ನಾಲೆಗೆ ನೀರು ಹರಿಸಲು ಆಗ್ರಹ
ಭೇರ್ಯ: ಕೆ.ಆರ್. ನಗರ ತಾಲೂಕಿನ ಗಡಿಭಾಗದ ಹೊಸಅಗ್ರಹಾರ ಹೋಬಳಿಯ ಮುಂಜನಹಳ್ಳಿ ಸುತ್ತಮುತ್ತ ತೋಡಿರುವ 38, 39 ಉಪನಾಲೆಗಳಿಗೆ ಹತ್ತಾರು ವರ್ಷಗಳಿಂದ ನೀರು ಹರಿಯದೆ, ಈ ಭಾಗದ ರೈತರು ಕೃಷಿ ಚಟುವಟಿಕೆಗೆ ಪರದಾಡುವಂತಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ನಾಲೆಗೆ ನೀರು ಹರಿಸುವಂತೆ ರೈತ ಮುಖಂಡ ತೇಜಸ್ ಆಗ್ರಹಿಸಿದ್ದಾರೆ. ಗೊರೂರು ಅಣೆಕಟ್ಟೆಯಿಂದ ಹೇಮಾವತಿ ನೀರು ಹಳ್ಳಿ ಮೈಸೂರು ದೊಡ್ಡಹಳ್ಳಿ ಮಾರ್ಗವಾಗಿ ನಾಲೆಗೆ ಹರಿಯುತ್ತಿದ್ದು, ಇತ್ತೀಚೆಗೆ ಗುಳಿವಿನ ಅತ್ತಿಗುಪ್ಪೆ, ಉದಯಗಿರಿ, ಅರಕೆರೆ, ಮುಂಜನಹಳ್ಳಿ, ಕೆಂಚನಹಳ್ಳಿ, ಕಾವಲ್ ಹೊಸೂರು, ಚಿಕ್ಕ ಭೇರ್ಯ ಗ್ರಾಮಗಳಲ್ಲಿ ತೋಡಿರುವ ನಾಲೆಗಳಿಗೆ ನೀರು ತಲುಪದೆ ಇರುವುದು ಇಲ್ಲಿನ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೆ ಹೊಸಅಗ್ರಹಾರ ಹೋಬಳಿಗೆ ಸೇರುವ ಗ್ರಾಮಗಳು ಬರಪೀಡಿತ ಪ್ರದೇಶವೆಂದು ತಾಲೂಕಿನಿಂದ ಈಗಾಗಲೆ ಸರ್ಕಾರಕ್ಕೆ ವರದಿ ತಲುಪಿದ್ದು, ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಬರಪೀಡಿತ ಗ್ರಾಮಗಳನ್ನು ನೀರಾವರಿ ಪ್ರದೇಶವನ್ನಾಗಿ ಮಾಡುವಂತೆ ಇಲ್ಲಿನ ರೈತರು ಒತ್ತಾಯಿಸಿದ್ದಾರೆ.
ಹೇಮಾವತಿ ನೀರು ಗೊರೂರು ಅಣೆಕಟ್ಟೆಯಿಂದ ಸರಾಗವಾಗಿ ಈಗಾಗಲೇ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ದೊಡ್ಡಹಳ್ಳಿ ಗ್ರಾಮದ ಕೊನೆಯ ಭಾಗದವರೆಗೆ ನೀರು ಹರಿಯಲಿದ್ದು, ಇಲ್ಲಿನ ಅಧಿಕಾರಿಗಳ ನಿರ್ಲಕ್ಷದಿಂದ ಮುಂದೋಗದ ನೀರು ಇಷ್ಟು ಗ್ರಾಮದ ರೈತರು ವರ್ಷವಿಡಿ ಬರ ಸಂಕಷ್ಟ ಹೆದುರಿಸುತ್ತಿದ್ದಾರೆ. ನೆರೆಹೊರೆಯಲ್ಲಿ ಸರಾಗವಾಗಿ ನಾಲೆಗಳಲ್ಲಿ ನೀರು ಹರಿಯುತ್ತಿದ್ದರು ನಾಲ್ಕೈದು ಗ್ರಾಮಗಳ ರೈತರಿಗೆ ಮಾತ್ರ ನೀರಿನ ಭಾಗ್ಯ ಇಲ್ಲದಂತಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ವಿರುದ್ದ ಪ್ರತಿಭಟನೆ ಮಾಡಲಾಗುವುದೆಂದು ಈ ಭಾಗದ ರೈತರು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

