ಮೈಸೂರು

ಇಂಧನಕ್ಕೆ ಪರ್ಯಾಯ ಸಂಶೋಧಿಸಿ

Published On :

ಮೈಸೂರು: ಜನಸಂಖ್ಯಾ ಸ್ಫೋಟ ಮತ್ತು ಕೈಗಾರೀಕರಣದಿಂದ ಕಳೆದ ಒಂದು ಶತಮಾನದಿಂದ ಇಂಧನ ಬಳಕೆ ಹೆಚ್ಚಾಗಿದ್ದು 2030ರ ವೇಳೆಗೆ ಇಂಧನ ದೊರೆಯದೆ ಹೋಗಬಹುದು ಎಂದು ಐಐಟಿ ಪ್ರಾಧ್ಯಾಪಕ ಡಾ.ಪಿ.ಹರಿಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರು ಸೈನ್ಸ್ ಫೌಂಡೇಷನ್ ಪ್ರಾದೇಶಿಕ ಪ್ರಾಕೃತಿ ವಿಜ್ಞಾನ ವಸ್ತುಸಂಗ್ರಹಾಲಯದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಜ್ಞಾನಿಗಳೊಂದಿಗೆ ಸಂವಾದ ಸರಣಿ- 2 ರಲ್ಲಿ ಭವಿಷ್ಯದ ಇಂಧನಗಳಲ್ಲಿ ಜೈವಿಕ ಇಂಧನದ ಪಾತ್ರ ಕುರಿತ ಅವರು ಮಾತನಾಡಿದರು. ಮಾನವನ ಐಷಾರಾಮಿ ಜೀವನಕ್ಕಾಗಿ ನೈಸರ್ಗಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಬಳಕೆ ಹೆಚ್ಚಾಗಿದೆ. 1980 ರಿಂದ 2004 ರವರೆಗೆ ಇದರ ಶೇ.50 ರಷ್ಟು ಮೀರಿದೆ. ಇದೇ ರೀತಿ ಬಳಸಿದರೆ 2030ರ ವೇಳೆಗೆ ಇಂಧನ ಸಿಗುವುದಿಲ್ಲ. ಇದನ್ನರಿತು ನಾವು ಪರ್ಯಾಯ ಶಕ್ತಿಗಳಾದ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ, ಉಷ್ಣಶಕ್ತಿ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯಬೇಕು ಎಂದರು.
ಈ ನಾಲ್ಕು ಶಕ್ತಿಗಳಿಂದ ಶೇ.3.75 ರಷ್ಟು ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು. ಜತ್ರೋಪ ಬೀಜಗಳಿಂದ ತೆಗೆದ ಎಣ್ಣೆಯನ್ನು ಡೀಸೆಲ್‌ಗೆ ಪರ್ಯಾಯವಾಗಿ ಬಳಸುತ್ತಿದ್ದಾರೆ. ಇದನ್ನು ಬೇಕಾದ ಪ್ರಮಾಣಕ್ಕೆ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಈ ಇಂಧನಗಳಿಗೆ ಪರ್ಯಾಯವಾಗಿ ಜೈವಿಕ ಇಂಧನವಾದ ಬಯೋ ಎಥೆನಾಲ್ ಅನ್ನು ಸಸ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಬಹುದಾಗಿದೆ. ವರ್ಷಕ್ಕೆ 10 ರಿಂದ 50 ಬಿಲಿಯನ್ ಟನ್ ನಷ್ಟು ಉತ್ಪಾದಿಸಬಹುದು. ಜತೆಗೆ ಬಯೋಹೈಡ್ರೋಜನ್ ಮತ್ತು ಅಲ್ಲಾಲ್ ಎಣ್ಣೆ ಕೂಡ ಭವಿಷ್ಯದ ಇಂಧನವಾಗಿದೆ ಎಂದು ಮಾಹಿತಿ ನೀಡಿದರು.
ಆರ್‌ಎಂಎನ್‌ಎಚ್ ವಿಜ್ಞಾನಿ ಬಿ.ಎಸ್. ಯೋಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಸಿಎಸ್‌ಆರ್‌ಟಿಐ ವಿಜ್ಞಾನಿ ಡಾ.ಟಿ. ತಿಪ್ಪೇಸ್ವಾಮಿ, ಮೈಸೂರು ಸೈನ್ಸ್ ಫೌಂಡೇಷನ್ ಅಧ್ಯಕ್ಷ ಸಿ. ಕೃಷ್ಣೇಗೌಡ, ಉಪಾಧ್ಯಕ್ಷ ಡಾ.ಟಿ. ಶಿವಲಿಂಗಸ್ವಾಮಿ, ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್, ಓಂಕಾರ್ ನಾಯಕ್, ವೈಜಯಂತಿ, ಕಾಂತರಾಜು, ಮಹದೇವಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.