ಮೈಸೂರು

ಪೌಷ್ಟಿಕ ಆಹಾರದಿಂದ ಆರೋಗ್ಯ

Published On :

ಮೈಸೂರು: ನಮ್ಮ ಆರೋಗ್ಯ ಚೆನ್ನಾಗಿರ ಬೇಕಾದರೆ ಪೌಷ್ಟಿಕ ಆಹಾರ ಸೇವನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಪಿ.ಎಸ್. ಸುಧಾ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ನಡೆದ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆಲ್ಲ ಪೌಷ್ಟಿಕ ಆಹಾರ ಎಷ್ಟೊಂದು ಉಪಯುಕ್ತ, ತಾಯಿಯಿಂದ ಮಗುವಿಗೆ ಸಿಗುವಂತಹ ಪೌಷ್ಟಿಕ ಆಹಾರದ ಸಿಗುತ್ತದೆ. ರಾಗಿ, ಜೋಳ, ಗೋಧಿ ಇಂತಹ ಧಾನ್ಯಗಳು ಆರೋಗ್ಯಕ್ಕೆ ಬಹುಮುಖ್ಯ. ರಾಗಿ ಜೊತೆಗೆ ಸಜ್ಜೆ, ನವಣೆ ಎಲ್ಲವನ್ನು ಮಿಶ್ರಣ ಮಾಡಿ ಮಕ್ಕಳಿಗೆ ಕೊಟ್ಟರೆ ಆರೋಗ್ಯಕ್ಕೆ ಉಪಯುಕ್ತ ಎಂದು ತಿಳಿಸಿದರು.
ಸಿಎಫ್‌ಟಿಆರ್‌ಐನ ಹಿರಿಯ ವಿಜ್ಞಾನಿ ಡಾ. ಜ್ಯೋತಿಲಕ್ಷ್ಮಿ ಮಾತನಾಡಿ, ಪ್ರತಿ ಗೃಹಿಣಿಯು ಆಹಾರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿರಬೇಕು. ನಮ್ಮ ದೇಹದ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅತಿ ಮುಖ್ಯ. ತರಕಾರಿ ಮತ್ತು ಹಣ್ಣಗಳಲ್ಲಿ ಎಲ್ಲ ರೀತಿಯ ಪ್ರೋಟಿನ್ ವಿಟಮಿನ್‌ಗಳು ಇರುತ್ತದೆ. ನಮ್ಮ ದೇಹದಲ್ಲಿ ಕಬ್ಬಿಣದ ಅಂಶ ಕೊರತೆ ಇರುವುದರಿಂದ ಇದಕ್ಕೆ ಸಂಬಂಧಿಸಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ರಕ್ತ ಹೀನತೆಯ ಬಗ್ಗೆ ಎಲ್ಲರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಜೈನ ಮಹಿಳಾ ಸಮಾಜದ ಕಾರ್ಯದರ್ಶಿ ಲತಾ ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಗ್ರಂಥಾಲಯ ಉದ್ಘಾಟಿಸಿ, ಜ್ಞಾನವಿಕಾಸ ಕೇಂದ್ರಕ್ಕೆ ಗ್ರಂಥಾಲಯ ಕಲ್ಪಿಸಿಕೊಡಲಾಗಿದೆ. ಸುಮಾರು 150 ಪುಸ್ತಕಗಳು ಈ ಗ್ರಂಥಾಲಯದಲ್ಲಿ ಇರುತ್ತದೆ. ತಾಲೂಕಿನ 25 ಕೇಂದ್ರಗಳಿಗೆ 3,750 ಪುಸ್ತಕ ವಿತರಿಸಿದ್ದು, ಎಲ್ಲ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಯೋಜನಾಧಿಕಾರಿ ಎಂ. ಚೇತನ ಮುಖ್ಯ ಅತಿಥಿಯಾಗಿದ್ದರು. ಒಕ್ಕೂಟದ ಅಧ್ಯಕ್ಷೆ ಶುಭಮಂಗಳ, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು. ಸುಮಾರು 270 ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸದಸ್ಯರು ಪ್ರದರ್ಶಿಸಿದರು. ಸ್ಥಳೀಯವಾಗಿ ಸಿಗುವ ಹೂಗಳಿಂದ ರಚಿಸಿದ 50ಕ್ಕೂ ಹೆಚ್ಚು ಪುಷ್ಪಗುಚ್ಛ ಪ್ರದರ್ಶನ ನಡೆಸಲಾಯಿತು.
ವಲಯದ ಮೇಲ್ವಿಚಾರಕ ಸಂತೋಷ್ ಪೂಜಾರಿ ನಿರೂಪಿಸಿದರು. ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಂಗೀತಾ ಸ್ವಾಗತಿಸಿದರು. ಆಂತರಿಕ ಲೆಕ್ಕ ಪರಿಶೋಧಕಿ ಶೋಭಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.