ಇಂದಿನಿಂದ ಪಿಯು ಪರೀಕ್ಷೆ
ಮೈಸೂರು: ಜಿಲ್ಲೆಯಲ್ಲಿ ಪಿಯು ಪರೀಕ್ಷಾ ಜ್ವರ ಹೆಚ್ಚಿದೆ. ಮಾ.12 ರಿಂದ 27 ರವರೆಗೆ ಒಟ್ಟು 46 ಪರೀಕ್ಷಾ ಕೇಂದ್ರಗಳಲ್ಲಿ 33,802 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆಯುವರು.
ಹನ್ನೆರಡನೆ ಸ್ಥಾನದಲ್ಲಿರುವ ಮೈಸೂರು ಜಿಲ್ಲೆಯನ್ನು ಮೊದಲ ಹತ್ತು ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊಂದಿದೆ. ಈ ನಿಟ್ಟಿನಲ್ಲಿ ಡಿಡಿಪಿಯು ಕೆ.ಎಂ. ಪುಟ್ಟು ಅವರು ವಿವಿಧ ಹಂತದಲ್ಲಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದಾರೆ.
ನಗರದ ಮಹಾರಾಜ ಕಾಲೇಜು, ಮಹಾರಾಣಿ, ಸದ್ವಿದ್ಯಾ, ಮರಿಮಲ್ಲಪ್ಪ, ಟೆರೇಸಿಯನ್, ಲಕ್ಷ್ಮಿ ಹಯಗ್ರಿವ, ಸರ್ಕಾರಿ ವಿಭಜಿತ ಮಹಾರಾಜ ಕಾಲೇಜು, ಪೀಪಲ್ಸ್ ಪಾರ್ಕ್ ಸೇರಿದಂತೆ 25 ಕೇಂದ್ರಗಳಲ್ಲಿ ಪರೀಕ್ಷೆ ನಡೆದರೆ, ಕೆ.ಆರ್. ನಗರ ತಾಲೂಕಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತ್ತು ಸಾಲಿಗ್ರಾಮ, ಹುಣಸೂರಿನ ಸೇಂಟ್ ಥಾಮಸ್ ಕಾಲೇಜು ಸೇರಿ 2, ಪಿರಿಯಾಪಟ್ಟಣದ ಬೆಟ್ಟದಪುರ ಪಿಯು ಕಾಲೇಜು ಸೇರಿ 3, ಎಚ್.ಡಿ. ಕೋಟೆಯ ಶ್ರೀ ಆದಿಚುಂಚನಗಿರಿ ಕಾಲೇಜು ಸೇರಿ 3, ನಂಜನಗೂಡು ಸಿಟಿಜನ್ ಕಾಲೇಜು ಮತ್ತು ಜೆಎಸ್ಎಸ್ ಕಾಲೇಜು ಸೇರಿ 4, ಟಿ. ನರಸೀಪುರದ ವಿದ್ಯೋದಯ ಕಾಲೇಜು ಸೇರಿ 3 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಪರೀಕ್ಷೆ ಬರೆಯುವವರ ಸಂಖ್ಯೆ 3,504ಕ್ಕೆ ಏರಿಕೆಯಾಗಿದೆ. ಒಟ್ಟು 33,802 ಮಂದಿಯ ಪೈಕಿ 17,228 ಬಾಲಕರು ಮತ್ತು 16,574 ಬಾಲಕಿಯರು ಪರೀಕ್ಷೆ ಎದುರಿಸುತ್ತಿದ್ದು, 27,304 ಮಂದಿ ಹೊಸಬರು ಮತ್ತು 4,571 ಮಂದಿ ಪುನರಾವರ್ತಿತ ಹಾಗೂ 1,927 ಖಾಸಗಿ ವಿದ್ಯಾರ್ಥಿಗಳಾಗಿ ಪರೀಕ್ಷೆ ಬರೆಯುವರು.
ಪರೀಕ್ಷಾ ಕೇಂದ್ರದ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿ ಬಿಟ್ಟು ಇತರರು ಓಡಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಡಿಡಿಪಿಯು ನೇತೃತ್ವದಲ್ಲಿ ವಿಚಕ್ಷಣಾ ದಳಗಳು ನಗರ ಹಾಗೂ ಗ್ರಾಮೀಣ ಭಾಗದ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಿವೆ.
ಪರೀಕ್ಷಾ ವಿವರ
ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ
ಭೌತಶಾಸ್ತ್ರ, ಮನಶಾಸ್ತ್ರ
ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ(ಮಧ್ಯಾಹ್ನ 2 ರಿಂದ ಸಂಜೆ 5.15)
ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಗಣಿತಶಾಸ್ತ್ರ, ಭೂಗೋಳಶಾಸ್ತ್ರ
ಐಚ್ಛಿಕ ಕನ್ನಡ, ಗೃಹ ವಿಜ್ಞಾನ, ಮೂಲ ಗಣಿತ
ರಸಾಯನಶಾಸ್ತ್ರ, ವ್ಯವಹಾರ ಅಧ್ಯಯನ
ತರ್ಕಶಾಸ್ತ್ರ, ಶಿಕ್ಷಣ
ಇತಿಹಾಸ, ಗಣಕ ವಿಜ್ಞಾನ
ಕನ್ನಡ, ತಮಿಳು, ಮಲೆಯಾಳಂ, ಅರೇಬಿಯನ್, ಫ್ರೆಂಚ್,
ಮರಾಠಿ, ಉರ್ದು, ಸಂಸ್ಕೃತ
ಇಂಗ್ಲಿಷ್
ಹಿಂದಿ, ಇಂಗ್ಲಿಷ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

