ಕರಾಟೆಯಲ್ಲಿ ಚಿನ್ನದ ಪದಕ
ಮೈಸೂರು: ನವದೆಹಲಿಯ ತಾಲ್ಕೊಟರ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 30 ರಂದು ನಡೆದ ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಬಾಲಕಿಯರ 14 ವರ್ಷದ 47 ಕೆ.ಜಿ ವಿಭಾಗದ ಚಾಂಪಿಯನ್ಷಿಪ್ನಲ್ಲಿ ಒಕಿನೊವಾ ಶೋರೆನ್ ರಿಯು ಕರಾಟೆ ಶಾಲೆಯ ವಿದ್ಯಾರ್ಥಿ ಅಶ್ವಿನಿ ಪ್ರಥಮ ಸ್ಥಾನ ಗಳಿಸಿ, ಚಿನ್ನದ ಪದಕ ಪಡೆದು, ಅಂತಾರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ನಗರದ ಸಿಕೆಸಿ ಕಾನ್ವೆಂಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶ್ರೀರಾಂಪುರದ ಮಂಜುಳಾ ಮತ್ತು ಸಿ.ಶ್ರೀರಂಗ ಅವರ ಪುತ್ರಿ. ಕರಾಟೆ ಶಾಲೆಯ ಶಿವದಾಸ್, ಜಿ. ಸುಧಾಕರ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಫ್ಯೂಷನ್ ಮಿಷನ್ ಕಳವು: ಆರೋಪಿ ಬಂಧನ
ಮೈಸೂರು: ವಿಜಯನಗರ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, 2.40 ಲಕ್ಷ ರು. ಮೌಲ್ಯದ ಎರಡು ಫ್ಯೂಷನ್ ಮಿಷನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸಾತಗಳ್ಳಿಯ ಎಚ್ಒಪಿ ಮತ್ತು ಆರ್ಎಂಎಸ್ ಲೇಔಟ್ ನಿವಾಸಿ ರಾಜಶೇಖರ್ ಎಂಬವರ ಪುತ್ರ ಮಹದೇವಪ್ಪ (23) ಬಂಧಿತ ಆರೋಪಿ. ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಸಾತಗಳ್ಳಿ ಸಂತ ಜೋಸೆಫ್ ಶಾಲೆಯ ಬಳಿ ಮಹದೇವಪ್ಪನನ್ನು ಹಿಡಿದು ವಿಚಾರಿಸಿದಾಗ, ಇತ್ತೀಚೆಗೆ ವಿಜಯನಗರ 2ನೇ ಹಂತದಲ್ಲಿರುವ ಜಸ್ಕೋ ನೀರು ಸರಬರಾಜು ಕೇಂದ್ರದಲ್ಲಿ ಇರಿಸಿದ್ದ ಎರಡು ಫ್ಯೂಷನ್ ಮಿಷನ್ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ನಂಜನಗೂಡು ಹೌಸಿಂಗ್ ಬೋರ್ಡ್ನಲ್ಲಿರುವ ವಾಟರ್ ಟ್ಯಾಂಕ್ ಶೆಡ್ನಲ್ಲಿ ಇರಿಸಿದ್ದ ಎರಡು ಎಲೆಕ್ಟ್ರೋ ಫ್ಯೂಷನ್ ಮಿಷನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಕಲಾ ಕೃಷ್ಣಸ್ವಾಮಿ, ಎನ್.ಆರ್. ಉಪ ವಿಭಾಗದ ಪ್ರಭಾರ ಎಸಿಪಿ ಕೆ.ಎನ್. ಮಾದಯ್ಯ ಮಾರ್ಗದರ್ಶನದಲ್ಲಿ ವಿಜಯನಗರ ಠಾಣೆಯ ಇನ್ಸ್ಪೆಕ್ಟರ್ ಸಿ.ವಿ. ರವಿ, ಎಸ್ಐಗಳಾದ ಎನ್. ರಘುಪ್ರಸಾದ್, ಬಿ.ಎನ್. ಪುನೀತ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

