ನಾಳೆ ಬೆಳದಿಂಗಳ ಸಂಗೀತ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಜು.12ರ ಸಂಜೆ 6ಕ್ಕೆ ಪಂ. ಓಂಕಾರನಾಥ್ ಹವಾಲ್ದಾರ ಅವರು ಬೆಳದಿಂಗಳ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಕೇದಾರನಾಥ್ ಹವಾಲ್ದಾರ್ ತಬಲ, ಪಂ.ಸಮೀರಾ ಹವಾಲ್ದಾರ್ ಹಾರ್ಮೋನಿಯಂ ನುಡಿಸಿ ಪಕ್ಕವಾದ್ಯದಲ್ಲಿ ಸಾಥ್ ನೀಡುವರು.
ಸಂಗೀತ ಕಾರ್ಯಕ್ರಮ
ಕುವೆಂಪುನಗರದಲ್ಲಿರುವ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಜು.12ರ ಸಂಜೆ 6ಕ್ಕೆ ಶೈಲಜಾ ಶ್ರೀರಾಂ ಅವರು ಹಾಡುಗಾರಿಕೆ ಪ್ರಸ್ತುತಪಡಿಸುವರು. ಸುಮಂತ್ ಮಂಜುನಾಥ್ ವೈಯೋಲಿನ್, ಎಸ್.ಸುದರ್ಶನ್ ಮಂಡ್ಯ ಮೃದಂಗ ನುಡಿಸಿ ಸಾಥ್ ನೀಡುವರು.
ಪದವಿ ಪ್ರದಾನ
ಆರ್ಐಐಐಟಿ ಸಂಸ್ಥೆಯಿಂದ ಜು.12ರ ಬೆಳಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ಪದವಿ ಪ್ರದಾನ ಸಮಾರಂಭ ಏರ್ಪಡಿಸಿದ್ದು, ಎಸ್ಟಿಪಿಐ ಹೆಚ್ಚುವರಿ ನಿರ್ದೇಶಕ ಡಾ.ಸಂಜಯ್ ತ್ಯಾಗಿ, ಎಸ್.ವಿ.ಸುಬ್ರಹ್ಮಣ್ಯ, ಆರ್.ಸಿ. ಜಗದೀಶ್ ಭಾಗವಹಿಸುವರು.
ಪ್ರತಿಭಾ ಪುರಸ್ಕಾರ
ಯಶಸ್ವಿನಿ ಮಹಿಳಾ ಸಂಘವು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬಬ್ಬೂರ ಕಮ್ಮೆ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕರಿಸಲು ಅರ್ಜಿ ಆಹ್ವಾನಿಸಿದ್ದು, ಅರ್ಹರು ಜು.12 ರೊಳಗೆ ಬಬ್ಬೂರು ಕಮ್ಮೆ ಸಂಘ, ನಂ.ಪಿ12ಕೆ, ಸಾಹುಕಾರ್ ಚೆನ್ನಯ್ಯ ರಸ್ತೆ, ಮೈಸೂರು-9. ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಮೊ. 94809 67661 ಸಂಪರ್ಕಿಸಬಹುದು.
ಸಂಗೀತ ಕಛೇರಿ
ತ್ಯಾಗರಾಜ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ನಿಂದ ಜು.12ರ ಸಂಜೆ 6.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಸ್ವರ ರವಿಶಂಕರ್ ಮತ್ತು ಶ್ವೇತಾ ರಘುನಂದನ ತಂಡ ಸಂಗೀತ ಕಛೇರಿ ನಡೆಸಿಕೊಡಲಿದೆ. ಜು.18ರ ಸಂಜೆ 6.30ಕ್ಕೆ ವಿದ್ಯಾರಣ್ಯಪುರಂನಲ್ಲಿರುವ ಆವನೀ ಶಂಕರಮಠದಲ್ಲಿ ಪದ್ಮಾವತಿ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.
ದೀಕ್ಷಿತ್ ಆರೋಗ್ಯಧಾಮ ಉದ್ಘಾಟನೆ 13 ರಂದು
ಮೈಸೂರು: ನಗರದ ದೀಕ್ಷಿತ್ ಹೆಲ್ತ್ ಕ್ಲಿನಿಕ್ ಮತ್ತು ಸಂಶೋಧನಾ ಸಂಸ್ಥೆಯು ವಿಜಯನಗರದಲ್ಲಿ ಸ್ಥಾಪಿಸಿರುವ ದೀಕ್ಷಿತ್ ಆರೋಗ್ಯಧಾಮದ ಉದ್ಘಾಟನಾ ಸಮಾರಂಭವನ್ನು ಜು.13 ರಂದು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದು, ಇಸ್ರೋ ಮಾಜಿ ನಿರ್ದೇಶಕ ಡಾ.ಕೆ.ಎನ್. ಶಂಕರ ಅಧ್ಯಕ್ಷತೆ ವಹಿಸುವರು. ಸಂಸದ ಪ್ರತಾಪ್ಸಿಂಹ, ಪದ್ಮಶ್ರೀ ಡಾ.ವಿ. ಪ್ರಕಾಶ್, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಮೇಯರ್ ಎನ್.ಎಂ. ರಾಜೇಶ್ವರಿ ಭಾಗವಹಿಸುವರು ಎಂದು ಸಂಸ್ಥೆಯ ಡಾ.ಸಿ.ಎಸ್. ಅನಿಲ್ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಮ್ಮ ಸಂಸ್ಥೆಯು ಆಯುರ್ವೇದ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ನಿರಂತರ ಸೇವೆ ಮಾಡಿಕೊಂಡು ಬರುತ್ತಿದ್ದು, ಇದೀಗ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ಆಯುರ್ವೇದ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಆಯುರ್ವೇದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದ್ದು, ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮೈಸೂರು ಮತ್ತು ಬೆಂಗಳೂರು ಆಯುರ್ವೇದ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಹೆಚ್ಚು ಮಹತ್ವವಿದ್ದು, ಇಂತಹ ಸ್ಥಳದಲ್ಲಿ ದೀಕ್ಷಿತ್ ಆರೋಗ್ಯಧಾಮ ಆರಂಭಿಸಲಾಗಿದೆ. ಎಲ್ಲಾ ವರ್ಗದವರಿಗೂ ಸೇವೆ ಸಿಗಲಿದೆ ಎಂದರು. ಕಿಂದರಿಜೋಗಿ ಸಂಸ್ಥೆಯ ರವೀಂದ್ರ ಜೋಶಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

