ಸುತ್ತೂರು ಶ್ರೀಗಳ ಸಂತಾಪ
ಮೈಸೂರು: ಮಂತ್ರಾಲಯದ ಯತಿಗಳಾಗಿದ್ದ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳ ನಿಧನಕ್ಕೆ ಸುತ್ತೂರು ವೀರಸಿಂಹಾಸನ ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳವರು 2006 ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡರು. ಅವರು ಬಹುತೇಕ ಎಲ್ಲ ಲೌಖಿಕ ವ್ಯವಹಾರಗಳಿಂದಲೂ ದೂರವಿದ್ದು ಜಪತಪ ಅನುಷ್ಠಾನಗಳಲ್ಲಿ ನಿರಂತರಾಗಿ ಶ್ರೀಮಠದ ಸತ್ಸಂಪ್ರದಾಯವನ್ನು ಪಾಲಿಸುತ್ತ ಬಂದಿದ್ದರು. 2009 ರಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಸಂಪೂರ್ಣವಾಗಿ ನಾಶವಾಗಿದ್ದ ಮಂತ್ರಾಲಯವನ್ನು ಒಂದು ವರ್ಷದೊಳಗೆ ಪುನರ್ನಿರ್ಮಾಣ ಮಾಡಿದ ಕರ್ತೃತ್ವಶಾಲಿಗಳು. ಅವರಿಗೆ ಅನಾರೋಗ್ಯವಾದ ಕೂಡಲೇ ಮಠದ ಆಡಳಿತವನ್ನು ಅವರ ಉತ್ತರಾಧಿಕಾರಿಗಳಿಗೆ ನೀಡಿದ ಶ್ರೀಗಳು ಪದ್ಮಪತ್ರಮಿವಾಂಭಸ ಎಂಬ ರೀತಿಯಲ್ಲಿ ತುಂಬು ಜೀವನ ನಡೆಸಿದ ತತ್ವವೆತ್ತರು. ಶ್ರೀಗಳವರ ಅಗಲಿಕೆಯಿಂದ ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಒಂದು ರೀತಿಯ ನಿರ್ವಾತ ಉಂಟಾಗಿದೆ ಶ್ರೀಮಠದ ಭಕ್ತರು ದಿಗ್ಮೂಢರಾಗಿದ್ದಾರೆ. ಶ್ರೀಗಳವರ ಆತ್ಮಕ್ಕೆ ಚಿರಶಾಂತಿಯನ್ನು, ಶ್ರೀಮಠದ ಅಪಾರ ಭಕ್ತವೃಂದಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಆಶಿಸುತ್ತೇಗೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

