ಮಯ್ಯ ಕೃತಿ ತರ್ಜುಮೆಯಾಗಲಿ
ಕ.ಪ್ರ. ವಾರ್ತೆ ್ಣ ಮೈಸೂರು ್ಣ ಜೂ.22
ಪ್ರಸಿದ್ಧ ಆಹಾರತಜ್ಞ ಡಾ.ಪಿ.ಸದಾನಂದ ಮಯ್ಯ ಅವರು ಭಾರತರತ್ನ ಪುರಸ್ಕಾರಕ್ಕೂ ಅರ್ಹರು ಎಂದು ಖ್ಯಾತ ವಿದ್ವಾಂಸ ಹಾಗೂ ಲೇಖಕ ಡಾ.ಕೆ.ಎಸ್. ನಾರಾಯಣಾಚಾರ್ಯ ಅಭಿಪ್ರಾಯಪಟ್ಟರು.
ಮಯ್ಯಾಸ್ ಬೆವರೇಜಸ್ ಆ್ಯಂಡ್ ಫುಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಯ್ಯಾಸ್ ಮಾತುಕತೆ ಹಾಗೂ ಬೆಳ್ಳಿತಟ್ಟೆ ಕೃತಿಯ ಎರಡನೇ ಆವೃತ್ತಿಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಸೃಷ್ಟಿಯಲ್ಲಿ ಅನ್ನ ಮೊದಲು ನಂತರ ಮನುಷ್ಯ. ಅನ್ನಮಯ ಕೋಶದಿಂದ ಪ್ರಾಣಮಯ ಕೋಶ. ಅಂತೆಯೇ ಡಾ.ಸದಾನಂದ ಮಯ್ಯ ಅವರು ಅನ್ನಮಯ ಕೋಶವನ್ನು ವಿಜ್ಞಾನಮಯವನ್ನಾಗಿಸಿ ಜನರಿಗೆ ಆರೋಗ್ಯವಂತರಾಗಿಸಲು ಸಂಶೋಧನೆ ನಡೆಸಿ ಯಶಸ್ಸು ಕಂಡವರು. ಇಂಥವರಿಗೆ ಕೇವಲ ಪದ್ಮಶ್ರೀ ಮಾತ್ರವಲ್ಲ, ಭಾರತರತ್ನ ಬರಬೇಕು. ಇವರ ಕೃತಿಯು ಆಂಗ್ಲಭಾಷೆಗೆ ತರ್ಜುಮೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವ ಕೆಲಸವಾಗಲಿ ಎಂದು ಆಶಿಸಿದರು. ಖಾದ್ಯ ತಯಾರಕರಿಗೆ ಕೇವಲ ಆರ್ಥಿಕ ಚಿಂತನೆ ಇದ್ದರೆ ಸಾಲದು, ಇದರ ಜತೆಗೆ ಆರೋಗ್ಯದ ಕಡೆಯೂ ಗಮನ ಹರಿಸಿದಾಗ ಜನರು ಬರುತ್ತಾರೆ. ಜೊತೆಗೆ ಹಣವೂ ಬರಲಿದೆ. ಇದರಿಂದ ದೇಶಕ್ಕೂ ಒಳಿತಾಗಲಿದೆ ಎಂದು ಹೇಳಿದರು.
ಅಂಕಣದಲ್ಲಿ ಅಗತ್ಯ ಮಾಹಿತಿ: ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಯಾವ ರೀತಿಯ ಆಹಾರ ಸೇವಿಸಬೇಕು, ಹೇಗೆ ಸೇವಿಸಬೇಕು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಹಾಗೂ ಅದರ ಮಹತ್ವವೇನು ಮುಂತಾದ ವೈಜ್ಞಾನಿಕ ವಿಷಯಗಳನ್ನು ತಮ್ಮ ಅಂಕಣದಲ್ಲಿ ನೀಡುತ್ತಾ ಬಂದಿದ್ದಾರೆ. ಇದನ್ನು ಓದಿ ಅನುಸರಿಸಿದರೆ ವೈದ್ಯರ ಬಳಿ ಹೋಗುವುದು ತಪ್ಪಬಹುದು. ಮಯ್ಯ ಅವರ ಬೆಳ್ಳಿತಟ್ಟೆ ಓದುಗರ ಬದುಕಿಗೆ ಬಂಗಾರದ ತಟ್ಟೆಯಾಗಲಿ ಎಂದು ಅವರು ಆಶಿಸಿದರು. ಕೃತಿ ಲೋಕರ್ಪಣೆಗೊಳಿಸಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ, ಮೈಸೂರಿಗೆ ಪ್ರಚಾರಕ್ಕಾಗಿ ಮೊದಲು ಬಂದಾಗ ಡಾ.ನಾರಾಯಣಾಚಾರ್ಯರ ಪ್ರವಚನ ಕೇಳಲು ಹೋಗಿದ್ದೆ. ಗೆಲವು ಅಸಾಧ್ಯ ಎನ್ನುವಂತಹ ಆ ಸಂದರ್ಭದಲ್ಲಿ ನನಗೆ ಆತ್ಮಸ್ಥೈರ್ಯ ತುಂಬಿ ಆಶೀರ್ವದಿಸಿದರು. ಹಾಗೆಯೇ ನಾನು ಪ್ರಕಾಶನ ಮಾಡಿ ಕೈಸುಟ್ಟು ಕೊಂಡಾಗ ನೆರವಾದವರು ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಎಂದು ಸ್ಮರಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಕನ್ನಡಪ್ರಭ ಪುರವಣಿ ಸಂಪಾದಕ ರಾಧಾಕೃಷ್ಣ ಭಡ್ತಿ ಮುಖ್ಯ ಅತಿಥಿಗಳಾಗಿದ್ದರು. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಮಾಲೀಕ ಸುಬ್ರಹ್ಮಣ್ಯ ಹಾಗೂ ಸುದರ್ಶನ ಮಯ್ಯ ಇದ್ದರು. ಸಂಸ್ಥೆಯ ರವಿಚಂದ್ರ ಸ್ವಾಗತಿಸಿದರು. ನಟ ಯಶವಂತ ಸರದೇಶಪಾಂಡೆ ನಿರೂಪಿಸಿದರು. ನಂತರ ಮಯ್ಯಾಸ್ ಬೆವರೇಜಸ್ ಆ್ಯಂಡ್ ಫುಡ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಡಾ.ಪಿ. ಸದಾನಂದ ಮಯ್ಯ ಸಂವಾದ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರ ಸಾಧನೆ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

