ಚರ್ಮ ಕುಶಲ ಕಾರ್ಮಿಕರ ಧರಣಿ
ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಲಿಡ್ಕರ್ ಮಾರಾಟ ಮಳಿಗೆ ಎದುರು ಫೆ.19ರ ಬೆಳಗ್ಗೆ 10ಕ್ಕೆ ಧರಣಿ ಹಮ್ಮಿಕೊಂಡಿರುವುದಾಗಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕುಶಲ ಕಾರ್ಮಿಕರ ಸಂಘದ ಅಧ್ಯಕ್ಷ ಟಿ. ನಾರಾಯಣ ತಿಳಿಸಿದ್ದಾರೆ. ಲಿಡ್ಕರ್ ಮಾರಾಟ ಮಳಿಗೆಯ ವ್ಯವಸ್ಥಾಪಕ ಕುಮಾರ್ರಾಜ್ ಅವರು 4 ಲಕ್ಷ ದಾಸ್ತಾನು ಪಡೆದು ಮಾರಾಟ ಮಾಡಿದ್ದಾರೆ. ಆದರೆ, 2 ವರ್ಷಗಳಾದರೂ ಹಣ ನೀಡದೆ ಅಲೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಹ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಧರಣಿ ಹಮ್ಮಿಕೊಂಡಿರುವುದಾಗಿ ಟಿ. ನಾರಾಯಣ ತಿಳಿಸಿದ್ದಾರೆ.
ನೌಕರರ ಸಹಕಾರ ಸಂಘಕ್ಕೆ ಆಯ್ಕೆ
ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರಾಗಿ ಮಹೇಶ್, ಎಂ. ಸೋಮಶೇಖರ್, ಎಂ. ಶಿವಮೂರ್ತಿ, ವಿ.ಸಿ. ವಿಶ್ವನಾಥ, ಕೆ.ಎನ್. ಅಣ್ಣೇಗೌಡ, ಬಿ.ಸಿ. ಲೋಕೇಶ್, ಡಾ. ರಾಮಲಿಂಗಯ್ಯ, ಎಚ್.ಎಂ. ಮಹದೇವಸ್ವಾಮಿ, ಎನ್. ನಾಗರಾಜು, ಕೆ.ಎಂ. ಗೋಪಮ್ಮ, ಪಿ. ಕಮಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘಕ್ಕೆ ಆಯ್ಕೆ
ನೇಕಾರರ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಎಚ್.ಎನ್. ಉಗ್ರಶೆಟ್ಟಿ, ಎ.ಎನ್. ರಮೇಶ್, ಆರ್. ನರಸಿಂಹಮೂರ್ತಿ, ಎನ್.ಜೆ. ಮಂಜುಳಾ, ಬಿ.ಎಂ. ಲತಾ ಮಹೇಶ್, ಎನ್. ರಾಮಕೃಷ್ಣ, ಜಿ.ಎನ್. ಮೂಡಲಗಿರಿಯಪ್ಪ, ಎಸ್.ಆರ್. ನಂಜಪ್ಪ, ಆರ್. ಪಾಂಡುಕುಮಾರ, ಜಿ. ಶ್ರೀನಿವಾಸ ಅವಿರೋಧ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

