ಶಟಲ್ ಕೋರ್ಟ್ ಉದ್ಘಾಟನೆ
ಮೈಸೂರು: ನಗರದ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಗುರುವಾರ ಶಟಲ್ ಕಾಕ್ನ ನೂತನ ಕೋರ್ಟ್ ಉದ್ಘಾಟನೆಗೊಂಡಿತು. ಶಾಸಕ ವಾಸು ಅವರ ಅನುದಾನದಿಂದ ನಿರ್ಮಾಣವಾದ ಈ ನೂತನ ಕೋರ್ಟ್ ಅನ್ನು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಆಟ ಆಡುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಕ್ರೀಡೆ ಒಂದು ಉತ್ತಮ ವ್ಯಾಯಾಮ. ರಾಜಕೀಯದಲ್ಲಿ ಇರುವವರಿಗೆ ತಮ್ಮ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಇರುವುದಿಲ್ಲ. ತಮ್ಮ ಬಿಡುವಿನ ವೇಳೆ ಇಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಸಾರ್ವಜನಿಕರಿಗೆ ಇಲ್ಲಿ ಅವಕಾಶ ಇರುವುದರಿಂದ ಹೆಚ್ಚು ಜನರು ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೆ. ಇದೊಂದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಪತ್ರಕರ್ತ ಕೆ.ಬಿ.ಗಣಪತಿ ಮಾತನಾಡಿ, ಶಾಸಕ ವಾಸು ಅವರು ಉತ್ತಮ ಕೆಲಸ ಮಾಡಿದ್ದಾರೆ. ರಾಜಕೀಯ ಒತ್ತಡದ ನಡುವೆ ಆಟೋಟದ ವ್ಯವಸ್ಥೆ ಇದ್ದರೆ ಒಳ್ಳೆಯದು. ಇದರಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದರು.
ಶಾಸಕ ವಾಸು ಮಾತನಾಡಿ, ಬೆಳಗ್ಗೆ ಆರು ಗಂಟೆಗೆ ನಾನು ಕಚೇರಿಗೆ ಬರುತ್ತೇನೆ. ಸಮಯ ಸಿಕ್ಕಾಗ ಆಟವಾಡುತ್ತೇನೆ. ಮೊದಲು ಈ ಸ್ಥಳ ಗಿಡಗಳು ಬೆಳೆದು ಕಾಡಿನಂತಾಗಿತ್ತು. ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ ಎಂದರು.
10 ಸಾವಿರ ಪ್ರೋತ್ಸಾಹ ಧನ: ಬಲ್ಗೇರಿಯಾದಲ್ಲಿ ನಡೆದ ಡಫ್ ಒಲಂಪಿಕ್ನಲ್ಲಿ ಭಾರತ ಪ್ರತಿನಿಧಿಸಿದ್ದ ಪ್ರಶಾಂತ್ಗೆ ಶಾಸಕ ವಾಸು ಅವರು ವೈಯಕ್ತಿಕವಾಗಿ 10 ಸಾವಿರ ನೆರವಿನ ಚೆಕ್ನ್ನು ಅವರ ಸಹೋದರ ಸತೀಶ್ಗೆ ನೀಡಿದರು. ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕೃಷ್ಣ, ಪಾಲಿಕೆ ಸದಸ್ಯರಾದ ಪ್ರಶಾಂತ್ಗೌಡ, ರಮೇಶ್, ಶಿವಮಾದು, ಭಾಗ್ಯವತಿ, ಮುಖಂಡರಾದ ಕ್ಯಾತನಹಳ್ಳಿ ಶಿವಕುಮಾರ್, ಆರ್. ರಘು, ಸುರೇಶ್ ಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

