ಮೈಸೂರು

ಹಾರಾಡಿತು ತ್ರಿವರ್ಣ ಧ್ವಜ

Published On :

ಕ.ಪ್ರ.ವಾರ್ತೆ    ಮೈಸೂರು    ಜ. 26
ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವ ಸಾರುವ ಗಣರಾಜ್ಯೋತ್ಸವವನ್ನು ವಿವಿಧ ಶಿಕ್ಷಣ ಕೇಂದ್ರ ಹಾಗೂ ಸಂಘಸಂಸ್ಥೆಗಳಲ್ಲಿ ಸಡಗರ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಪ್ರಭಾರ ಕುಲಪತಿ ಪ್ರೊ.ಎಂ. ಬಸವಣ್ಣ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟ್ರದ ಪರಮಾಧಿಕಾರಿ ಜನರದ್ದಾಗಿದ್ದು, ಸರ್ವಧರ್ಮ, ಸಮನ್ವಯತೆ ಹಾಗೂ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳಾಗಿದ್ದರೂ ಮೂಲ ಆಶಯ ಈಡೇರಿಲ್ಲ ಎಂದು ವಿಷಾದಿಸಿದರು. ಕುಲಸಚಿವ ಪ್ರೊ..ಎಂ.ಎಸ್. ಶೇಖರ್ ಇದ್ದರು.
ಮುಕ್ತ ವಿವಿ: ಕರ್ನಾಟಕ ರಾಜ್ಯ ಮುಕ್ತವಿವಿಯು ಇಲ್ಲಿನ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಎಚ್. ಗಂಗಾಧರನ್ ಧ್ವಜಾರೋಹಣ ನೆರವೇರಿಸಿದರು. ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಪಿ.ಎಸ್. ನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ ಸುರೇಶ್, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಪ್ರೊ.ವಿಕ್ರಮರಾಜೇಅರಸ್, ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಡಿ ದೇವೇಗೌಡ, ಹಣಕಾಸು ಅಧಿಕಾರಿ ಪ್ರೊ.ಎಲ್. ರಾಜಶೇಖರಯ್ಯ, ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.



ಜೆಎಸ್ಎಸ್ ಪ್ರಾಥಮಿಕ ಶಾಲೆ
ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಶಾಲಾ ಸಮುಚ್ಚಯದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಏರ್ಫೋರ್ಸ್ ಸೆಲೆಕ್ಷನ್ ಬೋರ್ಡ್ ಸ್ಕ್ವಾಡ್ರನ್ ಲೀಡರ್ ವಿ. ಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಶಿಕ್ಷಕಿ ಕೆಂಪನಂಜಮ್ಮ, ಶಿಕ್ಷಕ ಕೆ.ಎಸ್. ಗೌರಿಶಂಕರ ಸ್ವಾಮಿ, ಮಹಿಳಾ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಬಸವರಾಜು, ಮುಖ್ಯ ನಿಲಯಪಾಲಕಿ ಮಮತಾ ಸುರೇಶ್, ಶಿಕ್ಷಕ ಎಂ.ಡಿ ಶಿವಬಸಪ್ಪ ಇದ್ದರು.


ಕೌಟಿಲ್ಯ ವಿದ್ಯಾಲಯ
ಕೌಟಿಲ್ಯ ವಿದ್ಯಾಲಯದಲ್ಲಿ 65ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯೋಪಾಧ್ಯಾಯಿನಿಯರಾದ ಮೀನಲ ಸತ್ಯಮೂರ್ತಿ, ಬಿ.ಬಿ ರಾಧಿಕ ಮತ್ತು ಶ್ರೀಮತಿ ನಿವೇದಿತ ನಾಗೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿನಿ ಸಮೀಕ್ಷೆ ಗಣರಾಜ್ಯೋತ್ಸವ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿ ಖುಷ್ ಸ್ವಾಗತಿಸಿದರು. ಅನನ್ಯ ನಿರೂಪಿಸಿದರು.



ರೇಲ್ವೆ ಕಚೇರಿಯಲ್ಲಿ
ಮೈಸೂರು ವಿಭಾಗದ ನೈಋತ್ಯ ರೇಲ್ವೆ ಇಲಾಖೆ ವತಿಯಿಂದ ಕೆಆರ್ಎಸ್ ರಸ್ತೆಯಲ್ಲಿರುವ ರೇಲ್ವೆ ಕ್ರೀಂಡಾಗಣದಲ್ಲಿ 65ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ವಿಭಾಗೀಯ ವ್ಯವಸ್ಥಾಪಕ ರಾಜಕುಮಾರ್ ಲಾಲ್ ಅವರು ರೈಲ್ವೆ ಪೊಲೀಸರ ಗೌರವ ವಂದನೆ ಸ್ವೀಕರಿಸಿದರು. ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೆ. ಅನಿಲ್ ಕುಮಾರ್ ಮತ್ತಿತರ ಅಧಿಕಾರಿಗಳು ಇದ್ದರು.  


ಚಿಂದಿ ಆಯುವ ಮಹಿಳೆಯಿಂದ
ಸರ್ವಜನಾಂಗ ಹಿತರಕ್ಷಣಾ ವೇದಿಕೆಯು ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಚಿಂದಿ ಆಯುವ ಮಹಿಳೆ ಕಮಲಾ ಬಾಯಿ ಧ್ವಜಾರೋಹಣ ನೆರವೇರಿಸಿದರು. ನಂತರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿದರು. ಗೌರವಾಧ್ಯಕ್ಷ ಕೆ.ವಜ್ರೇಗೌಡ, ಮುಖಂಡರಾದ ಎಂ. ಮಹದೇವ್, ಪುಟ್ಟಯ್ಯ, ಅಬ್ದುಲ್ಗಫಾರ್, ಮಂಟೆಲಿಂಗಯ್ಯ, ಪಿ. ಮಹದೇವ್, ಎಂ. ಪ್ರಭುದೇವ್, ಕೆ.ಆರ್. ಚಿಕ್ಕಣ್ಣ, ಚೆಲುವಪ್ಪ, ಬಿ.ಟಿ ರಾಜಮ್ಮ, ಆರ್. ಮಹದೇವ್, ವೇದಾವತಿ ಇದ್ದರು.


ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಕೆಎಸ್ಆರ್ಪಿ ಐದನೇ ಘಟಕದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ವೇಳೆ ಘಟಕದ ಕಮಾಂಡೆಂಟ್ ಆಗಿರುವ ಈ ಸಾಲಿನ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾಗಿರುವ ಎಸ್. ರಾಮದಾಸಗೌಡ ಅವರನ್ನು ಸನ್ಮಾನಿಸಲಾಯಿತು.

ದೇಶ ಕಟ್ಟಲು ಪರಿಶ್ರಮ ಬೇಕು
ಇಂದು ದೇಶ ಕಟ್ಟಲು ಹೆಚ್ಚಿನ ಪರಿಶ್ರಮ ವಹಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು. ವಿವಿಯ ಕ್ರಾಫರ್ಡ್ ಭವನದ ಮುಂಭಾಗ ಮಾನಸಗಂಗೋತ್ರಿಯ ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ವತಿಯಿಂದ ಆಯೋಜಿಸಿದ್ದ 65ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕುಲಸಚಿವ ಪ್ರೊ.ಸಿ. ಬಸವರಾಜು, ಹಣಕಾಸು ಅಧಿಕಾರಿ ಪ್ರೊ.ರವಿ, ಸಿಂಡಿಕೇಟ್ ಸದಸ್ಯೆ ಪ್ರೊ.ಕೆ. ಸುಮಿತ್ರಾಬಾಯಿ, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಪ್ರೊ.ಎಂ. ರುದ್ರಯ್ಯ ಇದ್ದರು.


ಬಲಿಷ್ಠ ಭಾರತದಲ್ಲಿ ಸಮಸ್ಯೆಗಳು
ಭಾರತ ಬಲಿಷ್ಠ ರಾಷ್ಟ್ರವಾಗಿದ್ದರೂ ಅನೇಕ ಸಮಸ್ಯೆಗಳ ಆಗರವಾಗಿದೆ ಎಂದು ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಚ್.ಎಂ. ರಾಜಶೇಖರ್ ವಿಷಾದಿಸಿದರು. ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜು ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪಪೂ ಕಾಲೇಜಿನ ಪ್ರಾಂಶುಪಾಲರಾದ ಎಂ.ಪಿ. ರಾಜೇಶ್ವರಿ, ಶೈಕ್ಷಣಿಕ ಮುಖ್ಯಸ್ಥ ಪ್ರೊ. ಎಚ್.ಸಿ. ಹೊನ್ನಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಸಿ. ರಾಜಣ್ಣ, ಕನ್ನಡ ಪ್ರಾಧ್ಯಾಪಕ ಕುಮಾರ್ ಇದ್ದರು.


ವರುಣ ಕಾಲೇಜಿನಲ್ಲಿ ಆಚರಣೆ
ಮೈಸೂರು ತಾಲೂಕು ವರುಣ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 65ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲ ಸಿ. ಪುಟ್ಟರಾಜು ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಕಾಲೇಜಿನ ಉಪನ್ಯಾಸಕ ಲೋಕೇಶ್ ಹಾಗೂ ಸಹಶಿಕ್ಷಕ ಪುಟ್ಟುಸ್ವಾಮಿ ಅವರು ಉತ್ಸವದ ಮಹತ್ವ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಿ. ಪುಟ್ಟರಾಜು ವಹಿಸಿದ್ದರು. ಶಿಕ್ಷಕ ನಾಗರಾಜು ಸ್ವಾಗತ ಕೋರಿದರು.


ಬಹುಮಾನ ವಿತರಣೆ
ಇಟ್ಟಿಗೆಗೂಡಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಎನ್. ನೀಲಕಂಠ, ನಗರ ಪಾಲಿಕೆ ಮಾಜಿ ಸದಸ್ಯ ಎಂ. ಸತ್ಯನಾರಾಯಣ, ಮುಖಂಡ ಪ್ರಸನ್ನ ಇದ್ದರು.




ಸ್ತಬ್ಧ ಚಿತ್ರಗಳ ಮೆರವಣಿಗೆ
ಕನಕದಾಸನಗರದ ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸ್ತಬ್ಧಚಿತ್ರ ಮೆರವಣಿಗೆ ಆಯೋಜಿಸಲಾಗಿತ್ತು. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮೆರವಣಿಗೆ ಉದ್ಘಾಟಿಸಿದರು. ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಎಲ್. ರವೀಂದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಕೆ.ಎಂ.ಪರಮೇಶ್, ಸಮಾಜ ಸೇವಕ ಬಸವಣ್ಣ, ಪ್ರಾಂಶುಪಾಲ ಜಗದೀಶ್ ಇದ್ದರು. ಕಾರ್ಯದರ್ಶಿ ಮಂಜುಳಾ ರವೀಂದ್ರ ಸ್ವಾಗತಿಸಿದರು.
ಮಕ್ಕಳಿಗೆ ಪುಸ್ತಕ ವಿತರಣೆ
ನಗರ ಪಾಲಿಕೆ 10ನೇ ವಾರ್ಡ್ನಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಪಾಲಿಕೆ ಸದಸ್ಯ ಎಂ. ಸುನಿಲ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಉಪಮೇಯರ್ ಬಿ.ಸಿದ್ದರಾಜು, ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸಿದರು. ಮುಖಂಡರಾದ ಶಿವಕುಮಾರ್, ಶಂಕರ್, ಮಹಮದ ಅಲಿ, ರುದ್ರಸ್ವಾಮಿ, ಕಾರ್ತಿಕ್ ಇದ್ದರು.
ಅಂಬೇಡ್ಕರ್ ಮಹತ್ವದ ಆಶಯ
ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸದಲ್ಲಿ ಮುಖ್ಯ ಅತಿಥಿಯಾಗಿದ್ದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಶ್ರೀಸಾಮಾನ್ಯನ ಆಶಯಗಳನ್ನು ಕುರಿತು ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಪ್ರೊ..ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನರವೇರಿಸಿದರು. ಪ್ರಭಾರ ಪ್ರಾಂಶುಪಾಲ ಪ್ರೊ.ಎನ್. ನಾಗರಾಜು, ಪ್ರೊ.ಎಂ.ಮಹದೇವಪ್ಪ, ಪ್ರಾಂಶುಪಾಲ ಎಸ್. ಸೋಮಶೇಖರ್ ಹಾಗೂ ಆಯಿಶ್ ಉಪನ್ಯಾಸಕಿ ಸುಮ ಇದ್ದರು.
ವೈದ್ಯಕೀಯ ಕಾರ್ಯಕರ್ತರ ಸಂಭ್ರಮ
ಕೆಆರ್ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಡಾ.ಜಿ.ಎಂ. ಕುದುರಿ, ವಿ. ಸುರೇಶ್ಬಾಬು, ಡಾ.ವೀರೂಪಾಕ್ಷ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.