ಸಹಾಯಾರ್ಥ ಅನ್ನ ಸಂತರ್ಪಣೆ
ಮೈಸೂರು: ನಗರದ ಚಾಮರಾಜಪುರನಲ್ಲಿರುವ ಬಿಗ್ ಬಜಾರ್ ಸೂಪರ್ ಸೆಂಟರ್ನಲ್ಲಿ ಜ.31ರ ಮಧ್ಯಾಹ್ನ 12.30ಕ್ಕೆ ಅರುಣೋದಯ ಟ್ರಸ್ಟ್ ಅಭಿವೃದ್ಧಿಗಾಗಿ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.
ಬಿಗ್ ಬಜಾರ್ಗೆ ಬರುವ ಗ್ರಾಹಕರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು. ಊಟದ ನಂತರ ಗ್ರಾಹಕರು ಅಲ್ಲಿರುವ ಹುಂಡಿಯಲ್ಲಿ ತಮ್ಮ ಇಚ್ಛಾನುಸಾರ ಹಣವನ್ನು ದಾನ ಮಾಡಬಹುದು. ಹೀಗೆ ಸಂಗ್ರಹವಾಗುವ ಹಣವನ್ನು ಒಗ್ಗೂಡಿಸಿ ಅರುಣೋದಯ ಟ್ರಸ್ಟ್ಗೆ ನೀಡಲಾಗುವುದು ಎಂದು ಬಿಗ್ ಬಜಾರ್ ಮಾರುಕಟ್ಟೆ ವ್ಯವಸ್ಥಾಪಕ ಹರೀಶ್ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರುಣೋದಯ ಟ್ರಸ್ಟ್ ಮಾನಸಿಕ ಅಸ್ವಸ್ಥ ಮಕ್ಕಳಿಗಾಗಿ ಶ್ರಮಿಸುತ್ತಿದ್ದು, ಆ ಮಕ್ಕಳ ಅಭಿವೃದ್ಧಿಗಾಗಿ ಉಚಿತ ತರಬೇತಿ ನೀಡುತ್ತಿದೆ. ಈ ಸಂಸ್ಥೆಯಲ್ಲಿ ಈಗಾಗಲೇ 22 ಮಕ್ಕಳಿದ್ದಾರೆ. ಮಾನಸಿಕ ಅಸ್ವಸ್ಥ ಮಕ್ಕಳ ಪೋಷಕರು ಈ ಟ್ರಸ್ಟ್ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಟ್ರಸ್ಟ್ನ ಸರೋಜಾ ಗಣೇಶ್, ಸುಜಾತ್ ಮತ್ತಿತರರು ಇದ್ದರು.
ಮಂಡಿ ಠಾಣೆ ವ್ಯಾಪ್ತಿಯ ವೃದ್ಧ ನಾಪತ್ತೆ
ಮೈಸೂರು: ನಗರದ ಮಂಡಿ ಠಾಣೆ ವ್ಯಾಪ್ತಿಯ ನಿವಾಸಿ ಎನ್. ವೀರಪ್ಪ (75) ನಾಪತ್ತೆಯಾಗಿದ್ದಾರೆ.
ತನ್ನ ತಂದೆ ವೀರಪ್ಪ ಬೆಂಗಳೂರಿನಲ್ಲಿರುವ ತಂಗಿ ನಂಜಮ್ಮ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಮಾಡಿಕೊಡುವಂತೆ ವೀರಪ್ಪ ಪುತ್ರ ನಂದೀಶ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಹರೆ- 5.9 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಎರಡು ಕಿವಿಯಲ್ಲಿ ರಿಂಗ್ ಹಾಕಿರುತ್ತಾರೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418313, 513 ಸಂಪರ್ಕಿಸಲು ಮಂಡಿ ಠಾಣೆ ಎಎಸ್ಐ ಕೆಂಪೇಗೌಡ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

