ರೈತರ ಹಿತ ತಂಬಾಕು ಮಂಡಳಿಯದ್ದು
ಪಿರಿಯಾಪಟ್ಟಣ: ತಂಬಾಕು ಹೆಚ್ಚು ಬೆಳೆಯುವಂತೆ ರೈತರನ್ನು ಪ್ರೇರೇಪಿಸುವುದು ನಮ್ಮ ಗುರಿಯಲ್ಲ. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ ಎಂದು ಐಟಿಸಿ ಕಂಪನಿಯ ಲೀಫ್ ವ್ಯವಸ್ಥಾಪಕ ರಾಜಶೇಖರ್ ಹೇಳಿದರು.
ತಾಲೂಕಿನ ತೆಲಗಿನಕುಪ್ಪೆ ಗ್ರಾಮದಲ್ಲಿ ಐಟಿಸಿ ಕಂಪನಿ ಹಾಗೂ ತಂಬಾಕು ಮಂಡಳಿ ವತಿಯಿಂದ ಏರ್ಪಡಿಸಿದ್ದ ತಂಬಾಕು ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟದ ವೃದ್ಧಿ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಜಿಲ್ಲೆಯ ತಂಬಾಕಿಗೆ ಭಾರಿ ಬೇಡಿಕೆ ಇತ್ತು. ಆದರೆ ಈಗ ತಂಬಾಕು ಗುಣಮಟ್ಟ ಕಳೆದುಕೊಳ್ಳುತ್ತಿದ್ದು ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿದೆ. ಆದ್ದರಿಂದ ರೈತರು ಕಂಪನಿ ಶಿಫಾರಸು ಮಾಡುವ ಬೀಜ ಮತ್ತು ರಸಗೊಬ್ಬರಗಳನ್ನು ಉಪಯೋಗಿಸುವುದರ ಜೊತೆಗೆ ಬೆಳೆಯುವ ವಿಧಾನವನ್ನು ಅನುಸರಿಸುವಂತೆ ಸೂಚಿಸಿದರು.
ವಿಜ್ಞಾನಿ ಡಾ.ರಾಮಕೃಷ್ಣ ಮಾತನಾಡಿ, ತಂಬಾಕು ಬೆಳೆಯುವ ರೈತರು ಭೂಮಿಯಲ್ಲಿ ಪರ್ಯಾಯ ಬೆಳೆಗಳನ್ನೂ ಬೆಳೆಯಬೇಕು. ಒಂದೆರಡು ವರ್ಷ ಭೂಮಿಯನ್ನು ಪಾಳು ಬಿಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ತಂಬಾಕು ಬೆಳೆಯುವುದರ ಜೊತೆಗೆ ಭೂಮಿಯಲ್ಲಿ ಸೆಣಬನ್ನು ಬೆಳೆಯುವುದರಿಂದ ಭೂಮಿಗೆ ಹೆಚ್ಚು ಅನುಕೂಲವಾಗುತ್ತದೆ. ತಂಬಾಕು ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಗುಣಮಟ್ಟ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ರೈತನ ಆರೋಪ: ಕೃಷಿ ವಿಜ್ಞಾನಿ ಡಾ.ರಾಮಕೃಷ್ಣ ರೈತರಿಗೆ ತಂಬಾಕು ಬೆಳೆಯುವಲ್ಲಿ ಸಲಹೆ ನೀಡುತ್ತಿದ್ದ ವೇಳೆ ಅಮೋನಿಯಂ ಸಲ್ಫೇಟ್ ಮತ್ತು ಎಸ್‌ಒಪಿ ಗೊಬ್ಬರವನ್ನೇ ಬಳಸಬೇಕು ಎನ್ನುತ್ತಿದ್ದಂತೆಯೇ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿ, ರೈತರಿಗೆ ಅಮೋನಿಯಂ ಸಲ್ಫೇಟ್ ಮತ್ತು ಎಸ್‌ಒಪಿ ಗೊಬ್ಬರ ನೀಡುವಲ್ಲಿ ತಂಬಾಕು ಮಂಡಳಿ ವಿಳಂಬ ನೀತಿ ಅನುಸರಿಸುತ್ತಿದೆ. ಈಗಿರುವಾಗ ರೈತನು ಉತ್ತಮ ತಂಬಾಕು ಬೆಳೆ ಬೆಳೆಯಲು ಹಾಗೂ ಹೆಚ್ಚು ಇಳುವರಿಯನ್ನು ಪಡೆಯಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.
ವಿಜ್ಞಾನಿಗಳಾದ ಡಾ.ಶೆಣೈ, ಡಾ.ಶ್ರೀನಿವಾಸ್‌ರೆಡ್ಡಿ, ಡಾ.ಮಹದೇವಸ್ವಾಮಿ, ಡಾ.ಶ್ರೀನಿವಾಸ್ ತಂಬಾಕು ಬೆಳೆ ಬೆಳೆಯುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

