'ಜನಪದ ಅಜ್ಞಾತರ ಅಮರ ಸಾಹಿತ್ಯ'
ಮೈಸೂರು: ಜನಪದ ಸಾಹಿತ್ಯ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಬೆಳೆದು ಬಂದ, ಅಜ್ಞಾತರು ನಿರ್ಮಿಸಿದ ಅಮರವಾದ ಸಾಹಿತ್ಯ ಎಂದು ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಎಸ್.ಎನ್.ಲಕ್ಷ್ಮೀನಾರಾಯಣ ಹೇಳಿದರು.
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿವಿ ಮಟ್ಟದ ಅಂತರ ಕಾಲೇಜು ಲಕ್ಷ್ಮಮ್ಮ ಪಿ.ಎಂ. ಚಿಕ್ಕಬೋರಯ್ಯ ಸ್ಮಾರಕ ಜನಪದಗೀತೆ ಮತ್ತು ಶಾಂತಾಮಾದೇಗೌಡ ಸ್ಮಾರಕ ಭಾವಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ಜನಪದ ಸಾಹಿತ್ಯ ಶ್ರಮ ನಿವಾರಣೆಗಾಗಿ ಹುಟ್ಟಿದ ಸಾಹಿತ್ಯ. ಹಳ್ಳಿಗರ ಬೆವರ ಹನಿಗಳ ಅನುಭವದ ಮೂಸೆಯಿಂದ ಬೆಳೆದು ಬಂದ ಶ್ರೇಷ್ಠ ಸಾಹಿತ್ಯ ಎಂದರು.
ಜನಪದ ಗೀತಗಾಯನ ಸ್ಪರ್ಧೆಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಮೈಸೂರು ಕೃಷ್ಣಮೂರ್ತಿ ಶಿಕ್ಷಣಕ್ಕೆ ಎರಡು ಮುಖ. ಒಂದು ಉದ್ಯೋಗಮುಖ ಮತ್ತೊಂದು ಸಾಂಸ್ಕೃತಿಕ ಮುಖ. ಆದರೆ ಇಂದಿನ ಯುವಜನತೆ ಉದ್ಯೋಗಮುಖಿ ಶಿಕ್ಷಣವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಭಾವಗೀತೆ ಗಾಯನ ಸ್ಪರ್ಧೆಯ ಅಧ್ಯಕ್ಷತೆಯನ್ನು ಡಾ. ಜಯಲಕ್ಷ್ಮಿ ಸೀತಾಪುರ ವಹಿಸಿದ್ದರು. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಪದವಿ ಕಾಲೇಜುಗಳಿಂದ ಅಧಿಕ ಸಂಖ್ಯೆಯ ಗಾಯಕ, ಗಾಯಕಿಯರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾದ ಡಾ.ಎನ್.ಎಂ. ಮಾದೇಗೌಡ ಹಾಗೂ ಸಂಘದ ಕ್ರಿಯಾಶೀಲ ಕಾರ್ಯದರ್ಶಿ ಪಿ. ವಿಶ್ವನಾಥ್ ವಿಜೇತ ಗಾಯಕ, ಗಾಯಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಸ್ಪರ್ಧೆಯಲ್ಲಿ ವಿಜೇತರಾದವರ ವಿವರ: ಜನಪದ ಗೀತೆ- ಕೆ.ವಿ. ಅನನ್ಯ, ಮಹಾಜನ ಕಾಲೇಜು (ಪ್ರಥಮ), ಎಂ.ಸಿ. ಕುಮಾರ್, ಮಹಾರಾಜ ಕಾಲೇಜು (ದ್ವಿತೀಯ), ಬಿ.ಬಿ. ಸಿತಾರ, ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ (ತೃತೀಯ). ಮಹಾಜನ ಕಾಲೇಜು.
ಭಾವಗೀತೆ- ಎಂ.ಎನ್. ಪೂಜಾ, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜ್ (ಪ್ರಥಮ), ಕೆ.ವಿ. ಅನನ್ಯ, ಮಹಾಜನ ಕಾಲೇಜು (ದ್ವಿತೀಯ), ಎಸ್. ಸುಷ್ಮಿತ, ಜೆಎಸ್ಎಸ್ ಕಾಲೇಜು (ತೃತೀಯ), ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಡ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

