ಪಟ್ಟಣ ಅಭಿವೃದ್ಧಿಗೆ 1.10 ಕೋಟಿ
ನಂಜನಗೂಡು: ಪಟ್ಟಣದ ಸರ್ವತೋಮುಖ ಅಭಿವೃದ್ಧಿಯ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲು ಮಂಗಳವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.
ಕ್ರಿಯಾ ಯೋಜನೆ ತಯಾರಿಸಲು ಸಿದ್ಧವಾದ ಕಾಮಗಾರಿಗಳು ನೀರು ಸರಬರಾಜು ವಿತರಣಾ ಜಾಲದ ನವೀಕರಣ, ವೃದ್ಧಿ ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣ, ಒಳಚರಂಡಿ ವ್ಯವಸ್ಥೆ ವಿತರಣಾ ಜಾಲ, ಲ್ಯಾಟರಲ್ ಕಾಮಗಾರಿಗಳು, ವಿದ್ಯುತ್ ದೀಪಗಳ ಅಳವಡಿಕೆ, ಸೇರಿದಂತೆ ಇನ್ನೂ ಹಲವು ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಸದಸ್ಯರು ತೀರ್ಮಾನಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಸಿ.ಎಂ. ಶಂಕರ್ ಮಾತನಾಡಿ, ಹಿಂದಿನ ಸಭೆಯಲ್ಲಿ ಆಡಳಿತ ಅಧಿಕಾರಿ ಅವಧಿಯಲ್ಲಿ ನಡೆಸಿದ ಸಭೆಯ ಮಾಹಿತಿಯನ್ನು ಸಭೆಯ ನಡಾವಳಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿ ಸಭೆಯನ್ನೇ ಮುಂದೂಡಲು ಆಗ್ರಹಿಸಿದಾಗ, ಹಿರಿಯ ಸದಸ್ಯರು ಮಧ್ಯ ಪ್ರವೇಶಿಸಿ 14 ತಿಂಗಳ ನಂತರ ಮೊದಲ ಸಭೆ ನಡೆಯುತ್ತಿದೆ. ತಪ್ಪಿದ್ದರೆ ತಿದ್ದಿ ಹೇಳೋಣ ಸಭೆ ನಡೆಯಲು ಅವಕಾಶ ಮಾಡಿಕೊಡಿ ಎಂದಾಗ ಸಭೆ ಆರಂಭವಾಯಿತು.
ಪಟ್ಟಣ ಪುರಸಭೆಯಲ್ಲಿ ಸದಸ್ಯರಿಗೆ ಗೌರವ ಸಿಗುತ್ತಿಲ್ಲ. ಇಲ್ಲಿನ ಮಧ್ಯವರ್ತಿಗಳಿಗೆ ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ. ಪುರಸಭೆ ನವೀಕರಣ ಮುಖ್ಯವಲ್ಲ, ಪಟ್ಟಣ ಸ್ವಚ್ಛತೆಯಾದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಂಜುನಾಥ್ ಹೇಳಿದರು. ವಾರ್ಡ್ಗಳಲ್ಲಿ ಅರೆ ಬರೆ ಕಾಮಗಾರಿ ನಡೆಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ಅನುಸೂಯ ಒತ್ತಾಯಿಸಿದರು. ಪುರಸಭಾ ಸಿಬ್ಬಂದಿ, ಅಧಿಕಾರಿಗಳು ಪಟ್ಟಣದಲ್ಲೇ ವಾಸಮಾಡಬೇಕು, ವಾರ್ಡ್ಗಳಲ್ಲಿ ಮೂಲ ಸೌಕರ್ಯಗಳಿಗೆ ತೊಂದರೆಯಾದರೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಮಹದೇವಸ್ವಾಮಿ ಸಭೆಯಲ್ಲಿ ತಿಳಿಸಿದರು.
17 ತಿಂಗಳಲ್ಲಿ ಕಾಮಗಾರಿ ಪೂರ್ಣ: 28 ಕೋಟಿ ವೆಚ್ಚದ 24್ಢ7 ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ನೀರಿನ ಸಂಗ್ರಹ ಮೇಲ್ತೊಟ್ಟಿ ನಿರ್ಮಿಸಲು ನಾಲ್ಕು ಭಾಗಗಳಲ್ಲಿ ಗುರುತಿಸಲಾಗಿದ್ದು, ನಾಗಮ್ಮ ಶಾಲೆ, ನ್ಯಾಯಾಲಯದ ಪಕ್ಕ, ಚಾಮಲಾಪುರದ ಹುಂಡಿ ಹಾಗೂ ಹೌಸಿಂಗ್ ಬೋರ್ಡ್ ಕಾಲೋನಿಗಳಲ್ಲಿ ಕಾಮಗಾರಿ ನಡೆಸಲಾಗುವುದು. 17 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಬಹುದೆಂದು ಕೆಎಂಆರ್ಪಿ ಎಇಇ ನರಸಿಂಹೇಗೌಡ ಸಭೆಯಲ್ಲಿ ತಿಳಿಸಿದರು.
ಪುರಸಭಾ ಸದಸ್ಯರು ಸಿಬ್ಬಂದಿ ಕೊರತೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ನೂತನ ಸುತ್ತೋಲೆ ಜಾರಿಗೊಳಿಸಿದ್ದು, ಪೌರ ಸಿಬ್ಬಂದಿ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳದಂತೆ ಆದೇಶ ಪತ್ರ ಬಂದಿದೆ ಎಂದು ಸಭೆಯಲ್ಲಿ ತಿಳಿಸಿದರು. ಪುರಸಭೆಯಲ್ಲಿ ಆರೋಗ್ಯಾಧಿಕಾರಿ, ಕಂದಾಯ ಅಧಿಕಾರಿ, ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ ಇರುವುದರಿಂದ ಯೋಜನಾ ಇಲಾಖೆಯ ಸಿಬ್ಬಂದಿ ಉಪಯೋಗಿಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಸದಸ್ಯರ ಪ್ರಶ್ನೆಗಳಿಗೆ ಮುಖ್ಯಾಧಿಕಾರಿ ಡಿ.ರಮೇಶ್ ಉತ್ತರಿಸಿದರು.
ಸಿಗದ ಫಲಾನುಭವಿಗಳು: ಸರ್ಕಾರದಿಂದ ಸಾರ್ವಜನಿಕರಿಗೆ ಹಲವು ಯೋಜನೆಗಳು ಬಂದಿದ್ದರೂ ಸಮರ್ಪಕವಾಗಿ ಫಲಾನುಭವಿಗಳು ದೊರಕುತ್ತಿಲ್ಲ ಎಂದು ಸಮೂಹ ಸಂಘಟಕಿ ಲೀಲಾವತಿ ಸಭೆಯಲ್ಲಿ ವಿವರಿಸಿದರು.
ರಥದ ಬೀದಿಯಲ್ಲಿ ವರ್ಷಕ್ಕೊಂದು ಬಾರಿ ಚರಂಡಿ ಸ್ವಚ್ಛವಾಗುತ್ತದೆ, ಹೈ ಮಾಸ್ಕ್ ದೀಪಗಳು ಸಮರ್ಪಕವಾಗಿ ಬೆಳಕು ಚೆಲ್ಲುತ್ತಿಲ್ಲ ಎಂದು ಸದಸ್ಯ ರಾಮಕೃಷ್ಣ ಆರೋಪಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ದೊರೆಸ್ವಾಮಿ, ಸಿಒ ಡಿ.ರಮೇಶ್, ಯೋಜನಾಧಿಕಾರಿ ವೆಂಕಟನಾಯಕ್, ಮಾಜಿ ಅಧ್ಯಕ್ಷ ಸಿ.ಎಂ.ಶಂಕರ್, ಬಿ. ಚಲುವರಾಜ್, ಸದಸ್ಯರಾದ ಅನುಸೂಯ, ಚಂದ್ರಶೇಖರ್, ದೊಡ್ಡ ಮಾದಯ್ಯ, ಚಂದ್ರಕಲಾ ಅರಸ್, ಸುಧಾ, ರಾಕೇಶ್, ನಿಂಗಪ್ಪ, ಸುಂದರ ರಾಜು, ಪುಟ್ಟಸ್ವಾಮಿ, ಸಮೂಹ ಸಂಘಟಕಿ ವೀಣಾ, ಪರಿಸರ ಅಧಿಕಾರಿ ಭಾರತಿ, ಎಂಜಿನಿಯರ್ಗಳಾದ ಎಇಇ ನರಸಿಂಹೇಗೌಡ, ಎಇ ಪಂಕಜ, ಇಇ ಯಶಸ್ವಿನಿ, ಆರೋಗ್ಯಾಧಿಕಾರಿ ರೇಖಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

