀಣ ಎಳೆಯರ ಮೇಳದ ಪ್ರಯುಕ್ತ ಏಳನೇ ದಿನ ಬಿಳಿಗಿರಿರಂಗನ ಬೆಟ್ಟಕ್ಕೆ ಪ್ರವಾಸ ಕೈಗೊಂಡು ಮಕ್ಕಳಿಗೆ ಗಿರಿಜನರ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಧ್ಯಾನ, ಯೋಗದ ನಂತರ ಮಕ್ಕಳಿಗೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಒಂದು ದಿನದ ಪ್ರವಾಸ ಏರ್ಪಡಿಸಲಾಗಿತ್ತು. ಮೊದಲು ಬಿಳಿಗಿರಿರಂಗನಾಥ ಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ನಂತರ ಅಲ್ಲೇ ಹತ್ತಿರದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರಕ್ಕೂ ಭೇಟಿ ಕೊಟ್ಟರು.
ಕೇಂದ್ರದ ಸಂಯೋಜಕ ನಾಗೇಶ್ ಗಿರಿಜನರಿಗೆ ಹಮ್ಮಿಕೊಂಡಿರುವ ವಿಶೇಷ ತರಬೇತಿಗಳ ಬಗ್ಗೆ, ಉತ್ಪಾದನ ಕೇಂದ್ರಗಳ ಬಗ್ಗೆ, ಶಾಲಾ ಕಾಲೇಜಿನ ಬಗ್ಗೆ, ಕಾಡಿನ ಜನರ ವೈಶಿಷ್ಟತೆ ಬಗ್ಗೆ ಪ್ರಾತ್ಯಕ್ಷಿಕತೆ ನೀಡಿದರು. ಅಲ್ಲಿ ತಯಾರಿಸುವಂತಹ ಜೇನು ತುಪ್ಪ, ನೇರಳೆ ಜ್ಯೂಸ್, ಆಹಾರ ಸಂಸ್ಕರಣೆ ಘಟಕ, ಕಾಡು ಜನರ ಮನೆಗಳು, ಅವರ ಜೀವನ ಕ್ರಮ ಇತ್ಯಾದಿಗಳ ಬಗ್ಗೆ ಭೇಟಿ ಮಾಡಿಸಿ ವಿವರಿಸಿದರು.
ಮೈಸೂರು ಭವಾನಿ ಶಂಕರ್ ಅವರು ಪವಾಡ ರಹಸ್ಯ ಬಯಲು ಮಾಡುವ ಬಗ್ಗೆ ವಿವಿಧ ರೀತಿಯ ವಸ್ತುಗಳಲ್ಲಿ ಮಾಡಬಹುದಾದ ಪವಾಡಗಳನ್ನು ತೋರಿಸಿ, ಮಕ್ಕಳ ಕೈಯಲ್ಲಿ ಮಾಡಿಸಿದರು.
ನಗರ ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗಿರಿಜಾಪತಿ, ಕನ್ನಡ ಭಾಷೆ ಬಗ್ಗೆ, ಭಾಷಾ ಕೌಶಲ್ಯಗಳ ಬಗ್ಗೆ ತಿಳಿಸಿ, ಮಕ್ಕಳಲ್ಲಿ ಮನದಟ್ಟು ಮಾಡಿಸಿದರು. ಆಹಾರದ ಪರಿಶುದ್ಧತೆಯ ಬಗ್ಗೆ ಮೈಸೂರು, ಸಿಎಫ್ಟಿಆರ್ಐ ನಿವೃತ್ತ ವಿಜ್ಞಾನಿ ಎಸ್.ಕೃಷ್ಣಮೂರ್ತಿ ತಿಳಿಸಿ ಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

