ಮೈಸೂರು

ದಯಾಮರಣಕ್ಕೆ ಲಕ್ಕೇಗೌಡ ಮನವಿ

Published On :

ಮೈಸೂರು:  ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ಬಗ್ಗೆ ಪ್ರಸ್ತಾಪಿಸಿ ಸಾಕಾಗಿದೆ. ಹೀಗಾಗಿ ತನಗೆ ದಯಾಮರಣ ನೀಡುವಂತೆ ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಹಾಗೂ ಸಾಮಾಜಿಕ ಕಾರ್ಯಕರ್ತರ ಹಂ. ಲಕ್ಕೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಂಬಂಧ 2012 ರಲ್ಲಿ ನಡೆದ ಶಿಕ್ಷಣ ಅದಾಲತ್ನಲ್ಲಿ ಮನವಿ ಸಲ್ಲಿಸಿ, ಕೆಲವು ಸ್ಪಷ್ಟನೆ ಕೇಳಿದ್ದೆ. ಆದರೆ, ಈವರೆಗೂ ಇನ್ನೂ ಉತ್ತರ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ ಮೇಲೆ ಭ್ರಷ್ಟಾಚಾರಿಗಳ ಕಥೆ ಮುಗಿಯಿತು ಎಂದುಕೊಂಡಿದ್ದು ಈಗ ಹುಸಿಯಾಗಿದೆ. ಭ್ರಷ್ಟಾಚಾರದ ಬಗ್ಗೆ ಇನ್ನು ಮುಂದೆ ಪ್ರಸ್ತಾಪ ಮಾಡದೆ ದಯಾಮರಣ ಕೋರಿ ಸಾಯುವುದೇ ಮೇಲೆಂದು ತೀರ್ಮಾನಿಸಿರುವುದಾಗಿ ಅವರು ತಿಳಿಸಿದ್ದಾರೆ.


ಕೆನರಾ ಬ್ಯಾಂಕ್ನಲ್ಲಿ ಇ- ಛಾಪಾ ಕಾಗದ ಮಾರಾಟ


ಮೈಸೂರು: ನಗರ ನಜರ್ಬಾದ್ನ ಕೆನರಾ ಬ್ಯಾಂಕ್ನ ಶಾಖೆಯಲ್ಲಿ ಇ- ಛಾಪಾ ಕಾಗದ ಹಾಗೂ ಗಣಕೀಕೃತ ಪಾಸ್ ಪುಸ್ತಕ ಮುದ್ರಣಯಂತ್ರಕ್ಕೆ ಬ್ಯಾಂಕಿನ ವೃತ್ತ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಸೋಮವಾರ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ನೂತನ ಹಾಗೂ ನವೀನ ಸೇವೆಗಳನ್ನು ಒದಗಿಸುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು, ಇ- ಛಾಪಾ ಕಾಗದ ಸೌಲಭ್ಯದಿಂದ ಕೆನರಾ ಬ್ಯಾಂಕ್ ಗ್ರಾಹಕರು ಹಾಗೂ ಜನಸಾಮಾನ್ಯರು ಸಹ ಈ ಸೇವೆಯ ಉಪಯೋಗ ಪಡೆಯಬಹುದಾಗಿ ಹೇಳಿದರು. ಗಣಕೀಕೃತ ಪಾಸ್ ಪುಸ್ತಕ ಮುದ್ರಣಯಂತ್ರವನ್ನು (ಕಿಯೋಸ್ಕ್) ಗ್ರಾಹಕರಿಗೆ ದಿನವಿಡೀ ಪಾಸ್ ಪುಸ್ತಕ ಮುದ್ರಣ ಸೌಲಭ್ಯವಿದ್ದು, ಗ್ರಾಹಕರೆ ಸ್ವತಃ ತಮ್ಮ ಪಾಸ್ ಪುಸ್ತಕವನ್ನು ಮುದ್ರಿಸುವ ಸೌಲಭ್ಯವಿದೆ ಎಂದು ತಿಳಿಸಿದರು.



ಮಕ್ಕಳು ಸಮಾಜಕ್ಕೆ ಉತ್ತಮ ಆಸ್ತಿ
ಮೈಸೂರು: ತಾಯಿ ಪ್ರೀತಿಯಲ್ಲಿ ಬೆಳೆದ ಮಕ್ಕಳು ಸಮಾಜಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು. ನ್ಯೂ ಕಾಂತರಾಜ ಅರಸ್ ರಸ್ತೆಯ ಮದರ್ ಬೀಟ್ಸ್ ಲಿಟ್ಲ್ ಕೇರ್ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಪ್ರೀತಿಯಲ್ಲಿ ಬೆಳೆದ ಮಕ್ಕಳು ಸಮಾಜಕ್ಕೆ ಉತ್ತಮ ಆಸ್ತಿಯಾಗುತ್ತಾರೆ. ಅಂತಹ ಮಕ್ಕಳಿಗೆ ತಾಯಿ ಪ್ರೀತಿಯೊಂದಿಗೆ ನಾಗರಿಕತೆ ಹೇಳಿಕೊಟ್ಟರೆ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದರು. ಕೆಲಸದ ಒತ್ತಡದಲ್ಲಿರುವ ತಾಯಿ- ತಂದೆಯರು ತಮ್ಮ ಮಕ್ಕಳನ್ನು ಬಿಟ್ಟು ಹೋದಾಗ ಅಂತಹ ಮಕ್ಕಳಿಗೆ ಮೊದಲು ತಾಯಿ ಪ್ರೀತಿ ತೋರಿಸಬೇಕು. ಹಂತ ಹಂತವಾಗಿ ಅವರಿಗೆ ವ್ಯಕ್ತಿತ್ವ ವಿಕಸನ ಮತ್ತು ನಾಗರಿಕತೆ ಕಲಿಸಿದಾಗ ಸಮಾಜಕ್ಕೆ ಅವರು ದೊಡ್ಡ ಆಸ್ತಿಯಾಗುತ್ತಾರೆ ಎಂದರು. ಸಂಸ್ಥೆಯ ಸಂಸ್ಥಾಪಕಿ ಗಾಯತ್ರಿ ಪರಶುರಾಮ್ ನಾಯ್ಡು, ಶ್ರುತಿ ಸಂಜಯ್, ಸರಸ್ವತಿಪುರಂ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ್, ಮೊಕ್ತೇಸರ ಸುಬ್ಬರಾಜು, ಸಂಜಯ್, ಮರುಳೀಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.