ಮೈಸೂರು

ಕೇಬಲ್ ಆಪರೇಟರ್‌ಗಳ ದೂರು

Published On :

ಕೆ.ಆರ್. ನಗರ: ಕಾವೇರಿ ಗ್ರಾಮಾಂತರ ಕೇಬಲ್ ಆಪರೇಟರ್‌ಗಳ ಸಂಘದ ಕೆಲವು ಸದಸ್ಯರಿಗೆ ಇ- ಡಿಜಿಟಲ್ ನೆಟ್‌ವರ್ಕ್‌ನ ಪಾಲುದಾರನೆಂದು ಹೇಳಿಕೊಂಡು ಪಟ್ಟಣದ ಮಂಜುನಾಥ್ ಎಂಬವರು ದೂರವಾಣಿ ಮೂಲಕ ರಾತ್ರಿ ವೇಳೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಸಿ.ಜಿ.ಮಧುಸೂದನ ಮತ್ತು ಕಾರ್ಯದರ್ಶಿ ಕೆ.ಜೆ. ಕುಚೇಲ ದೂರಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಂಘದ ಸಭೆಯಲ್ಲಿ ಬೆದರಿಕೆ ಹಾಕುತ್ತಿರುವ ವ್ಯಕ್ತಿಯ ವರ್ತನೆ ಖಂಡಿಸಲಾಯಿತು. ಅಲ್ಲದೆ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿ ಬೆದರಿಕೆಗೆ ಒಳಗಾಗಿರುವ ಸದಸ್ಯರಿಗೆ ರಕ್ಷಣೆ ನೀಡುವಂತೆ ಕೋರಲು ನಿರ್ಧರಿಸಲಾಯಿತು. ಪಟ್ಟಣದಲ್ಲಿರುವ ಇ- ಡಿಜಿಟಲ್ ನೆಟ್‌ವರ್ಕ್‌ಗೂ ಈತನಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ದೂರವಾಣಿ ಮೂಲಕ ಕೆಲವು ಹಿಂದುಳಿದ ಸಮಾಜಕ್ಕೆ ಸೇರಿದ ಗ್ರಾಮೀಣ ಭಾಗದ ಆಪರೇಟರ್‌ಗಳನ್ನು ಜಾತಿ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲವು ಸದಸ್ಯರು ದೂರಿದರು.
ದೂರು ದಾಖಲು: ಸಂಘದ ಅಧ್ಯಕ್ಷ ಸಿ.ಜಿ.ಮಧುಸೂದನ್ ಸಭೆ ನಡೆಸಿದ ನಂತರ ಪದಾಧಿಕಾರಿಗಳು ಮತ್ತು ಸದಸ್ಯರ ಜತೆಗೂಡಿ ಪೊಲೀಸ್ ಠಾಣೆಗೆ ತೆರಳಿ ಮಂಜುನಾಥ್ ವಿರುದ್ಧ ದೂರು ದಾಖಲಿಸಿದರು. ಸದಸ್ಯರಿಗೆ ತೊಂದರೆ ನೀಡುತ್ತಿರುವ ಬಗ್ಗೆ ವಿವರ ನೀಡಿದರು. ಅತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸೂಚನೆ
ಹುಣಸೂರು: ಹನಗೋಡು ಹೋಬಳಿಯ ಕಾಡಂಚಿನ ಪ್ರದೇಶದಲ್ಲಿನ ವಿದ್ಯುತ್ ಕೊರತೆಗೆ ಸಂಸದ ಪ್ರತಾಪ್ ಸಿಂಹ ಸ್ಪಂದಿಸಿ, ಸೆಸ್ಕ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಕೂಡಲೆ ವಿದ್ಯುತ್ ಕೊರತೆ ಸರಿಪಡಿಸುವಂತೆ ಅವರು ಸೂಚಿಸಿದ್ದಾರೆ.
ತಾಲೂಕಿನಲ್ಲಿ ಮಳೆ ಇಲ್ಲದೆ ರೈತರು ವಿದ್ಯುತ್ ನಂಬಿಕೊಂಡು ಸಾವಿರಾರು ರು. ಖರ್ಚು ಮಾಡಿ ವಿದ್ಯುತ್ ಸಂಪರ್ಕಕ್ಕಾಗಿ ಕಾದು ಕುಳಿತಿರುವ ಹನಗೋಡು ಭಾಗದ ಬಿಲ್ಲೇನಹೊಸಳ್ಳಿ ಮತ್ತು ದೊಡ್ಡಹೆಜ್ಜೂರು ಗ್ರಾಪಂ ವ್ಯಾಪ್ತಿಯಲ್ಲಿ ಹಲವು ರೈತರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದಾರೆ. ವಿದ್ಯುತ್ ಒವರ್ ಲೋಡ್ ಆಗಿ ಸುಟ್ಟು ಹೋದರೆ, ಮತ್ತೊಂದೆಡೆ ನಿರಂತರ ಜ್ಯೋತಿ ಯೋಜನೆಯಡಿ 24 ಗಂಟೆ ವಿದ್ಯುತ್ ಸಂಪರ್ಕ ನೀಡದೆ ಕೆಲಸ ನಡೆಯುತ್ತಿದೆ ಎಂಬ ನೆಪವೊಡ್ಡುತ್ತಿದ್ದಾರೆ. ಸೆಸ್ಕ್ ಅಧಿಕಾರಿಗಳಿಗೆ ದೂರು ನೀಡಿದರು ಸಹ ಪ್ರಯೋಜನವಾಗಿಲ್ಲ ಎಂದು ನೊಂದ ಗ್ರಾಮಸ್ಥರು ಸಂಸದ ಪ್ರತಾಪ್ ಸಿಂಹ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಎಇಇ ಕಲೀಂ  ನಿರಂತರ ಜ್ಯೋತಿ ಕೆಲಸ ಕಾಮಗಾರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೋಮವಾರದಿಂದ ವ್ಯವಸ್ಥೆ ಮಾಡಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.