ಮೈಸೂರು

ಉತ್ತಮ್ ವಿ. ಗೌಡ ಅಜೇಯ ಶತಕದಾಟ

Published On :

ಮೈಸೂರು: ಆಹ್ವಾನಿತ ಶಾಲೆಗಳ 14 ವರ್ಷದೊಳಗಿನವರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ್ ವಿ. ಗೌಡ ಬಾರಿಸಿದ ಅಜೇಯ ಶತಕದ ನೆರವಿನಿಂದ ಭಾರತೀಯ ವಿದ್ಯಾ ಭವನ ತಂಡ ಜಯಗಳಿಸಿದೆ. ಕುವೆಂಪುನಗರದ ಕನ್ನೇಗೌಡ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯ ವಿದ್ಯಾ ಭವನ ತಂಡವು, ವಿಜಯ ವಿಠಲ ತಂಡವನ್ನು ಮಣಿಸಿತು. ಭಾರತೀಯ ವಿದ್ಯಾಭವನ ತಂಡವು 35 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 246 ರನ್ಗಳಿಸಿತು. ತಂಡದ ಪರ ಉತ್ತಮ್ ವಿ. ಗೌಡ 99 ಎಸೆತ ಎದುರಿಸಿ 118 ರನ್ಗಳಿಸಿ ಅಜೇಯನಾಗುಳಿದ. ಆತನ ಹೊಡೆತದಲ್ಲಿ ಹತ್ತು ಬೌಂಡರಿ ಸೇರಿತ್ತು. ಈತನಿಗೆ ಅನೂಪ್(81) ಉತ್ತಮ ಜೊತೆಯಾಟ ನೀಡಿದ.


ಜಯಲಲಿತಾ 66ನೇಜನ್ಮದಿನಾಚರಣೆ

ಮೈಸೂರು: ಎಐಎಡಿಎಂಕೆ ಅಲ್ಪಸಂಖ್ಯಾತ ವಿಭಾಗದ ಎನ್.ಆರ್. ಕ್ಷೇತ್ರದ ಕಾರ್ಯದರ್ಶಿ ಕಲೀಲ್ ಉರ್ ರೆಹಮಾನ್ ಷರೀಫ್ ನೇತೃತ್ವದಲ್ಲಿ ಶಾಂತಿನಗರದ ಆರ್.ಕೆ. ಟಿಪ್ಪು ಫಂಕ್ಷನ್ಹಾಲ್ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ 66ನೇ ಹುಟ್ಟುಹಬ್ಬ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಪುಗಳೇಂದಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಲ್.ಎನ್. ರಾಮಕಣ್ಣನ್, ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ವಿ.ಎಂ. ಶಹಜಾನ್, ಪ್ರಧಾನ ಅಧ್ಯಕ್ಷ ಕೆ. ಶಿವಾನಂದಂ, ಚಾಮುಂಡೇಶ್ವರಿ ಕ್ಷೇತ್ರದ ಎಸ್.ಡಿ. ಮೂರ್ತಿ, ಕೆ.ಆರ್. ಕ್ಷೇತ್ರದ ಕಾರ್ಯದರ್ಶಿ ಹೇಮಂತ್ ಕುಮಾರ್, ಜಂಟಿ ಕಾರ್ಯದರ್ಶಿ ನಾಗರಾಜ್ ಮುಂತಾದವರು ಭಾಗವಹಿಸಿದ್ದರು.


ಪ್ರಕೃತಿ ವರ್ಣಚಿತ್ರ ಪ್ರದರ್ಶನ ಅನಾವರಣ


ಮೈಸೂರು: ವೈಜಯಂತಿ ಚಿತ್ರಕಲಾ ಕಾಲೇಜು ಬಿವಿಎ ಪದವಿ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳ ಪ್ರಕೃತಿಯ ವರ್ಣಚಿತ್ರ ಪ್ರದರ್ಶನ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಶನಿವಾರ ಆರಂಭವಾಯಿತು. ಯುವ ಕಲಾವಿದ ಟಿ.ಎನ್. ಅಭಿಷೇಕ್, ಕೆ.ಆರ್. ಅವಿನಾಶ್, ಎ.ಎಂ. ಸತೀಶ್ಕುಮಾರ್, ಕಾಂತನಾಯಕ, ಸಿ. ರಾಹುಲ್, ಬಿ.ಕೆ. ವಿಜಯ್, ಪಿ. ರವಿ, ಎಸ್. ಮೋನಿಕಾ, ಅರುಳ್ ಮೇರಿ, ಶುಭಮಂಗಳ, ಆರ್. ಸುನಿತಾ, ಜಿ. ಚರಿಷ್ಮಾ, ಎಸ್. ಶಿವರಾಮು, ಕೆ.ಆರ್. ಸೋಮ, ಜಿ. ನಾಗೇಶ್, ಬಿ.ಎಸ್. ಸುನಿಲ್, ಕೆ. ಗೋವಿಂದ, ಎಚ್.ಎಂ. ಪ್ರಿಯಾ, ಪಲ್ಲವಿ, ಕೆ. ಸಿಂಧೂಕುಮಾರಿ, ಮಹದೇವಮ್ಮ, ಕೆ.ಬಿ. ತೇಜಸ್ವಿನಿ, ಎಸ್. ಪೂಜಾ ಮತ್ತು ಶಶಿರೇಖಾ ಕಲಾಕೃತಿ ಇರಿಸಲಾಗಿದೆ.

ವಿಜ್ಞಾನ ದಿನಾಚರಣೆ ಕಾರ್ಯಾಗಾರ ಯಶಸ್ವಿ


ಮೈಸೂರು: ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಬೆಂಗಳೂರಿನ ಶ್ರೀ ವಿದ್ಯಾ ಎಜುಟೆಕ್ ಸಹ ಸಂಸ್ಥಾಪಕರಾದ ಲಕ್ಷ್ಮೀ ಜೋಯಿಸ್ ಮತ್ತು ಪ್ರಮೋದ್ ಜೋಯಿಸ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವಿದ್ಯಾರ್ಥಿಗಳಲ್ಲಿ ಸಹಜವಾಗಿ ಅಡಗಿರುವ ವಿಜ್ಞಾನ ಸಂಬಂಧಿತ ಕುತೂಹಲ ತಣಿಸುವ, ಅವರ ಕೌತುಕಮಯ ಪ್ರಶ್ನೆಗಳಿಗೆ ಪ್ರಯೋಗಸಹಿತ ಉತ್ತರ ನೀಡುವ ಆಶಯವನ್ನು ಒಳಗೊಂಡಿತ್ತು. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ನಮ್ಮ ಸುತ್ತಮುತ್ತಲಿನ ನಿತ್ಯ ಬಳಕೆಯ ವಸ್ತುಗಳನ್ನೆ ಬಳಸಿಕೊಂಡು ಅವುಗಳ ಮೇಲೆ ಪ್ರಯೋಗ ಮಾಡುವುದರ ಮೂಲಕ ವಿಜ್ಞಾನದ ಬಗೆಗಿನ ತಮ್ಮ ಅರಿವು ಹೆಚ್ಚಿಸಿಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.