ಸಂಭ್ರಮದ ಈದ್ ಮಿಲಾದ್
ಕ.ಪ್ರ.ವಾರ್ತೆ , ಹುಣಸೂರು , ಜ. 15
ಪಟ್ಟಣದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರರ ಹುಟ್ಟುಹಬ್ಬದ ಅಂಗವಾಗಿ ಮುಸ್ಲಿಮರು ಬೃಹತ್ ಮೆರವಣಿಗೆ ನಡೆಸುವ ಮೂಲಕ ಈದ್ ಮಿಲಾದ್ ಆಚರಿಸಿದರು.
ಸಂಜೆ ಈದ್ಗಾ ಮೈದಾನದಲ್ಲಿ ಗುರುಗಳಿಂದ ಪ್ರವಚನ ಏರ್ಪಡಿಸಲಾಗಿತ್ತು. ಪಟ್ಟಣದ ಹಜರತ್ ಬೈರುನ್ ಉರುಸ್ ಮತ್ತು ಈ ಮಿಲಾದ್ ಸಮಿತಿ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ನಂತರ ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆಯಲ್ಲಿ ಮೆಕ್ಕಾ-ಮದೀನಾ ಹಾಗೂ ಇತರೆ ಮಾದರಿಗಳ ಸ್ತಬ್ದ ಚಿತ್ರಗಳು, ಕೈಯಲ್ಲಿ ಹಸಿರು ಬಾವುಟ ಹಿಡಿದು ಘೋಷಣೆ ಕೂಗಿ, ತಾಲೂಕಿನ ನಾನಾ ಕಡೆಯಿಂದ ಬಂದಿದ್ದ ನೂರಾರು ಯುವಕರ ತಂಡ ಸಾರ್ವಜನಿಕರ ಗಮನ ಸೆಳೆದರು.
ಹೂವು, ಹಸಿರು ಬಾವುಟಗಳಿಂದ ಅಲಂಕರಿಸಿದ್ದ ಕಾರು, ಜೀಪು, ಆಟೋ, ಲಾರಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು.
ಮೆರವಣಿಗೆಯಲ್ಲಿ ಮಸೀದಿ ಗುರುಗಳಾದ ಷಾ ಆಲಮ್, ಬಯ ಮುನ್ನೀಸಾ, ಪುರಸಭಾ ಸದಸ್ಯರಾದ ಹಜರತ್ ಜಾನ್, ಜಾಕೀರ್ ಹುಸೇನ್, ನಸರುಲ್ಲಾ, ಮುಖಂಡರಾದ ಮಜಾಜ್ ಮಹಮದ್, ಮೊಯಿದುಲ್ಲಾ ಷರೀಫ್, ಫಜಲುಲ್ಲಾ, ಅಫ್ರೋಜ್ ಅಹಮದ್, ಮಿಲಾದ್ ಸಮಿತಿ ಅಧ್ಯಕ್ಷ ಸರದಾರ್ ಇದ್ದರು. ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ರಸಾದ್, ಎಸ್ಐ ಲವ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.
ಸಡಗರದ ಈದ್ ಆಚರಣೆ
ಪಿರಿಯಾಪಟ್ಟಣ: ಪಟ್ಟಣದ ಮೇದರಬ್ಲಾಕಿನ ಮಸೀದಿಯಲ್ಲಿ ಮಂಗಳವಾರ ರಾತ್ರಿ ಮುಸ್ಲಿಮರು ಅಹಲ್ ಸುನ್ನತ್ ವಲ್ ಜಮಾತ್ ಮಸ್ಜೀದ್ ಪಂಗಡದವರಿಂದ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಹಾಗೂ ಈದ್ ಮಿಲಾದ್ ಆಚರಿಸಲಾಯಿತು.
ಸೂಫಿಸಂತರ ಸಮುದಾಯದ ಅಧ್ಯಕ್ಷ ಅಬ್ದುಲ್ ಖಾದರ್ ಮಾತನಾಡಿ, ಸೂಫಿಸಂತರ ಸಮುದಾಯದವರು 18 ವರ್ಷಗಳಿಂದ ಈ ಮಸೀದಿಯಲ್ಲಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದು, ಎಲ್ಲರಿಗೂ ಸೌಹಾರ್ದತೆ ಹಾಗೂ ಶಾಂತಿಯುತವಾಗಿ ಬದುಕು ಸಾಗಿಸುತ್ತಿದ್ದು, ತಾಲೂಕಿನ ವಿವಿಧೆಡೆಯಲ್ಲಿ ನೆಲೆಸಿರುವ ಸಮುದಾಯದವರು ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು. ಸೂಫಿಸಂತರ ಸಮುದಾಯದ ಕಾರ್ಯದರ್ಶಿ ಅಕ್ಬಲ್ ಅಹಮ್ಮದ್, ರಹೀಮ್ ಸಾಬ್, ಜಾಮಿಯತ್ ಖಾನ್, ಸಯ್ಯದ್ ಸಾಧಿಕ್, ಮಸ್ರೂಲ್ ಖಾನ್, ಅಬ್ದುಲ್ ವಾಹಬ್, ರಾಜಿಖ್ ಅಹಮ್ಮದ್, ಸಯ್ಯದ್ ಕರೀಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

