ಮೈಸೂರು

ಸಾಗರೆಯಲ್ಲಿ ಯೋಧನ ಅಂತ್ಯಕ್ರಿಯೆ

Published On :

ಎಚ್.ಡಿ. ಕೋಟೆ: ಪಂಜಾಬ್‌ನ ಫಿರಾಜ್‌ಪುರ್ ಕ್ಯಾಂಪ್‌ನಲ್ಲಿ ಜ.26ರಂದು ಮೃತಪಟ್ಟ, ತಾಲೂಕಿನ ಸಾಗರೆ ಗ್ರಾಮದ ದಾಸನಾಯಕ ಅವರ ಪುತ್ರ ಯೋಧ ಶೇಖರ್(26) ಅಂತ್ಯಕ್ರಿಯೆ ಶುಕ್ರವಾರ ಸಾಗರೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಶೇಖರ್ ತಮ್ಮ ಸುರೇಶ್ ಮಾತನಾಡಿ, ನನ್ನ ಅಣ್ಣನ ಸಾವು ಅನುಮಾನಸ್ಪದವಾಗಿದೆ. ಕತ್ತನ್ನು ಕತ್ತರಿಸಿ ರೇಲ್ವೆ ಕಂಬಿಯ ಮೇಲೆ ಹಾಕಿದ್ದಾರೆ. ಕುತ್ತಿಗೆ ಮೇಲೆ ರೈಲು ಹರಿದಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಇದು ತನಿಖೆ ಆಗಬೇಕು. ನಾನು ಅಲ್ಲಿ ನನ್ನ ಅಣ್ಣನ ಸಾವಿನ ಬಗ್ಗೆ ಪೂರ್ಣವಾದ ತನಿಖೆ ಆಗಬೇಕು ಎಂದು ದೂರು ನೀಡಿದ್ದೇನೆ. ನಮ್ಮ ಮನೆಗೆ ಅವನೆ ಆಧಾರ ಸ್ತಂಭವಾಗಿದ್ದ. ನನ್ನ ತಂದೆ ಅಂಗವಿಕಲರು, ನಮ್ಮ ತಾಯಿ ಆರೋಗ್ಯ ಸರಿಯಿಲ್ಲ, ರಾಜ್ಯ ಸರ್ಕಾರ ನನಗೆ ನ್ಯಾಯ ದೊರಕಿಸಿಕೊಡಬೇಕು. ನನಗೆ ಒಂದು ಸರ್ಕಾರಿ ಕೆಲಸ ಕೊಡಬೇಕೆಂದು ಶಾಸಕ ಎಸ್. ಚಿಕ್ಕಮಾದು ಅವರಿಗೆ ಮನವಿ ಸಲ್ಲಿಸಿದರು.
ಜ.26ರಂದು ಶೇಖರ್ ಸಂಜೆ ಸುಮಾರು 7.30ರಲ್ಲಿ ನಮ್ಮ ತಂದೆ ಜೊತೆಗೆ ಮಾತನಾಡಿದ್ದಾನೆ. ತನ್ನ ಆರೋಗ್ಯದ ಬಗ್ಗೆ ತಮ್ಮ ಕುಟಂಬದವರ ಜೊತೆಗೆ ಚೆನ್ನಾಗಿ ಮಾತನಾಡಿದ್ದಾನೆ. ಮಾರ್ಚ್‌ನಲ್ಲಿ ಹಬ್ಬಕ್ಕೆ ಊರಿಗೆ ಬರುತ್ತೇನೆ ಎಂದು ಹೇಳಿಕೊಂಡಿದ್ದ. ಮತ್ತೆ ಅದೇ ದಿನ ರಾತ್ರಿ ಪಂಜಾಬ್‌ನ ಸಿರಾಜ್‌ಪುರ್‌ನಿಂದ ಅಲ್ಲಿನ ಆರ್ಮಿ ಅಧಿಕಾರಿ ಶಿವಾನಂದ ಅಕ್ಕಿ ನನಗೆ ಫೋನ್ ಮಾಡಿ, ಫಿರಾಜ್‌ಪುರ್ ಕ್ಯಾಂಪ್‌ನಿಂದ 20 ಕಿ.ಮೀ ಅಂತರದ ರೇಲ್ವೆ ಕಂಬಿ ಬಳಿ ನಿನ್ನ ಅಣ್ಣನ ಶವ ಬಿದ್ದಿದೆ ಎಂದು ಹೇಳಿದರು.
ಶಾಸಕ ಚಿಕ್ಕಮಾದು ಮಾತನಾಡಿ, ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಒದಗಿಸಲಾಗುತ್ತದೆ. ಗುತ್ತಿಗೆ ಆಧಾರದಲ್ಲಿ ಸುರೇಶ್‌ಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.