ರೈತರಿಗೆ ಸಲಹೆ, ಸೂಚನೆ
ಮೈಸೂರು: ಜಿಲ್ಲೆಯಲ್ಲಿ ಫೆ.1 ರಿಂದ 4 ರವರೆಗೆ ಮಳೆ ಬರುವ ಸಾಧ್ಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಯಕ್ಕೆ ಮುಂದಾಗಲು ನಾಗನಹಳ್ಳಿಯ ಸಮಗ್ರ ಕೃಷಿ ಹವಾಮಾನ ವಿಭಾಗದ ತಜ್ಞರು ರೈತರಿಗೆ ಸಲಹೆ ನೀಡಿದ್ದಾರೆ.
ಮುನ್ಸೂಚನೆ ಪ್ರಕಾರ ಈ ವಾರ ಗರಿಷ್ಠ ಉಷ್ಣಾಂಶ 29 - 31 ಮತ್ತು ಕನಿಷ್ಠ ಉಷ್ಣಾಂಶ 17 - 18 ರವರೆಗೆ ದಾಖಲಾಗುವ ಸಾಧ್ಯತೆಯಿದೆ. ಬೆಳಗಿನ ಗಾಳಿಯ ತೇವಾಂಶ ಶೇ. 70 ರಿಂದ 73 ರವರೆಗೆ, ಮಧ್ಯಾಹ್ನದ ತೇವಾಂಶ ಶೇ. 27 ರಿಂದ 39 ಮತ್ತು ಗಾಳಿಯು ಗಂಟೆಗೆ ಸರಾಸರಿ 6 -7 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ವಿಭಾಗದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು ತಿಳಿಸಿದ್ದಾರೆ.
ಬದನೆ ಬೆಳೆ ಬಗ್ಗೆ: ಬದನೆ ಕಾಯಿ ಬಿಡುವ ಸಂದರ್ಭದಲ್ಲಿ ತಗಲುವ ಕೊರಕ ಹುಳು ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 4 ಗ್ರಾಂ ಕಾರ್ಬರಿಲ್ ಅಥವಾ ನಿಂಬಿಸಿಡಿನ್ 5 ಮಿ.ಲೀ ಔಷಧಿಯನ್ನು ಬೆರಸಿ ಬೆಳೆಗೆ ಸಿಂಪಡಿಸಬೇಕು.
ರೇಷ್ಮೆ, ಕೋಳಿ ಸಾಕಾಣಿಕೆ: ರೇಷ್ಮೆ ಹಾಗೂ ಕೋಳಿ ಸಾಕಾಣಿಕೆಯ ಕೋಠಡಿಯ ಉಷ್ಣಾಂಶದ ಸ್ಥಿರತೆ ಕಾಪಾಡುವುದರ ಜತೆಗೆ ಕರುಗಳಿಗೆ ಜಂತುನಾಶಕ ಔಷಧಿಯನ್ನು ಪಶು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಡಿಸಬೇಕು.
ಬಿತ್ತನೆ ಬೀಜಗಳ ಬಗ್ಗೆ: ದವಸ ಧ್ಯಾನಗಳ ಕಟಾವು ಮಾಡಿದ ಬಿತ್ತನೆ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ದಾನ್ಯಗಳ ತೇವಾಂಶ ಶೇ.11 ರಿಂದ 12, ದ್ವಿದಳ ದಾನ್ಯಗಳ ತೇವಾಂಶ ಶೇ. 9, ಎಣ್ಣೆಕಾಳಿನ ತೇವಾಂಶ ಶೇ. 8 ಮತ್ತು ತರಕಾರಿ ಬೀಜಗಳ ತೇವಾಂಶ ಶೇ. 5 ರಿಂದ 6 ರಷ್ಟಿರಬೇಕು. ಇದರಿಂದ ಹೆಚ್ಚು ದಿನ ಬೀಜಗಳನ್ನು ಸಂಸ್ಕರಿಸಬಹುದು ಎಂದಿದ್ದಾರೆ. ಮಾಹಿತಿಗೆ ದೂ. 0821-2591267 ಅಥವಾ 8095227713, ಮೊ. 9343532154 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

