ಮೈಸೂರು

ಚೌಡೇಶ್ವರ ಜಯಂತಿ ಇಂದು

Published On :

ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರ ಗ್ರಾಮದ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ 6ನೇ ವರ್ಷದ ಜಯಂತ್ಯುತ್ಸವ ಕಾರ್ಯಕ್ರಮ ಫೆ.4 ರಂದು ನಡೆಯಲಿದೆ. ಬೆಳಗ್ಗೆ 5ಗಂಟೆಗೆ ಗಣಪತಿ ಹೋಮ, 6ಕ್ಕೆ ಕಳಸ ತರುವುದು, 10ಕ್ಕೆ ದೇವಿ ಹೋಮ, 12ಕ್ಕೆ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನ 1ಕ್ಕೆ ಗ್ರಾಮದ ನಾಗಾ ವಿದ್ಯಾಸಂಸ್ಥೆ ಆವರಣದಲ್ಲಿ ಅನ್ನ ಸಂತರ್ಪಣೆ, ಸಂಜೆ 5 ಕ್ಕೆ ವಿದ್ಯುತ್ ದೀಪಾಲಂಕಾರ ಮಂಟಪದಲ್ಲಿ ಚಂಡೆ, ಕರಡಿ ವಾದ್ಯ, ವೀರಗಾಸೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ನಡೆಯಲಿದೆ ಎಂದು ದೇವಾಂಗ ಸಂಘದ ಪ್ರಕಟಣೆ ತಿಳಿಸಿದೆ.
ಅಮೀರ್ ಗ್ರಾಪಂ ಉಪಾಧ್ಯಕ್ಷ
ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಪಂ ಉಪಾಧ್ಯಕ್ಷರಾಗಿ ಅಮೀರ್ ಮಹಮ್ಮದ್ ರಿಜ್ವಾನ್ ಅವಿರೋಧ ಆಯ್ಕೆಯಾದರು. 20 ಸದಸ್ಯರ ಪೈಕಿ 7 ಕಾಂಗ್ರೆಸ್ ಬೆಂಬಲಿತ ಸದಸ್ಯರು ಮತ್ತು 13 ಜೆಡಿಎಸ್ ಬೆಂಬಲಿತರ ಸದಸ್ಯರಿದ್ದು, ಜೆಡಿಎಸ್ ಅಧಿಕಾರ ಹಿಡಿದಿದೆ. ಇವರಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಸತೀಶ್ ತಮ್ಮ ಪಕ್ಷದ ಆಂತರಿಕ ಒಪ್ಪಂದದಂತೆ ರಾಜಿನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರದಂದು ಚುನಾವಣೆ ನಡೆಯಿತು.
ಇಂದು ಉಪ್ಪಾರ ಯುವಕರ ಸಭೆ
ಸಾಲಿಗ್ರಾಮ: ಕರ್ನಾಟಕ ರಾಜ್ಯ ಉಪ್ಪಾರ ಯುವವೇದಿಕೆಯ ಕೆ.ಆರ್. ನಗರ ತಾಲೂಕು ಘಟಕದಿಂದ ಮಿರ್ಲೆ ಹೋಬಳಿ ಮಟ್ಟದ ಉಪ್ಪಾರ ಜನಾಂಗದ ಯುವಕರ ಸಭೆಯನ್ನು ಫೆ.4ರ ಮಧ್ಯಾಹ್ನ 2ಕ್ಕೆ ಮುದುಗುಪ್ಪೆ ಗ್ರಾಮದಲ್ಲಿ ಏರ್ಪಡಿಸಿದ್ದು, 18 ರಿಂದ 45 ವರ್ಷ ವಯೋವಾನದ ಹೋಬಳಿ ವ್ಯಾಪ್ತಿಯ ಉಪ್ಪಾರ ಯುವ ಬಂಧುಗಳು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಮೊ. 99015 35234 ಸಂಪರ್ಕಿಸಬಹುದು.
ರಾಜ್ಯ ಸರ್ಕಾರದ ವಿರುದ್ಧ ಕಿಡಿ
ಟಿ. ನರಸೀಪುರ: ನರಸೀಪುರದಲ್ಲಿ ದಲಿತ ಪರ ಚಳವಳಿ ದಮನಗೊಳಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡುತ್ತಿವೆ ಎಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೂಡು ಹೇಳಿದರು. ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ಅಮಾನತಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದೊಂದು ವಾರದಿಂದ ದಸಂಸ ಪ್ರತಿಭಟನೆ ನಡೆಸುತ್ತಿದ್ದರೂ ಯಾವೊಬ್ಬರೂ ಕೇಳದಿರುವುದು ದಲಿತರ ಬಗ್ಗೆ ಇರುವ ಕಾಳಜಿ ಬಿಂಬಿಸುತ್ತಿದೆ. ಅಹಿಂದ ಹೋರಾಟದ ಹಿನ್ನೆಲೆ ಎನ್ನುವ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ಪ್ರಸಾದ್ ಮತ್ತು ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ದಲಿತರು ಧರಣಿ ನಡೆಸುತ್ತಿರುವುದು ಕಿವಿಗೆ ಕೇಳಿಸುತ್ತಿಲ್ಲವೇ ಎಂದು ವ್ಯಂಗ್ಯವಾಡಿದರು. ಮಹದೇವಪ್ಪ, ಆಲಗೂಡು ಶಿವಕುಮಾರ, ಹೊನ್ನಯ್ಯ, ಶಿವಪ್ರಕಾಶ್, ಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.