ಲೋಕಾಯುಕ್ತರಲ್ಲಿ 6 ದೂರು ದಾಖಲು
ಮೈಸೂರು: ಲೋಕಾಯುಕ್ತ ಅಧಿಕಾರಿಗಳು ಬುಧವಾರ ಚಾಮುಂಡಿ ಅತಿಥಿ ಗೃಹದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಲೋಕಾಯುಕ್ತ ಪೊಲೀಸ್ ವಿಭಾಗದ ಅಧೀಕ್ಷಕ ಎಸ್.ಎಂ. ಜಗದೀಶ್ ಪ್ರಸಾದ್ ಅವರು ನಡೆಸಿದ ಸಾರ್ವಜನಿಕರಿಂದ ದೂರು ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಆರು ದೂರುಗಳು ದಾಖಲಾಗಿವೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಒತ್ತುವರಿ, ಒಳಚಂರಡಿ ಅವ್ಯವಸ್ಥೆ, ಶಿಕ್ಷಣ ಇಲಾಖೆಯಿಂದ ನಿವೃತ್ತಿ ವೇತನದಲ್ಲಿ ವಿಳಂಬ, ತಹಸೀಲ್ದಾರ್ ಖಾತೆ ಮಾಡಿಕೊಟ್ಟಿಲ್ಲ ಎಂಬುದು ಸೇರಿದಂತೆ ಆರು ದೂರುಗಳು ದಾಖಲಾಗಿವೆ. ನಾಳೆ ನಂಜನಗೂಡು ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಲೋಕಾಯುಕ್ತ ಅಧಿಕಾರಿಗಳು ದೂರು ಸ್ವೀಕರಿಸುವರು.
22ರಿಂದ ಕಲಾ ಉತ್ಸವ ಆರಂಭ
ಮೈಸೂರು: ಕಲಾಧಾರೆ ಕಲ್ಚರಲ್ ಟ್ರಸ್ಟ್, ಮಾಸ್ಟರ್ ಎನ್ ಮಾಸ್ಟರ್ ಡ್ಯಾನ್ಸ್ ಗ್ರೂಪ್ನಿಂದ ವತಿಯಿಂದ ಫೆ.22 ಮತ್ತು 23ರಂದು 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿದೆ. ಫೆ.22ರಂದು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಸೋಮಶೇಖರ್, ಸಂಸದ ವಿಶ್ವನಾಥ್, ಉಪಮೇಯರ್ ಶೈಲೇಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೀಪಕ್ ಭಾಗವಹಿಸುವರು ಎಂದು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಚಾಮರಾಜ್ ಕಲಾಧಾರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭರತನಾಟ್ಯ, ಜಾನಪದ ನೃತ್ಯ, ಪಾಶ್ಚಿಮಾತ್ಯ ನೃತ್ಯ, ಸಾಮೂಹಿಕ ಸಂಗೀತ, ಹಾಡುಗಾರಿಕೆ, ಶಾಲಾ ಮಕ್ಕಳಿಗೆ ಚಿತ್ರಕಲೆ, ವೇಷಭೂಷಣ ಸ್ಪರ್ಧೆ ನಡೆಯಲಿವೆ. ಮಾ. 8, 9ರಂದು ಸಮಾರೋಪ ಸಮಾರಂಭವನ್ನು ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಕಲಾ ಪೋಷಕರಾದ ವೆಂಕಟೇಶ್, ಮೋಹನ್, ಸೋಸಲೆ ಸಿದ್ದರಾಜು, ಇಂದಿರಾ ವೆಂಕಟೇಶ್ ಇದ್ದರು.
ಸಂಘಕ್ಕೆ ಆಯ್ಕೆ
ಮೈಸೂರು: ವಿಜಯನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿಗೆ ಕಾಳೇಗೌಡ (ಅಧ್ಯಕ್ಷರು), ಚಿನ್ನಸ್ವಾಮಿ (ಉಪಾಧ್ಯಕ್ಷರು), ಶಾಮಣ್ಣ (ಗೌರವ ಕಾರ್ಯದರ್ಶಿ), ಶ್ಯಾಮ್ ಪ್ರಸಾದ್ (ಸಂಘಟನಾ ಕಾರ್ಯದರ್ಶಿ), ರಾಮಕೃಷ್ಣ (ಖಜಾಂಚಿ), ಮೂರ್ತಿ, ಹನುಮಂತಶೆಟ್ಟಿ, ಶಿವಣ್ಣ, ಚಿಕ್ಕಬೋರೇಗೌಡ, ಶಕುಂತಲಾಬಾಯಿ, ನಾಗರತ್ನಮ್ಮ, ಪಿ.ಟಿ.ಮಂಜುನಾಥ್, ಜವರಯ್ಯ (ಸದಸ್ಯರು) ನೇಮಕವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

