ಮೈಸೂರು

ಲಾರಿ ಮಾಲೀಕರ ಮೇಲೆ ಗದಾ ಪ್ರಹಾರ

Published On :

ಕ.ಪ್ರ.ವಾರ್ತೆ    ಟಿ.ನರಸೀಪುರ    ಜೂ.6
ಮರಳು ಮಾಫಿಯಾಗಳಿಗೆ ಮಣೆ ಹಾಕಿ, ಓವರ್ ಲೋಡ್ಗೆ ಕಡಿವಾಣ ಹಾಕದ ಜಿಲ್ಲಾಡಳಿತ ಗ್ರಾಹಕರು ಮನೆ ನಿರ್ಮಾಣದ ದಾಖಲೆಗಳನ್ನು ತಂದರೆ ಮಾತ್ರ ಮರಳು ಪರ್ಮಿಟ್ ಅನ್ನು ನೀಡುತ್ತೇವೆ ಎನ್ನುವ ಮೂಲಕ ಸಾಮಾನ್ಯ ಲಾರಿ ಮಾಲೀಕರ ಮೇಲೆ ಗದಾಪ್ರಹಾರ ಮಾಡಲು ಮುಂದಾಗಿದೆ ಎಂದು ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಶುಕ್ರವಾರ ನಡೆದ ಲಾರಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಪರ್ಮಿಟ್ ಪಡೆಯಲು ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಕ್ಯೂ ನಿಲ್ಲಲು ಸಾಧ್ಯವಿಲ್ಲದಿರುವಾಗ, ಮನೆ ನಿರ್ಮಾಣ ಮಾಡುವ ಮಂದಿಯೆಲ್ಲ ಮರಳು ಪರ್ಮಿಟ್ಗೆ ಸಾಲುಗಟ್ಟಿ ನಿಲ್ಲಲು ಸಾಧ್ಯವಿಲ್ಲ ಎಂಬುದನ್ನು ಜಿಲ್ಲಾಡಳಿತ ಅರಿಯಬೇಕು.
ಮೂರು ದಿನಗಳ ಗಡುವು: ಸ್ಥಳೀಯ ಲಾರಿಗಳಿಗೆ ವಾರಕ್ಕೊಮ್ಮೆ ಕನಿಷ್ಠ ಮೂರ್ನಾಲ್ಕು ಪರ್ಮಿಟ್ಗಳನ್ನು ಜಿಲ್ಲಾಡಳಿತ ಮುಂದಿನ ಸೋಮವಾರದಿಂದ ನೀಡಬೇಕು. ಇಲ್ಲದಿದ್ದರೆ ರಸ್ತೆಗಳಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅಲ್ಲದೆ ಪರ್ಮಿಟ್ ವಿತರಿಸುವ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮೈಸೂರು ಕಚೇರಿಗೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಲಾರಿ ಮಾಲೀಕರಾದ ನಾಜೀಮ್, ಸೆಮಿವುಲ್ಲಾ, ಮುನ್ನಾದಾದಾ, ಫೈರೋಜ್, ಕೊಪ್ಪಲು ರಂಗಸ್ವಾಮಿ, ರಂಗಪ್ಪ, ನಾಗರಾಜು, ದೇವರಾಜು, ಉಮೇಶ್, ಮುರುಗ, ದಿನೇಶ್, ಮಹದೇವ, ಕುಮಾರ್, ಸತೀಶ್, ಸೋಮ, ರವಿ, ಸ್ವಾಮಿ ಇದ್ದರು.
ರಘುಗೆ ಎಂ.ಎಲ್ಸಿ ಸ್ಥಾನ ನೀಡಲಿ
ಹುಣಸೂರು: ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಮಡಿವಾಳ ಸಮಾಜದ ಆರ್.ರಘು ಅವರನ್ನು ಈ ಭಾರಿ ವಿಧಾನ ಪರಿಷತ್ಗೆ ಆಯ್ಕೆ ಮಾಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ತಾಲೂಕು ವೀರಮಡಿವಾಳ ಯುವಕರ ಸಂಘದ ಅಧ್ಯಕ್ಷ ನಂಜುಂಡ ಒತ್ತಾಯಿಸಿದ್ದಾರೆ.
ಉತ್ತಮ ಫಲಿತಾಂಶ
ಹುಣಸೂರು: ಪಟ್ಟಣದ ಶ್ರೀ ಸತ್ಯಸಾಯಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಪ್ರಥಮ ಸೆಮಿಸ್ಟರ್ನಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಎಲೆಕ್ಟ್ರಿಕಲ್ ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ಕೋಪ್ ಟ್ರೇಡ್ ವಿಭಾಗದಲ್ಲಿನ ಒಟ್ಟು 75 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಯಾಗಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.