ಮೈಸೂರು

ಹೊಣೆ ಅರಿತು ಕೆಲಸ ಮಾಡಿ

Published On :

ಕೆ.ಆರ್. ನಗರ: ಸರ್ಕಾರಿ ನೌಕರರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ, ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ಮತ್ತು ತುಳಿತಕ್ಕೊಳಗಾದವರ ಮನೆ ಬಾಗಿಲಿಗೆ ತಲುಪಿಸಿದರೆ ಜನ ನಮ್ಮನ್ನು ಪ್ರೀತಿಸಿತ್ತಾರೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ.ರಾಮು ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾ. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಿಗೆ ಸನ್ಮಾನ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಎಂ.ಎಸ್.ಯದುಗಿರೀಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಆರೋಗ್ಯ ಶಿಬಿರ, ಕ್ರೀಡಾ ಕೂಟ, ಪ್ರತಿಭಾ ಪುರಸ್ಕಾರ ಸೇರಿದಂತೆ ಇತರ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾಜಿ ಅಧ್ಯಕ್ಷ ಸಣ್ಣಲಿಂಗಪ್ಪ ಮತ್ತು ಸಂಘಕ್ಕೆ ಕ್ಯಾಲೆಂಡರ್‌ಗಳನ್ನು ಕೊಡುಗೆಯಾಗಿ ನೀಡಿದ ಗುತ್ತಿಗೆದಾರ ಹರ್ಷಕುಮಾರ್‌ಗೌಡ ಅವರನ್ನು ಸನ್ಮಾನಿಸಿದರು.
ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ತಹಸೀಲ್ದಾರ್ ಬಿ.ಎನ್.ವೀಣಾಕುಮಾರ್, ಸಂಘದ ಗೌರವ ಅಧ್ಯಕ್ಷೆ ಎನ್.ಎಸ್.ಭಾಗ್ಯ, ಪ್ರಧಾನ ಕಾರ್ಯದರ್ಶಿ ಪ್ರಸನ್ನ, ಉಪಾಧ್ಯಕ್ಷರಾದ ಕುಚೇಲ, ಪ್ರಭಾಕರ, ಕಾರ್ಯದರ್ಶಿ ಎಚ್.ಆರ್.ಯಶವಂತ್, ಸಹಕಾರ್ಯದರ್ಶಿ ಕೆ.ಜಲೇಂದ್ರ, ಖಜಾಂಚಿ ಭಾಸ್ಕರ್, ಡಾ. ಟಿ.ಶಿವಪ್ರಸಾದ್, ಎಚ್.ಡಿ.ಕೋಟೆ ತಾ. ಅಧ್ಯಕ್ಷ ಶ್ರೀಕಂಠಯ್ಯ, ಹುಣಸೂರು ತಾ. ಅಧ್ಯಕ್ಷ ವರದರಾಜು, ರಾಜ್ಯ ಪರಿಷತ್ ಸದಸ್ಯ ಎಂ.ಸಿ. ಶ್ರೀಕಾಂತ್, ನಿರ್ದೇಶಕರಾದ ಕೆ. ಲೋಕೇಶ್, ಕುಮಾರಸ್ವಾಮಿ, ಮಹದೇವ್, ಸುರೇಶ್, ರಂಗನಾಯಕ, ಸುರೇಶ್, ತಾ. ಕಸಾಪ ಗೌರವ ಕಾರ್ಯದರ್ಶಿ ರಿಜ್ವಾನ್, ಸಂಚಾಲಕ ರಾಜಯ್ಯ, ತಾ. ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಜಶೇಖರ, ಕಂದಾಯ ಇಲಾಖೆಯ ಎಂ. ಮಹದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.