ಮೈಸೂರು

ಕಡ್ಡಾಯವಾಗಿ ಮತದಾನ ಮಾಡಲು ಕರೆ

Published On :

ಎಚ್.ಡಿ. ಕೋಟೆ: ಒಂದು ಮತದಿಂದ ದೇಶದ ದಿಕ್ಕನ್ನೇ ಬದಲಾಯಿಸಲಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕೆಂದು ಉಪನ್ಯಾಸಕ ಕುಮಾರ್ ಕರೆ ನೀಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ಶೇ.50 ರಷ್ಟು ಯುವಕರು ಇದ್ದಾರೆ. ಅವರು ಸಂಪೂರ್ಣವಾಗಿ ಜಾಗೃತರಾಗಬೇಕಾಗಿದೆ. ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು. ಈ ಹಕ್ಕಿನೊಂದಿಗೆ ಪ್ರತಿಯೊಬ್ಬರಿಗೂ ಎಲ್ಲ ರೀತಿಯ ಹಕ್ಕು ಸಹ ಲಭ್ಯವಾಗಲಿದೆ ಎಂದು ಹೇಳಿದರು. ತಹಸೀಲ್ದಾರ್ ಕೃಷ್ಣ ಮಾತನಾಡಿ, ಮತದಾರರ ಪಟ್ಟಿಯಲ್ಲಿ ನ್ಯೂನ್ಯತೆ ಮೊದಲೇ ಹೇಳಿದರೆ, ಮತದಾರರ ಪಟ್ಟಿಯಲ್ಲಿ ಇರುವ ನ್ಯೂನ್ಯತೆ ಸರಿಪಡಿಸಬಹುದು. ಪಟ್ಟಿಯಲ್ಲಿ ತಿದ್ದುಪಡಿ, ಸೇರ್ಪಡೆ, ಮಾರ್ಪಾಡುಗಳನ್ನು ಮಾಡುವುದಕ್ಕಾಗಿ ಸರ್ಕಾರವು ಎಲ್ಲ ಸಮಯದಲ್ಲಿಯೂ ಅವಕಾಶ ಕಲ್ಪಿಸಿದ್ದು, ಸಾರ್ವಜನಿಕರು ತಮ್ಮ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಗ್ರಾಮ ಕಾನೂನು ಸಲಹಾ ಕೇಂದ್ರ ಉದ್ಘಾಟನೆ

ಮೈಸೂರು: ತಾಲೂಕಿನ ಮೆಲ್ಲಳ್ಳಿ- ಹಾರೋಹಳ್ಳಿಯಲ್ಲಿ ಸ್ಥಾಪಿಸಲಾದ ಗ್ರಾಮ ಕಾನೂನು ಸಲಹಾ ಕೇಂದ್ರಕ್ಕೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ನಂದಕುಮಾರ್ ಚಾಲನೆ ನೀಡಿದರು. ಕಾನೂನು ಸಲಹಾ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಆಶಯದಂತೆ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಲಾ ಒಂದು ಗ್ರಾಮದಲ್ಲಿ ಗ್ರಾಮ ಕಾನೂನು ಸಲಹಾ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಕಾನೂನು ಮಾಹಿತಿ ಹಾಗೂ ಕಾನೂನು ನೆರವು ಪಡೆಯಲು ಇದರಿಂದ ನೆರವಾಗುತ್ತಿದೆ. ಕಾನೂನು ನೆರವು ಪಡೆಯುವ ಅವಕಾಶ ಇದ್ದರೂ, ಮಾಹಿತಿ ಇಲ್ಲದ ಕಾರಣ ಇಂತಹ ಅವಕಾಶದಿಂದ ಹಲವರು ವಂಚಿತರಾಗಿದ್ದಾರೆ ಎಂದು ತಿಳಿಸಿದರು.  ಗ್ರಾಪಂ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ದೇವಮ್ಮ, ತಾಪಂ ಉಪಾಧ್ಯಕ್ಷ ಸಿದ್ದಯ್ಯ, ವಕೀಲ ಉಮೇಶ್, ಪಿಡಿಒಬೋರೇಗೌಡ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಎಂ. ಮಹದೇವಸ್ವಾಮಿ ಭಾಗವಹಿಸಿದ್ದರು.

ವಾರ್ತಾ ಇಲಾಖೆಯಿಂದ ಸಂಗೀತ, ಬೀದಿನಾಟಕ

ಎಚ್.ಡಿ. ಕೋಟೆ: ತಾಲೂಕಿನ ಆಯ್ದ  ಗ್ರಾಮಗಳಲ್ಲಿ ವಾರ್ತಾ ಇಲಾಖೆಯಿಂದ ಗ್ರಾಮವಾಹಿನಿ ಮತ್ತು ಗ್ರಾಮಸಂಪರ್ಕ ಕಾರ್ಯಕ್ರಮವನ್ನು 2014ರ ಜ.27 ರಿಂದ ಫೆ.7ರವರೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಯುವ ದಿನಾಂಕ, ಗ್ರಾಮಗಳ ಹೆಸರಿನ ವಿವರ ಇಂತಿದೆ. ಜ.27-ಅಂತರಸಂತೆ, ಸೋಗಹಳ್ಳಿ, ಜ.28-ನೂರಲಕುಪ್ಪೆ, ಬಿಯಾರ, ಜ.29-ಮಚ್ಚೂರು, ಹೊಸೂರು, ಜ. 30- ಬಳ್ಳೆಹಾಡಿ, ಡಿ.ಬಿ. ಕುಪ್ಪೆ, ಜ. 31-ಎನ್. ಬೆಳ್ತೂರು, ಮಳಲಿ, ಫೆ. 1- ಬಿದರಹಳ್ಳಿ, ತೆರಣಿಮಂಟಿ, ಫೆ. 2- ಎನ್. ಬೇಗೂರು, ಬ್ರಹ್ಮಗಿರಿ, ಫೆ. 3-ತುಂಬುಸೋಗೆ, ನಿಲುವಾಗಿಲು, ಫೆ. 4- ಹೆಬ್ಬನಗುಪ್ಪೆ, ಹುಲಿಕೆರೆ, ಫೆ. 5- ಹೈರಿಗೆ, ಮಲಾರಕಾಲೋನಿ, ಫೆ. 6- ಮಾದಾಪುರ, ಗುಜ್ಜಪ್ಪನಹುಂಡಿ, ಫೆ. 7- ಹಂಪಾಪುರ, ಗೋಹಳ. ಚೈತನ್ಯ ಸಂಗೀತ ಕಲಾ ತಂಡ ಹಾಗೂ ನಿಸರ್ಗ ಕಲಾ ತಂಡದಿಂದ ಬೀದಿನಾಟಕ, ಸಂಗೀತ ನಾಟಕ ಹಾಗೂ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.