ಮೈಸೂರು

ಚಂದಗಾಲು ಗ್ರಾಪಂಗೆ ಆಯ್ಕೆ

Published On :

ಕೆ.ಆರ್. ನಗರ: ತಾಲೂಕಿನ ಚಂದಗಾಲು ಗ್ರಾಪಂ ಅಧ್ಯಕ್ಷರಾಗಿ ಸಿ.ಆರ್. ಮಂಜುನಾಥ್, ಉಪಾಧ್ಯಕ್ಷರಾಗಿ ಟಿ. ಅಣ್ಣಯ್ಯ ಅವಿರೋಧ ಆಯ್ಕೆಯಾದರು. ಪಂಚಾಯ್ತಿ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಮಂಜುನಾಥ್ ಮತ್ತು ಟಿ. ಅಣ್ಣಯ್ಯ ಅವರಿಬ್ಬರನ್ನು  ಹೊರತುಪಡಿಸಿ, ಬೇರಾರು ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ ಅವಿರೋಧ ಆಯ್ಕೆ ಪ್ರಕಟಿಸಿದರು.



ಮಣಿಯಮ್ಮ ಪ್ರಭಾರ ಗ್ರಾಪಂ ಅಧ್ಯಕ್ಷೆ
ಕೆ.ಆರ್. ನಗರ: ತಾಲೂಕಿನ ಲಾಳಂದೇವನಹಳ್ಳಿ ಗ್ರಾಪಂ ಪ್ರಭಾರ ಅಧ್ಯಕ್ಷರಾಗಿ, ಉಪಾಧ್ಯಕ್ಷೆ ಮಣಿಯಮ್ಮ ಬುಧವಾರ ಅಧಿಕಾರ ಸ್ವೀಕರಿಸಿದರು.
ಈವರೆಗೆ ಅಧ್ಯಕ್ಷರಾಗಿದ್ದ ಮಹದೇವನಾಯಕ ಅವರ ರಾಜಿನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಮಾಜಿ ಅಧ್ಯಕ್ಷರಾದ ಶೃತಿ ಪುಟ್ಟರಾಜು, ಸದಸ್ಯರಾದ ದಿವಾಕರ, ಗಿರೀಶ್, ಮಾದಯ್ಯ, ಸ್ವಾಮಿನಾಥ್, ಇನಾಸಪ್ಪ, ಕುಮಾರ್, ಈರಮ್ಮ, ಬಸವರಾಜು, ಮಹದೇವ, ಮಾಜಿ ಉಪಾಧ್ಯಕ್ಷ ಮಹೇಶ್, ಜೆಡಿಎಸ್ ಮುಖಂಡರಾದ ಪುಟ್ಟರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.